Asianet Suvarna News Asianet Suvarna News

ನೋಡುಗರ ಕಣ್ಣಿಗೆ ಹಬ್ಬ ಕಾರ್ನಿವಲ್ ಫೆಸ್ಟಿವಲ್: ವಿದ್ಯುತ್ ದೀಪಾಲಂಕಾರ..ಫಿಲ್ಮ್‌ಸಿಟಿ ಝಗಮಗ

ಗಿನ್ನಿಸ್ ದಾಖಲೆ ಬರೆದ ಏಕೈಕ ಫಿಲ್ಮ್ ಸಿಟಿ..!
ಪ್ರೇಕ್ಷಕರ ಮಂತ್ರಮುಗ್ಧಗೊಳಿಸುವ ಪ್ರಪಂಚ 
ರಾಮೋಜಿ ಸಿಟಿಯಲ್ಲಿ ಬಾಹುಬಲಿ ದರ್ಬಾರ್
ಮಾಹಿಷ್ಮತಿ ಸಾಮ್ರಾಜ್ಯಕ್ಕೆ ಪ್ರವಾಸಿಗರ ದಂಡು

ರಾಮೋಜಿ ಫಿಲ್ಮ್ ಸಿಟಿ ಜಗತ್ತಿನ ಅತಿದೊಡ್ಡ ಚಿತ್ರನಗರಿ. ಸಿನಿ ದುನಿಯಾದ ಮಾಯಾಲೋಕ. ಹೈದರಾಬಾದ್(Hyderbad) ಹೊರವಲಯದ 2 ಸಾವಿರ ಎಕರೆಯ ವಿಸ್ತೀರ್ಣದ ಅದ್ಭುತ ಪ್ರಪಂಚ ಇದು.ಇಡೀ ಭಾರತೀಯ ಚಿತ್ರರಂಗಕ್ಕೆ ಈ ರಾಮೋಜಿ ಸಿಟಿಯೇ(Ramoji film city) ಜೀವಾಳ. ಓಲ್ಡ್ ಸಿನಿಮಾದಿಂದ ಹಿಡಿದು ಬಾಹುಬಲಿ, RRR, ಪುಷ್ಪ, ಕುರುಕ್ಷೇತ್ರದಂತಹ ಫಿಲ್ಮ್‌ಗಳು ತೆರೆಮೇಲೆ ಮೂಡಿಬರಲು, ಅದೆಷ್ಟೋ ಅದ್ಭುತ ದೃಶ್ಯ ಕಾವ್ಯಕ್ಕೆ ಈ ಫಿಲ್ಮ್ ಸಿಟಿ ಸಾಕ್ಷಿಯಾಗಿದೆ. 2 ಸಾವಿರ ಎಕರೆ ಪ್ರದೇಶದಲ್ಲಿರುವ ಈ ಫಿಲ್ಮ್‌ಸಿಟಿ. ನೋಡಗರನ್ನ ಮಂತ್ರಮುಗ್ಧನಾಗಿಸುತ್ತೆ. ಅಷ್ಟೇ ಅಲ್ಲ ಸಾವಿರಾರು ಜನರಿಗೆ ಬದುಕು ಕಟ್ಟಿಕೊಟ್ಟಿದೆ. ಗಿನ್ನಿಸ್ ಪುಟ (Guinness record) ಸೇರಿದ ಈ ಫಿಲ್ಮ್‌ಸಿಟಿಗೆ ಪ್ರತಿನಿತ್ಯ 3 ಸಾವಿರಕ್ಕೂ ಹೆಚ್ಚು ಮಂದಿ ಬರ್ತಾರೆ. ನಿರ್ದೇಶಕರು, ನಿರ್ಮಾಪಕರು, ಚಿತ್ರತಂತ್ರಜ್ಞಾನರು ಒಟ್ಟಿಗೆ ಕೆಲಸ ಮಾಡಲು ಇರೋ ಏಕೈಕ ಸ್ಥಳವೇ ಈ ಫಿಲ್ಮ್‌ಸಿಟಿ. ಅಮೆರಿಕಾ ಲಂಡನ್, ಉತ್ತರಭಾರತ,ದಕ್ಷಿಣ ಭಾರತ..ಅಷ್ಟೇ ಯಾಕೇ..ಮೊಘಲ್ ಸಾಮ್ರಾಜ್ಯ,ತಾಜ್‌ಮಹಲ್‌,ಹವಾ ಮಹಲ್ ನಂತಹ ಹಲವು ಶಿಲ್ಪಕಲೆ ಸೇರಿ ವಿಭಿನ್ನ ಸೆಟ್‌ಗಳು ಈ ಫಿಲ್ಮ್‌ಸಿಟಿಯೊಳಗೆ ಅಡಗಿದೆ.

ಇದನ್ನೂ ವೀಕ್ಷಿಸಿ:  Today Horoscope: ತುಲಾ ರಾಶಿಯವರಿಗೆ ಇಂದು ಲಾಭದ ದಿನವಾಗಿದ್ದು,ವೃತ್ತಿಯಲ್ಲಿ ಅನುಕೂಲ

Video Top Stories