Asianet Suvarna News Asianet Suvarna News

Kolar: ಕುಚಿಕು ಫ್ರೆಂಡ್ಸ್‌ಗಳಾದ ಕೋತಿ, ನಾಯಿ ಹಾಗೂ ಬೆಕ್ಕು!

ಅವು ತಮ್ಮ ಆಹಾರ ಸ್ಥರದಲ್ಲಿ ಒಂದಕ್ಕೊಂದು ಬದ್ದ ವೈರಿಗಳು, ಒಂದನ್ನೊಂದು ನೋಡಿದ್ರೆ ಸಾಕು ಕಚ್ಚಿ ಕೊಲ್ಲುವಷ್ಟು ದ್ವೇಷ. ಆದ್ರೆ ಇಲ್ಲೊಂದು ವಿಚಿತ್ರವಾದ್ರು ಸತ್ಯ ಎಂಬಂತೆ ಪ್ರಾಣಿಗಳಾದ್ರು ಒಂದಕ್ಕೊಂದು ಅನ್ಯೋನ್ಯವಾಗಿ ಜೀವನ ನಡೆಸುತ್ತಿವೆ. 

friendship story of monkey cat and dog is more beautiful at kolar gvd
Author
Bangalore, First Published Aug 19, 2022, 5:00 AM IST

ವರದಿ: ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೋಲಾರ

ಕೋಲಾರ (ಆ.19): ಅವು ತಮ್ಮ ಆಹಾರ ಸ್ಥರದಲ್ಲಿ ಒಂದಕ್ಕೊಂದು ಬದ್ದ ವೈರಿಗಳು, ಒಂದನ್ನೊಂದು ನೋಡಿದ್ರೆ ಸಾಕು ಕಚ್ಚಿ ಕೊಲ್ಲುವಷ್ಟು ದ್ವೇಷ. ಆದ್ರೆ ಇಲ್ಲೊಂದು ವಿಚಿತ್ರವಾದ್ರು ಸತ್ಯ ಎಂಬಂತೆ ಪ್ರಾಣಿಗಳಾದ್ರು ಒಂದಕ್ಕೊಂದು ಅನ್ಯೋನ್ಯವಾಗಿ ಜೀವನ ನಡೆಸುತ್ತಿವೆ. ಪ್ರಾಣಿಗಳೇ ಗುಣದಲ್ಲಿ ಮೇಲು ಮಾನವನದಕ್ಕಿಂತ ಕೀಳು ಅನ್ನೋ ಮಾತಿನಂತೆ ಒಂದಕ್ಕೊಂದು ಸ್ನೇಹಿತರಂತೆ ಜೀವಿಸುತ್ತಿರುವ ಕುಚಿಕು‌ ಫ್ರೆಂಡ್ಸ್‌ಗಳ ಕುರಿತ ಸ್ಟೋರಿ ಇಲ್ಲಿದೆ ನೋಡಿ.

ಹೌದು! ಪ್ರಾಣಿಗಳು ಹಾಗೂ ಅವುಗಳ ಆಹಾರ ಪದ್ದತಿಗಳು ಒಂದಕ್ಕೊಂದು ಭಿನ್ನ ವಿಭಿನ್ನವಾಗಿದೆ, ಹಾಗಾಗಿ ಒಂದು ಪ್ರಾಣಿಯನ್ನ ನೋಡಿದ್ರೆ ಮತ್ತೊಂದು ಪ್ರಾಣಿಗೆ ಆಗಲ್ಲ, ಅದು ಮನುಷ್ಯನಿಗೂ ಅನ್ವಯಿಸುತ್ತೆ. ಯಾಕಂದ್ರೆ ಹುಟ್ಟಿದ ಮನೆಯಲ್ಲೆ ಅಣ್ಣ ತಮ್ಮಂದಿರೇ ಜಗಳವಾಡುತ್ತಾ ಹೆತ್ತವರನ್ನೇ ಮನೆಯಿಂದ ಹೊರಹಾಕುವ ಇಂದಿನ ಕಲಿಯುಗದಲ್ಲಿ ಇಲ್ಲೊಂದು ವಿಚಿತ್ರವಾದ ಕಥೆ ಆರಂಭವಾಗಿದೆ. ಒಂದು ಕೋತಿ, ಮತ್ತೊಂದು ನಾಯಿ, ಇನ್ನೊಂದು ಬೆಕ್ಕು ಇವು ಒಂದಕ್ಕೊಂದು ಕ್ಲೋಸ್ ಫ್ರೆಂಡ್ಸ್. ಒಂದನ್ನು ಮತ್ತೊಂದು ಬಿಟ್ಟಿರೋಲ್ಲ, ಬೆಕ್ಕು ಹೊರ ಬಂದರೆ ಕೋತಿಯೂ ಹೊರಬರುತ್ತೆ, ನಾಯಿಗೆ ಹಾಕಿದ ಊಟವನ್ನ ಕೋತಿ ಎಲ್ಲವೂ ಸೇರಿ ತಿನ್ನುತ್ತವೆ. 

