ಕಾಂಗ್ರೆಸ್ ರಚಿಸಿತಾ ರಮ್ಯ ವ್ಯೂಹ.. 2ನೇ ಪಟ್ಟಿಯಲ್ಲಿರುತ್ತಾ ಪದ್ಮಾವತಿ ಹೆಸರು..?

ಸ್ಯಾಂಡಲ್ ವುಡ್ ಕ್ವೀನ್ ,ಮಾಜಿ ಸಂಸದೆ ರಮ್ಯಾ.  ಮಂಡ್ಯ ಜನರ ನೆಚ್ಚಿನ ನಾಯಕಿ ಆಗಿದ್ದರು.  ಈಗ ರಾಜ್ಯ ರಾಜಕಾರಣದಲ್ಲಿ ರಮ್ಯಾ ಹೆಸರು ಮತ್ತೆ ಹೊಸ ಸಂಚಲನವನ್ನೇ ಸೃಷ್ಟಿಸಿದೆ. 

Share this Video
  • FB
  • Linkdin
  • Whatsapp

 ಸ್ಯಾಂಡಲ್ ವುಡ್ ಕ್ವೀನ್ ,ಮಾಜಿ ಸಂಸದೆ ರಮ್ಯಾ. ಮಂಡ್ಯ ಜನರ ನೆಚ್ಚಿನ ನಾಯಕಿ ಆಗಿದ್ದರು. ಈಗ ರಾಜ್ಯ ರಾಜಕಾರಣದಲ್ಲಿ ರಮ್ಯಾ ಹೆಸರು ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಸಂಸದೆಯಾದಾಗ ರಮ್ಯಾ ಸಿನಿಮಾ ರಂಗದಿಂದ ಮರೆಯಾಗಿರಲಿಲ್ಲ.2012ರಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ಸೇರಿ. 2013ರಲ್ಲಿ ಮಂಡ್ಯಾದಲ್ಲಿ ಚುನಾವಣೆಯಲ್ಲಿ ಗೆದ್ದು ಲೋಕಸಭೆ ಪ್ರವೇಶ ಮಾಡಿದರು.2014ರಲ್ಲಿ ಭಾರತದಲ್ಲಿ ಅತಿದೊಡ್ಡ ರಾಜಕೀಯ ಯುದ್ಧ ನಡೆದಿದ್ದು, ರಾಜ್ಯದಲ್ಲೂ ಮೋದಿ ಸುನಾಮಿ ಸೃಷ್ಟಿಯಾಗಿತ್ತು. ಹಾಗಿದ್ದಾಗಲೂ ಮಂಡ್ಯದಲ್ಲಿ ರಮ್ಯಾ ಹವಾ ಜೋರಾಗಿದ್ದು, ಮಂಡ್ಯದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿತ್ತು ರಮ್ಯ, ಜೆಡಿಎಸ್‌ ಸಿ ಎಸ್ ಪುಟ್ಟರಾಜು ವಿರುದ್ಧ ಕೇವಲ 5ವರೆ ಸಾವಿರ ವೋಟುಗಳಿಂದ ಸೋಲ ಬೇಕಾಯ್ತು.ಈಗ ಮತ್ತೆ ರಮ್ಯಾ ಸದ್ದು ಮಾಡುತ್ತಿದ್ದು, ಅದರಲ್ಲೂ ಈ ಚುನಾವಣೆಯಲ್ಲಂತೂ ರಮ್ಯ ಹೆಸರು ಸಂಚಲನವನ್ನೇ ಸೃಷ್ಟಿಸಿದೆ. ರಮ್ಯಾಳನ್ನು ಈ ವಿಧಾನಸಭಾ ರಣಕಣಕ್ಕೆ ಧುಮುಕಿಸೋದಕ್ಕೆ, ರಾಜ್ಯ ಕಾಂಗ್ರೆಸ್ ಸನ್ನದ್ಧವಾಗಿದೆ ಅನ್ನೋ ಮಾತು ಕೇಳಿಬರ್ತಿದೆ.. 

Related Video