ಕ್ಷೇತ್ರಕ್ಕೆ ಅರ್ಧ ಆಸ್ತಿ ಬರೆದುಕೊಡ್ತೀನಿ, ನೀವ್ ಕೊಡ್ತೀರಾ: ಅನರ್ಹ ಶಾಸಕ ಸವಾಲು
ನಾನು ನನ್ನ ಅರ್ಧ ಆಸ್ತಿಯನ್ನು ನನ್ನ ಕ್ಷೇತ್ರಕ್ಕೆ ಬರೆದು ಕೊಡುತ್ತೇನೆ. ನೀವು ಅರ್ಧ ಆಸ್ತಿಯನ್ನು ಬರೆದುಕೊಡಿ ಎಂದು ಅನರ್ಹ ಶಾಸಕ ನಾರಾಯಣ ಗೌಡ ದಳಪತಿಗಳಿಗೆ ಸವಾಲು ಹಾಕಿದ್ದಾರೆ. ಕೆ.ಆರ್.ಪೇಟೆಗೆ ರಾಜಕೀಯ ಮಾಡಲು ನೀವು ಬರ್ತಾ ಇದೀರಾ? ನೀವು ನಿಮ್ಮ ಅರ್ಧ ಆಸ್ತಿ ಬರೆಯಿರಿ. ನಾನು ಅರ್ಧ ಆಸ್ತಿ ಬರೆಯುತ್ತೇನೆ ಎಂದಿದ್ದಾರೆ.
ಮಂಡ್ಯ(ನ.06): ನಾನು ನನ್ನ ಅರ್ಧ ಆಸ್ತಿಯನ್ನು ನನ್ನ ಕ್ಷೇತ್ರಕ್ಕೆ ಬರೆದು ಕೊಡುತ್ತೇನೆ. ನೀವು ಅರ್ಧ ಆಸ್ತಿಯನ್ನು ಬರೆದುಕೊಡಿ ಎಂದು ಅನರ್ಹ ಶಾಸಕ ನಾರಾಯಣ ಗೌಡ ದಳಪತಿಗಳಿಗೆ ಸವಾಲು ಹಾಕಿದ್ದಾರೆ. ಕೆ.ಆರ್.ಪೇಟೆಗೆ ರಾಜಕೀಯ ಮಾಡಲು ನೀವು ಬರ್ತಾ ಇದೀರಾ? ನೀವು ನಿಮ್ಮ ಅರ್ಧ ಆಸ್ತಿ ಬರೆಯಿರಿ. ನಾನು ಅರ್ಧ ಆಸ್ತಿ ಬರೆಯುತ್ತೇನೆ ಎಂದಿದ್ದಾರೆ.
ಅರ್ಧ ಆಸ್ತಿ ಕೊಡುವೆ:
ದಳಪತಿಗಳಿಗೆ ಅನರ್ಹ ಶಾಸಕ ನಾರಾಯಣಗೌಡ ಸವಾಲು ಹಾಕಿದ್ದಾರೆ. ಸುಮ್ಮನೆ ನಾರಾಯಣಗೌಡ ಗೆದ್ದರೂ ಸೋತರೂ ಮುಂಬೈಗೆ ಹೋಗ್ತಾನೆ ಎಂದು ಹೇಳುತ್ತೀರಿ. ನಾನು ಹೋದರೂ ಅದು ಹೊಟ್ಟೆಪಾಡಿಗೆ ಹೋಗೋದು. ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಒಬ್ಬಳು ಮದುವೆಯಾಗಿದ್ದಾಳೆ. ಇನ್ನೊಬ್ಬಳು ಉನ್ನತ ವ್ಯಾಸಂಗ ಮಾಡ್ತಾ ಇದ್ದಾಳೆ. ನನ್ನ ಹಿರಿಯ ಮಗಳು ನನ್ನ ಅಕೌಂಟ್‌ಗೆ ಎರಡು ಲಕ್ಷ ರು. ಹಾಕ್ತಾ ಇದ್ದಾಳೆ. ನನಗೆ ಇನ್ನೇನು ಬೇಕು ಹೇಳಿ ಎಂದು ಪ್ರಶ್ನಿಸಿದ್ದಾರೆ.
4 ವರ್ಷದ ನಂತರ ತುಂಬಿದ ಜಲಾಶಯ, ನೀರಿನಲ್ಲಿ ಈಜಾಡಿದ ಕುಣಿಗಲ್ ಶಾಸಕ..!
ಉಲ್ಟಾಹೊಡೆದ ನಾರಾಯಣಗೌಡ
ರಾಜೀನಾಮೆಗೂ ಮುನ್ನ ಬಿಎಸ್‌ವೈ ಜೊತೆ ಮಾತುಕತೆ ನಡೆಸಿದ್ದೆ ಎಂದು ನಾರಾಯಣಗೌಡ ಹೇಳಿಕೆ ನೀಡಿದ ಮರು ಕ್ಷಣವೇ ಮಾತುಕತೆ ನಡೆದಿದ್ದು ರಾಜೀನಾಮೆ ನಂತರ ಎಂದು ಉಲ್ಟಾಹೊಡೆದಿದ್ದಾರೆ. ಸಭೆಯ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ರಾಜೀನಾಮೆ ಬಳಿಕ ಈ ಮಾತುಕತೆ ನಡೆದಿದೆ. ರಾಜೀನಾಮೆಗೂ ಮುನ್ನ ಅಲ್ಲ ಎಂದು ಸ್ಪೋಟಕ ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ.
'ಮಾತು ಕೇಳದೆ ಬಾಂಬೇವಾಲಗೆ ಟಿಕೆಟ್ ಕೊಟ್ಟ ನನ್ನ ಮಗ ಪಶ್ಚಾತ್ತಾಪ ಪಡುತ್ತಿದ್ದಾನೆ