Bomb Blast: 10 ವರ್ಷಗಳ ನಂತರ ಬಾಂಬ್‌ ಸ್ಫೋಟ: ಸಿಲಿಕಾನ್ ಸಿಟಿಯಲ್ಲಿ ಇಲ್ಲಿತನಕ ನಡೆದಿರುವ ಟೆರರಿಸ್ಟ್‌ ಅಟ್ಯಾಕ್‌ಗಳೆಷ್ಟು ?

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಇದರಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಇದೆ ರೀತಿ ಬೆಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟಗಳ ಹಿಸ್ಟರಿ ಇಲ್ಲಿದೆ..

First Published Mar 4, 2024, 10:02 AM IST | Last Updated Mar 4, 2024, 10:03 AM IST

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಫೋಟ(Rameshwaram cafe Blast) ಇದು ಮೊದಲಿನದಲ್ಲ. ಇದು ಏಳನೇ ಬಾಂಬ್‌ ಸ್ಫೋಟವಾಗಿದೆ. ಅದು ಕೂಡ ಹತ್ತು ವರ್ಷಗಳ ಬಳಿಕವೊಂದು ಸ್ಫೋಟ ನಡೆದಿದೆ. 24 ವರ್ಷಗಳ ಹಿಂದೆ ಮೊದಲ ಬಾರಿಗೆ ಬಾಂಬ್‌ ಬ್ಲಾಸ್ಟ್‌ ಆಗಿತ್ತು. ಬೆಂಗಳೂರಿನ(Bengaluru) ಮಡಿವಾಳ, ನಾಯಂಡಹಳ್ಳಿ, ಆಡುಗೋಡಿ ಸೇರಿದಂತೆ ವಿವಿಧ ಭಾಗಗಳಲ್ಲಿ 2008 ರ ಜುಲೈ 25ರಂದು 9 ಬಾಂಬ್‌ಗಳು ಸ್ಫೋಟಗೊಂಡಿದ್ದವು. ಅವು ಕಡಿಮೆ ತೀವ್ರತೆಯ ನಾಡ ಬಾಂಬ್‌ಗಳಾಗಿದ್ದವು. ಘಟನೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಮತ್ತು 20 ಮಂದಿ ಗಾಯಗೊಂಡಿದ್ದರು. ಇನ್ನೂ ಇದೆ ರೀತಿ 2010 ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ ಆವರಣದಲ್ಲಿ ಸ್ಫೋಟವಾಗಿತ್ತು. ಮಲ್ಲೇಶ್ವರದಲ್ಲಿ 2013ರಲ್ಲಿ ಸಂಭವಿಸಿತ್ತು ಸ್ಫೋಟ, 2014ರಲ್ಲಿ ಚರ್ಚ್​​​ಸ್ಟ್ರೀಟ್​​ನಲ್ಲಿ ಸಂಭವಿಸಿತ್ತು ಸ್ಫೋಟ,2020 ಶಾಂತಿನಗರದಲ್ಲಿ ಸ್ಫೋಟ ಸಂಭವಿಸಿತ್ತು. 

ಇದನ್ನೂ ವೀಕ್ಷಿಸಿ:  Today Horoscope: ಇಂದು ದುರ್ಗಾ ಪ್ರಾರ್ಥನೆ ಮಾಡಿ..ಇದರಿಂದ ದೊರೆಯುವ ಫಲಗಳೇನು ಗೊತ್ತಾ?