ಆಡಿಯೋ ವೈರಲ್: ಮಾಧುಸ್ವಾಮಿ ರಾಜೀನಾಮೆ ಕೊಡಲಿ ಎಂದ ಸ್ವಪಕ್ಷದ ನಾಯಕ

ಬೆಕ್ಕಿಗೆ ಪಕ್ಕದಲ್ಲೆ ಊಟ ಹಾಕಬೇಕು, ಮುಂಜಾನೆಯ ಆರಂಭದಿಂದ ಸಂಜೆ ಕಳೆದು ಕತ್ತಲು ಆವರಿಸಿದರೂ ಇವು ಒಂದನ್ನೊಂದು ಬಿಟ್ಟು ಇರೋಲ್ಲ. ಅಷ್ಟೊಂದು ಗಾಢವಾದ ಸ್ನೇಹ ಈ ಮೂರು ಪ್ರಾಣಿಗಳ ನಡುವೆ ಇದೆ, ಇದೊಂದು ವಿಚಿತ್ರ ಅಂದ್ರು ಇದು ಸತ್ಯ. ಯಾಕಂದ್ರೆ ಈ ವಿಚಿತ್ರ, ವಿಭಿನ್ನ ಪ್ರಾಣಿಗಳಿರೋದು ಕೋಲಾರ ತಾಲ್ಲೂಕಿನ ಹೊಮಟ್ನಹಳ್ಳಿಯ ಶ್ರೀನಿವಾಗೌಡ ಎಂಬುವವರ ಮನೆಯಲ್ಲಿ. ನಾಯಿ ಮತ್ತು ಬೆಕ್ಕು ಸಾಮಾನ್ಯವಾಗಿ ಒಂದಕ್ಕೊಂದು ಹೊಂದಿಕೊಳ್ಳದ ಸ್ವಭಾವದ ಪ್ರಾಣಿಗಳು. ಆದ್ರೆ ಇಲ್ಲಿ ಅವೂ ಕೂಡ ಪ್ರೀತಿ ಹಂಚಿಕೊಳ್ಳುವ ದೃಶ್ಯಗಳು ಕಾಣಬಹುದಾಗಿದೆ. 

ಇವರೆಡರ ಮಧ್ಯೆ ಬಾಂಧವ್ಯವನ್ನು ಬೆಸೆದ ಕೋತಿ ಮರಿ ಇಡೀ ಮನೆಯಲ್ಲಿ ಕೀಟಲೆ ಮಾಡಿಕೊಂಡು ತನ್ನಿಬ್ಬರು ಸ್ನೇಹಿತರೊಂದಿಗೆ ಆಟವಾಡುತ್ತಾ ತಮ್ಮ ಮನೆಯ ಮಾಲೀಕರಿಗೆ ಪ್ರೀತಿ ಕೊಡುವ ಮುದ್ದಿನ ಸ್ನೇಹಿತರಾಗಿದ್ದಾರೆ. ಇನ್ನೂ ರೈತ ಶ್ರೀನಿವಾಸಗೌಡ ಮನೆಯಲ್ಲಿ ಮೊದಲಿನಿಂದಲೂ ಪ್ರಾಣಿ ಪ್ರೀತಿ ಹೆಚ್ಚು, ಈ ಕುಟುಂಬದಲ್ಲಿ ಕೃಷಿ ಜೊತೆಗೆ ಕೃಷಿಗೆ ಅನುಕೂಲವಾಗುವ ಹಸು, ಎಮ್ಮೆ, ನಾಯಿ ಸಾಕುವುದು ಅಭ್ಯಾಸ. ಅದರಂತೆ ಕಳೆದ ಒಂದು ವರ್ಷದ ಹಿಂದೆ ಅನಾಥವಾಗಿದ್ದ ಒಂದು ಕೋತಿ ಮರಿ ಹಾಗೂ ಮನೆಯಲ್ಲೆ ಹುಟ್ಟಿದ ಬೆಕ್ಕನ್ನ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. 

