BIG 3: ಶಿಕ್ಷಣದ ಕ್ರಾಂತಿ, ಬಡವರ ಸೇವೆ ಹಾಗೂ ಬಿಸಿಲು ಮ್ಯಾನ್: ಇಲ್ಲಿದ್ದಾರೆ ರಿಯಲ್ ಹೀರೋಗಳು

ಬೆಂಗಳೂರಿನ ಬಿಸಿಲು ಮ್ಯಾನ್‌ ಎಂದೇ ಕರೆಯಲ್ಪಡುವ ಇಂದ್ರೇಶ್‌ ಕುಮಾರ್‌, ಬಹಳ ಕಡಿಮೆ ದರದಲ್ಲಿ ಲಿವರ್‌ ಕಸಿ ಮಾಡಿ ಬಡವರ ಸೇವೆ ಮಾಡುವ  ಡಾ. ನಾಗೇಶ್ ಹಾಗೂ ಕನಸು ಗ್ರಂಥಾಲಯ ಶುರುಮಾಡಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಪೊಲೀಸ್ ಅಧಿಕಾರಿ ಪ್ರಕಾಶ್‌ ಬಣಕಾರ್ ಈ ವಾರದ ಬಿಗ್‌ 3 ಹೀರೋಗಳು

Share this Video
  • FB
  • Linkdin
  • Whatsapp

ಬೆಂಗಳೂರಿನ ಶ್ರೀನಗರದ ನಿವಾಸಿ ಇಂದ್ರೇಶ್‌, ಬರಿಗಣ್ಣಿನಿಂದ ದಿನಪೂರ್ತಿ ಸೂರ್ಯನನ್ನು ನೋಡುತ್ತಾರೆ. ಸೂರ್ಯನನ್ನ ನಡು ಬಿಸಿಲಿನಲ್ಲೂ ನೋಡುವ ಇಂದ್ರೇಶ್ ಸಾಧನೆ ಎಲ್ಲರು ಬೆಚ್ಚುವಂತದ್ದು. ಇನ್ನು ಡಾ. ನಾಗೇಶ್ ವಿಕ್ಟೋರಿಯಾ ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡ್ರೆ ಕೇವಲ 1ಲಕ್ಷದಲ್ಲಿ ಚಿಕಿತ್ಸೆ ಮುಗಿದೇ ಹೋಗುತ್ತೆ. ಇನ್ನು ಬಿಪಿಎಲ್ ಕಾರ್ಡ್'ದಾರರು ಕೇವಲ 25 ಸಾವಿರ ಹಾಗೂ ಎಸ್ ಸಿ/ಎಸ್ಟಿ ಸಮುದಾಯಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತೆ. ಇದಕ್ಕೆ ಕಾರಣ ಡಾ. ನಾಗೇಶ್. ಅದಕ್ಕೆ ಅವರು ಬಡವರ ಡಾಕ್ಟರ್ ಅನ್ನಿಸಿಕೊಂಡಿದ್ದಾರೆ. ಇನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಾಗರಮಡುವು ಗ್ರಾಮದಲ್ಲಿ ಅಲ್ಲಿ ಶಿಕ್ಷಣದ ಕ್ರಾಂತಿ ಆರಂಭವಾಗಿದೆ. ಇದಕ್ಕೆ ಕಾರಣ ಪಿಎಸ್ಐ ಪ್ರಕಾಶ್ ಬಣಕಾರ್. ಅವರು ಇದೇ ಗ್ರಾಮದಲ್ಲಿ ಓದಿ ಈಗ ಬೆಟಗೇರಿ ಪೊಲೀಸ್ ಸ್ಟೇಷನ್ ಪಿಎಸ್ಐ ಆಗಿದಾರೆ. ತಮ್ಮದೇ ಸ್ನೇಹಿತರ ಬಳಗ ಕಟ್ಕೊಂಡು 2019 ರಲ್ಲಿ ಕನಸು ಅನ್ನೋ ಲೈಬ್ರರಿ ಆರಂಭಿಸಿದ್ದಾರೆ. ಸಿಟಿಯಲ್ಲಿ ಸಿಗದ ಅಪರೂಪದ ಪುಸ್ತಕಗಳು ಇಲ್ಲಿ ಸಿಗುತ್ತವೆ.

ಸ್ಯಾಂಟ್ರೋ ರವಿ ಸಿಗಲು ಮೊದಲ ಪತ್ನಿ ಕಾರಣ: ಇಲ್ಲಿದೆ ಬಂಧನದ ರೋಚಕ ಕಥೆ

Related Video