CT Ravi Interview: ಹಿಂದುತ್ವ ವಾದಿಗಳನ್ನು ಬಿಜೆಪಿ ದೂರ ಇಟ್ಟಿರೋದ್ಯಾಕೆ? ರಾಜ್ಯ ಬಿಜೆಪಿಯಲ್ಲಿ BSY ಫ್ಯಾಮಿಲಿ ರಾಜಕೀಯ..?

ಮೋದಿ ಅಲೆ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಸಿ ಟಿ ರವಿ ಅವರು, ಮೋದಿ ಅಲೆ ಎಂದರೆ ಬರೀ ಅವರ ಮುಖ ನೋಡಿ ಮತ ಹಾಕುವುದಲ್ಲ, ಬದಲಾಗಿ ಅವರ ಯೋಜನೆಗಳನ್ನು ನೋಡಿ ಮತಹಾಕುವುದೇ ಆಗಿದೆ. ಅದರಂತೆ ಈ ಬಾರಿ ನಾವು ಕರ್ನಾಟಕದಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದಿದ್ದಾರೆ. 

First Published Apr 21, 2024, 1:25 PM IST | Last Updated Apr 21, 2024, 1:25 PM IST

ಲೋಕಸಭಾ ಚುನಾವಣೆ ಹಿನ್ನೆಲೆ ಮಾಜಿ ಶಾಸಕ ಸಿ ಟಿ ರವಿ(CT Ravi) ಅವರು ಈ ಬಾರಿಯ ಚುನಾವಣೆಯನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಈ ನಡುವೆ ಮೋದಿ ಅಲೆ ಬಗ್ಗೆ ಉಲ್ಲೇಖ ಮಾಡಿದ್ದು, ಮೋದಿ(Narendra Modi) ಅಲೆ ಎಂದರೆ ಬರೀ ಅವರ ಮುಖ ನೋಡಿ ಮತ ಹಾಕುವುದಲ್ಲ, ಬದಲಾಗಿ ಅವರ ಯೋಜನೆಗಳನ್ನು ನೋಡಿ ಮತಹಾಕುವುದೇ ಆಗಿದೆ. ಮೋದಿ ಅವರ ಬಗ್ಗೆ ಜನರಿಗೆ ಭರವಸೆ ಇದೆ. ಈ ಅಲೆ ಸುಮ್ಮನೆ ಬರುತ್ತದೆಯೇ ಎಂದು ಪ್ರಶ್ನಿಸಿದ ಅವರು, ಕರ್ನಾಟಕದಲ್ಲಿ(Karnataka) 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸ ಹೊರಹಾಕಿದ್ದಾರೆ. ಅದರಂತೆ ಯಾರೇ ಆದರೂ ಹೆಣ್ಣು ಕೇಳಲು ಹೋದಾಗ ಮೊದಲು ಗಂಡು ಯಾರು ಅನ್ನೋ ನಿರ್ಧಾರ ಮಾಡಲಾಗುತ್ತದೆ. ಆದರೆ ಅವರು ಪಿಎಂ ಅಭ್ಯರ್ಥಿ ಯಾರೂ ಅನ್ನೋದನ್ನೇ ನಿರ್ಧಾರ ಮಾಡದೆ ಮತ ಕೇಳಲು ಹೊರಟಿದ್ದಾರೆ ಎಂದು ಕಾಂಗ್ರೆಸ್‌ (Congress) ಬಗ್ಗೆ ವ್ಯಂಗ್ಯವಾಡಿದರು. ಇನ್ನು ನಿಮಗೆ ಯಾಕೆ ಈ ಬಾರಿ ಟಿಕೆಟ್‌ ನೀಡಲಾಗಿಲ್ಲ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲವು ವಿಷಯಗಳನ್ನು ಕಾಲವೇ ನಿರ್ಧಾರ ಮಾಡುತ್ತದೆ ಎಂದರು.

ಇದನ್ನೂ ವೀಕ್ಷಿಸಿ:  Love Jihad: ಶಾಕಿಂಗ್‌ ! ಲವ್ ಜಿಹಾದ್‌ನ ಮತ್ತೊಂದು ಕರಾಳ ಮುಖ ಅನಾವರಣ: ಖಾಸಗಿ ಫೋಟೋ ಇಟ್ಟುಕೊಂಡು ಬ್ಲ್ಯಾಕ್‌ ಮೇಲ್‌!

Video Top Stories