ನಾನು ನಿನ್ನ ಭಕ್ತ, ಈ ಕಲ್ಲಿನಲ್ಲಿ ದರ್ಶನ ನೀಡು ಎಂದು ಬೇಡಿಕೊಂಡಿದ್ದೆ: ಅರುಣ್ ಯೋಗಿರಾಜ್
ಶ್ರೀರಾಮಲಲ್ಲಾ ಮೂರ್ತಿ ಕೆತ್ತಿರುವ ಅರುಣ್ ಯೋಗಿರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದು, ಸಂದರ್ಶನದ ವಿಡಿಯೋ ಇಲ್ಲಿದೆ..
ನಮ್ಮ ಕುಟುಂಬ 250 ವರ್ಷದಿಂದ ಈ ಕೆಲಸ ಮಾಡುತ್ತಿದೆ. ಮೂವರು ಶಿಲ್ಪಿಗಳ ಮೇಲೆ ದೊಡ್ಡ ಜವಾಬ್ದಾರಿ ಇತ್ತು. ಅಲ್ಲದೇ ಮೂರ್ತಿ ಐದು ವರ್ಷದ ಬಾಲಕನಂತಿರಬೇಕಿತ್ತು ಎಂದು ಶಿಲ್ಪಿ ಅರುಣ್ ಯೋಗಿರಾಜ್(Arun Yogiraj) ಹೇಳಿದ್ದಾರೆ. ಮೊದಲು ನಾವು ರಾಮ ಹೇಗಿದ್ದ ಎಂಬ ರೆಫರೆನ್ಸ್ ಹುಡುಕತೊಡಗಿದೆವು. ಅಲ್ಲದೇ ಮಕ್ಕಳ ಚಹರೆ ಹೇಗಿರುತ್ತದೆ ಎಂಬುದನ್ನು ತಿಳಿಯಬೇಕಿತ್ತು. ಮೂರ್ತಿ(Sri Ramalalla Murthy) ಬಗ್ಗೆ ನಾನು ಯೋಚಿಸುತ್ತಿದ್ದೆ ಹಾಗೆ. ಮಕ್ಕಳ ಬಗ್ಗೆ ಅಧ್ಯಯನ ಮಾಡುತ್ತಾ. ಉತ್ತಮ ಪಂಚತಾಳ ಎಲ್ಲಾವನ್ನು ಗಮನಿಸಿದೆ ಎಂದು ಅರುಣ್ ಯೋಗಿರಾಜ್ ಹೇಳುತ್ತಾರೆ. ಎಲ್ಲಾ ಕಲ್ಲುಗಳನ್ನು ಪರೀಕ್ಷಿಸಿದ್ದರು. ನನ್ನ ಕಲ್ಲನ್ನು ಎಂಟು ಬಾರಿ ಪರೀಕ್ಷಿಸಲಾಯಿತು ಎಂದು ಅರುಣ್ ಯೋಗಿರಾಜ್ ಹೇಳುತ್ತಾರೆ.