ಹಾಗಾಗಿ ಶ್ರೀನಿವಾಸಗೌಡ ಮೂವರು ಸ್ನೇಹಿತರಿಗೂ ಹೆಸರುಗಳನ್ನು ನಾಮಕರಣ ಮಾಡಿದ್ದಾರೆ. ಜಾರ್ಜ್ ಬುಷ್ ಹುಟ್ಟಿದ ದಿನ ಸಿಕ್ಕಿದ ಕೋತಿ ಮರಿಗೆ ಈ ಹೆಸರಿಟ್ರೆ, ನಿಯತ್ತಿಗೆ ಹೆಸರಾದ ನಾಯಿಗೆ ಟ್ರಂಪ್ ಅಧಿಕಾರ ತ್ಯಾಗ ಮಾಡಿದ ದಿನದಲ್ಲಿ ಸಿಕ್ಕ ಹಿನ್ನೆಲೆ ಡೊನಾಲ್ಡ್ ಟ್ರಂಪ್ ಎಂದು ನಾಮಕರಣ ಮಾಡಿದ್ದಾರೆ. ಇನ್ನೂ ಉಳಿದದ್ದು ಬೆಕ್ಕು ಸೈಬಿರಿಯನ್ ಬ್ರೀಡ್ ಕ್ಯಾಟ್, ಇದು ಮನೆಯ ಒಡತಿ. ಅಂದಹಾಗೆ ಇದರ ಹೆಸರು ಗೌಡತಿ ಅಂತ. ಯಾಕಂದ್ರೆ ಕಿರಿಕ್ ಆರಂಭವಾದ್ರೆ ಇದರಿಂದಲೆ ಆರಂಭವಾಗಬೇಕು ಅನ್ನೋ ಕಾರಣಕ್ಕೆ ಗೌಡತಿ ಎಂದು ನಾಮಕರಣ ಮಾಡಲಾಗಿದೆ. 

ಮೋದಿಯಂತಹ ವ್ಯಕ್ತಿಯಿಂದ ದೇಶಕ್ಕೆ ಏನು ಪ್ರಯೋಜನ?: ರಮೇಶ್‌ ಕುಮಾರ್‌

ಈ ಮೂರು ಪ್ರಾಣಿಗಳೊಂದಿಗೆ ಈಗಲೂ ಮನೆಯಲ್ಲಿ ಹಸು, ಕುರಿ, ಮೇಕೆ, ಹೀಗೆ ಹಲವು ಪ್ರಾಣಿಗಳಿವೆ. ಆ ಮನೆ ಮಂದಿಗೆಲ್ಲ ಪ್ರಾಣಿಗಳ ಮೇಲೆ ಆಗಾಧ ಪ್ರೀತಿ ಕೂಡ ಇದೆ. ಅದರಂತೆ ಮನೆಯ ಮಕ್ಕಳಂತೆ ಇವು ಸಹ ಅನ್ಯೋನ್ಯವಾಗಿರುತ್ತದೆ. ಒಟ್ಟಾರೆ ಮನುಷ್ಯನೆ ಇವತ್ತಿನ ದಿನಗಳಲ್ಲಿ ದ್ವೇಷ, ಅಸೂಯೆ, ಮೇಲು-ಕೀಳು ಎಂದು ಪ್ರತಿನಿತ್ಯ ಕಿತ್ತಾಡುತ್ತಾ, ಒಂದೆ ತಾಯಿ ಮಕ್ಕಳು ದ್ವೇಷ ಕಾರುವ ಇವತ್ತಿನ ದಿನಗಳಲ್ಲಿ ಇದೊಂದು ಅಪರೂಪದ ಸ್ನೇಹ ಎನ್ನಬಹುದಾಗಿದೆ. ಇಡೀ ನಾಗರೀಕ ಸಮಾಜವೇ ಅನಾಗರಿಕರಾಗಿರುವ ಇವತ್ತಿನ ದಿನಗಳಲ್ಲಿ ಈ ಮೂಕ ಪ್ರಾಣಿಗಳ ಸ್ನೇಹ ಸಂಬಂಧ ಹಲವರಿಗೆ ಮಾದರಿಯಾಗಿದೆ.

Follow Us:
Download App:
  • android
  • ios