ಮಂಡ್ಯದಲ್ಲಿ ತೊಟ್ಟಿಲಮಡು ಉತ್ಸವ, ಮಕ್ಕಳಾಗಲು ಅಷ್ಟತೀರ್ಥ ಸ್ನಾನ

ಮೇಲುಕೋಟೆಯಲ್ಲಿ ನಡೆಯುವ ಪ್ರಸಿದ್ಧ ತೊಟ್ಟಿಲಮಡು ಉತ್ಸವದಲ್ಲಿ ನೂರಾರು ದಂಪತಿಗಳು ಭಾಗಿಯಾಗಿದ್ದಾರೆ. ಸಂತಾನಪ್ರಾಪ್ತಿಗಾಗಿ ತೊಟ್ಟಿಲುಮಡು ಉತ್ಸವದಲ್ಲಿ ಭಾಗಿಯಾದ ದಂಪತಿಗಳು ಹರಕೆ ತೀರಿಸಿದ್ದಾರೆ.

First Published Nov 7, 2019, 2:47 PM IST | Last Updated Nov 7, 2019, 2:47 PM IST

ಮಂಡ್ಯ(ನ.07): ಮೇಲುಕೋಟೆಯಲ್ಲಿ ನಡೆಯುವ ಪ್ರಸಿದ್ಧ ತೊಟ್ಟಿಲಮಡು ಉತ್ಸವದಲ್ಲಿ ನೂರಾರು ದಂಪತಿಗಳು ಭಾಗಿಯಾಗಿದ್ದಾರೆ. ಸಂತಾನಪ್ರಾಪ್ತಿಗಾಗಿ ತೊಟ್ಟಿಲುಮಡು ಉತ್ಸವದಲ್ಲಿ ಭಾಗಿಯಾದ ದಂಪತಿಗಳು ಹರಕೆ ತೀರಿಸಿದ್ದಾರೆ.

ಹರಕೆ ತೀರಿಸಿದರೆ ಇಷ್ಟಾರ್ಥ ನೆರವೇರುತ್ತೆಂಬ ನಂಬಿಕೆ ಇದ್ದು, ಮಡಿಲು ತುಂಬಿ ಹರಕೆ ತೀರಿಸಿದ್ದಾರೆ. ಚಿಕ್ಕದಾದ ತೆಂಗಿನಕಾಯಿ,ಎರಡುಬಾಳೆ ಹಣ್ಣು, ಎಲೆ ಅಡಿಕೆ, ಅರಿಷಿಣ ಕುಂಕುಮ, ಸ್ವಲ್ಪಅಕ್ಕಿ, ಚಿಕ್ಕಬೆಲ್ಲ ಇವುಗಳನ್ನು ಮುತ್ತೈದೆರೆಯರಿಂದ ಮಡಿಲಿಗೆ ಹಾಕಿಸಿಕೊಂಡು ಡಿಲುತುಂಬಿಕೊಳ್ಳುತ್ತಾರೆ. ಬರಿಗಾಗಲಲ್ಲಿ ನಡೆದು ಮೇಲುಕೋಟೆಯಲ್ಲಿರುವ ಅಷ್ಟತೀರ್ಥಗಳಲ್ಲೂ ಮಿಂದೆದ್ದ ಭಕ್ತರು ಅಷ್ಟತೀರ್ಥ ಸ್ನಾನ ಮಾಡಿದ್ದಾರೆ. ಅಷ್ಟ ತೀರ್ಥಗಳ ಬಳಿ ಚಲುನಾರಾಯಣನ ಪಾದುಕೆಗಳಿಗೆ ವಿಷೇಶ ಪೂಕೆ ಸಲ್ಲಿಸಲಾಗಿದ್ದು, ಪಾದುಕೆಯ ಉತ್ಸವ ತೆರಳುವ ವೇಳೆ ವೇದ ಪಾರಾಯಣ ಮಾಡಿದ ವೇದ ವಿದ್ವಾಂಸರು ಭಕ್ತರಿಂದ ಗೋವಿಂದನ ನಾಮಸ್ಮರಣೆ ಮಾಡಿದ್ದಾರೆ. ರಾಜ್ಯವು ಸೇರಿದಂತೆ ಹೊರ ರಾಜ್ಯದಿಂದ ಬಂದ ನೂರಾರು ಮಕ್ಕಳಾಗದ ದಂಪತಿಗಳು ಭಕ್ತಿಯಿಂದ ಸೇವೆ ಸಲ್ಲಿಸಿದ್ದಾರೆ.

ಕ್ಷೇತ್ರಕ್ಕೆ ಅರ್ಧ ಆಸ್ತಿ ಬರೆದುಕೊಡ್ತೀನಿ, ನೀವ್ ಕೊಡ್ತೀರಾ: ಅನರ್ಹ ಶಾಸಕ ಸವಾಲು