ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಮುರುಡೇಶ್ವರದ ನೇತ್ರಾಣಿ ದ್ವೀಪ..

ಮುರುಡೇಶ್ವರದ ದ್ವೀಪಗಳಲ್ಲಿ ಒಂದಾದ ನೇತ್ರಾಣಿ ದ್ವೀಪ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Share this Video
  • FB
  • Linkdin
  • Whatsapp

ನೇತ್ರಾಣಿ ಕರ್ನಾಟಕದ ಸ್ಕೂಬಾ ಡೈವಿಂಗ್ ತಾಣವಾಗಿ ಜನಪ್ರಿಯವಾಗಿರುವ ಮುರುಡೇಶ್ವರದ ದ್ವೀಪಗಳಲ್ಲಿ ಒಂದಾಗಿದೆ ಇದು ಸದ್ಯ ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಅಧಿಕೃತ ಮಾನ್ಯತೆ ಹೊಂದಿದೆ. ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.ಕರ್ನಾಟಕದ ಅದ್ಭುತಗಳೆಂದರೆ ಬರೀ ನೆಲದ ಮೇಲಿನ ಅದ್ಭುತಗಳಷ್ಟೇ ಅಲ್ಲ, ಕರ್ನಾಟಕದ ಪಶ್ಚಿಮ ದಿಕ್ಕಿನಲ್ಲಿರುವ ಅರಬ್ಬಿ ಸಮುದ್ರದ ಕಡಲಗರ್ಭವೂ ಕೂಡ ಅದ್ಭುತವೇ. ಉತ್ತರ ಕನ್ನಡ ಜಿಲ್ಲೆಯ ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಾಗೂ ತೀರ್ಥಕ್ಷೇತ್ರ ಮುರುಡೇಶ್ವರ ಬಳಿ ಇರುವ ನೇತ್ರಾಣಿ ದ್ವೀಪ ಪ್ರೀತಿಯ ಸಂಕೇತದಂತೆ ಹೃದಯಾಕಾರದಲ್ಲಿದೆ. ಈ ದ್ವೀಪದ ಸುತ್ತ ಇರುವ ಸಮುದ್ರ ಗರ್ಭ ಎಷ್ಟು ಅದ್ಭುತವಾಗಿದೆಯೆಂದರೆ, ನೀರಿನಾಳಕ್ಕೆ ಮುಳುಗುವ 'ಸ್ಕೂಬಾ ಡೈವಿಂಗ್' ಮಾಡಲು ಭಾರತದಲ್ಲಿ ನೇತ್ರಾಣಿ ದ್ವೀಪ ಎರಡನೇ ಅತ್ಯುತ್ತಮ ಪ್ರದೇಶ. ಒಂದನೇ ಅತ್ಯುತ್ತಮ ಪ್ರದೇಶ ದೇಶದ ಪೂರ್ವ ದಿಕ್ಕಿನಲ್ಲಿರುವ ಬಂಗಾಳಕೊಲ್ಲಿಯ ಅಂಡಮಾನ್‌ ದ್ವೀಪ, ನೇತ್ರಾಣಿ ದ್ವೀಪದ ಕಡಲ ಗರ್ಭದಲ್ಲಿ ಆರೋಗ್ಯಕರ ಹವಳದ ಬಂಡೆಗಳಿವೆ. 

Related Video