ದಿನಾ ಆಹಾರ ತಿನ್ನಿಸುತ್ತಿದ್ದ ವ್ಯಕ್ತಿಯ ಹಣೆಗೆ ಮುತ್ತಿಟ್ಟು ವಿದಾಯ ಹೇಳಿದ ಕೋತಿ

ಪ್ರಾಣಿಗಳಿಗೆ ಭಾಯಿ ಬರಲ್ಲ ಆದರೆ ಎಲ್ಲವೂ ಅರ್ಥವಾಗುತ್ತೆ. ಸ್ಪಲ್ಪ ಪ್ರೀತಿ ನೀಡಿದರೂ ಅವು ಜೀವನ ಪರ್ಯಂತೆ ಋಣಿಯಾಗಿರುತ್ತವೆ. ಅದು ನಿಜ ಅನ್ನೋದನ್ನು ಇಲ್ಲೊಂದು ಘಟನೆ ಸಾಬೀತುಪಡಿಸಿದೆ. ಅದೇನು ಅನ್ನೋ ಮಾಹಿತಿ ಇಲ್ಲಿದೆ.

Share this Video
  • FB
  • Linkdin
  • Whatsapp

ವ್ಯಕ್ತಿಯೊಬ್ಬನ ಅಂತ್ಯಕ್ರಿಯೆಯಲ್ಲಿ ಕೋತಿ (Monkey)ಯೊಂದು ಭಾಗವಹಿಸಿದ ಘಟನೆ ಶ್ರೀಲಂಕಾದ ಬ್ಯಾಟಿಕಲೋವಾ ನಡೆದಿದೆ. ಮೃತಪಟ್ಟ ವ್ಯಕ್ತಿ ನಿಯಮಿತವಾಗಿ ಕೋತಿಗೆ ಆಹಾರ (Food) ತಿನ್ನಿಸುತ್ತಿದ್ದ ಎಂದು ತಿಳಿದುಬಂದಿದೆ. ಹೀಗಿದ್ದೂ ಕೋತಿ, ವ್ಯಕ್ತಿ ಮೃತಪಟ್ಟ ನಂತರವೂ ಅವರ ನೆನಪನ್ನು ಇಟ್ಟುಕೊಂಡಿದೆ. ಅಂತಿಮದರ್ಶನಕ್ಕಿಟ್ಟ (Funeral) ಸ್ಥಳಕ್ಕೆ ಬಂದು ವ್ಯಕ್ತಿಯ ಮುಖವನ್ನೇ ನೋಡುತ್ತಿತ್ತು. ಮುಖವನ್ನು ಸವರುವ ದೃಶ್ಯ ತುಂಬಾ ಭಾವುಕವಾಗಿತ್ತು. ವ್ಯಕ್ತಿಯ ಹಣೆಗೂ ಮುತ್ತಿಕ್ಕಿದ ಕೋತಿ ಆತನ ಕೈಯನ್ನು ಎಳೆದು ಎಬ್ಬಿಸಲು ಯತ್ನಿಸಿದ ದೃಶ್ಯ ಎಂಥವರ ಕಣ್ಣಲ್ಲೂ ನೀರು ತರುವಂತಿತ್ತು. 

Kolar: ಕುಚಿಕು ಫ್ರೆಂಡ್ಸ್‌ಗಳಾದ ಕೋತಿ, ನಾಯಿ ಹಾಗೂ ಬೆಕ್ಕು!

Related Video