ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ನೀವು ಏನ್ ಹೇಳ್ತೀರಾ? ಆರ್‌. ಅಶೋಕ್‌ ಅಡ್ಜಸ್ಟ್ಮೆಂಟ್ ರಾಜಕಾರಣಿನಾ ?

ಬಿಜೆಪಿಯ ವಿಪಕ್ಷ ನಾಯಕ ಆರ್‌.ಅಶೋಕ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ..

First Published Dec 3, 2023, 10:54 AM IST | Last Updated Dec 3, 2023, 10:54 AM IST

ಜೆಡಿಎಸ್‌ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರಿಂದ ಒಕ್ಕಲಿಗ ನಾಯಕರನ್ನು ವಿಪಕ್ಷ ನಾಯಕನಾಗಿ ಮಾಡುವುದಿಲ್ಲ ಎಂದು ಹೇಳಲಾಗುತ್ತಿತ್ತು. ಇದೀಗ ಒಕ್ಕಲಿಗ ನಾಯಕನಿಗೆ ಪ್ರತಿಪಕ್ಷ ನಾಯಕನ(Leader of the Opposition) ಸ್ಥಾನ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಆರ್‌.ಅಶೋಕ್‌, ನನ್ನನ್ನು ಜಾತಿ ಆಧಾರದಲ್ಲಿ ವಿಪಕ್ಷ ನಾಯಕನಾಗಿ ಮಾಡಿಲ್ಲ. ಒಂದೇ ಪಾರ್ಟಿಯಲ್ಲಿ ಏಳು ಬಾರೀ ಆಯ್ಕೆ ಆಗಿದ್ದರಿಂದ ನೇಮಕ ಮಾಡಲಾಗಿದೆ ಎಂದು ಹೇಳಿದರು. ಕಾಂಗ್ರೆಸ್‌(Congress) ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ತಪ್ಪು ಹೆಜ್ಜೆಗಳನ್ನು ಇಡುತ್ತಾ ಬಂದಿದೆ. ಡಿಕೆ ಶಿವಕುಮಾರ್‌(DK Shivakumar) ಅವರ ಕೇಸನ್ನು ಕ್ಯಾಬಿನೆಟ್‌ನಲ್ಲಿ ವಾಪಸ್‌ ಪಡೆಯಲಾಗಿದೆ. ಆದ್ರೆ ಈ ರೀತಿ ಕಾನೂನಿನ ಪ್ರಕಾರ ಮಾಡಲಾಗುವುದಿಲ್ಲ. ಇವರು ಕೋರ್ಟ್‌ಗೆ ಗೌರವವನ್ನು ಕೊಟ್ಟಿಲ್ಲ. ಜನಕ್ಕೆ ಏನಾದ್ರೂ ಒಳ್ಳೆಯದು ಆಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಆರ್‌.ಅಶೋಕ್‌(R Ashoka) ಹೇಳಿದರು.  

ಇದನ್ನೂ ವೀಕ್ಷಿಸಿ:  ಪಂಚ ರಾಜ್ಯ ಚುನಾವಣಾ ಫಲಿತಾಂಶ ಕುತೂಹಲ, ನಿಜವಾಗುತ್ತಾ ಮತಗಟ್ಟೆ ಸಮೀಕ್ಷೆ ವರದಿ?

Video Top Stories