Asianet Suvarna News Asianet Suvarna News

ಸೀಳುನಾಯಿ, ಹುಲಿ, ಆನೆ ಜೂಟಾಟಕ್ಕೆ ನಾಗರಹೊಳೆ ಸಾಕ್ಷಿ: ಪ್ರವಾಸಿಗರ ಮೊಬೈಲ್‌ನಲ್ಲಿ ದೃಶ್ಯ ಸೆರೆ

ನಾಗರಹೊಳೆ ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗಿದೆ. ಸೀಳು ನಾಯಿಯನ್ನು ಹುಲಿ ಅಟ್ಟಾಡಿಸಿಕೊಂಡು ಬಂದಿದೆ. ಆಗ ಹುಲಿಯನ್ನು ಆನೆ ಅಟ್ಟಿಸಿಕೊಂಡು ಬಂದಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಅಪರೂಪದ ದೃಶ್ಯವೊಂದಕ್ಕೆ ಸಾಕ್ಷಿಯಾಗಿದೆ. ಪ್ರವಾಸಿಗರು ಸಫಾರಿ ಮಾಡುವ ವೇಳೆ ಹುಲಿಯೊಂದು ಸೀಳುನಾಯಿಯನ್ನು ಅಟ್ಟಾಡಿಸಿಕೊಂಡು ಬಂದಿದೆ. ಬಳಿಕ ನಾಯಿ ಅಲ್ಲಿಂದ ಓಡಿಹೋಗಿದೆ. ಇದೆ ವೇಳೆ ಹುಲಿಯನ್ನು ಆನೆ ಅಟ್ಟಾಡಿಸಿಕೊಂಡು ಬಂದಿದೆ. ಬಳಿಕ ಹುಲಿ ಆನೆಯನ್ನು ಕಂಡು ಓಡಲು ಆರಂಭಿಸಿದೆ. ಇಂತಹ ಅಪರೂಪದ ದೃಶ್ಯ ಸಫಾರಿಗೆ ಬಂದಿದ್ದ ಪ್ರವಾಸಿಗರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಲ್ಲದೇ ನೆಟ್ಟಿಗರು ಈ ವಿಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕದ ಮೈಸೂರಿನ ತಪ್ಪಲಿನಲ್ಲಿ ಮತ್ತು ತಮಿಳುನಾಡಿನ ನೀಲಗಿರಿ ಪರ್ವತಗಳ ನಡುವೆ ಇರುವ ನಾಗರಹೊಳೆ 640 ಚದರ ಕಿ.ಮೀ. ಇದ್ದು ಹಲವಾರು ರೀತಿಯ ವನ್ಯಜೀವಿಗಳಿಗೆ ನೆಲೆಯಾಗಿರುವ ಅಭಯಾರಣ್ಯವಾಗಿದೆ.

ಇದನ್ನೂ ವೀಕ್ಷಿಸಿ: ವಾಕ್‌ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವುದು ಹಿಟ್ಲರ್‌ ಸರ್ಕಾರ : ಎಂ.ಬಿ. ಪಾಟೀಲ್‌ ವಿರುದ್ಧ ತೇಜಸ್ವಿ ಸೂರ್ಯ ಕಿಡಿ