ಜೋಗಿಯವರ ಹೊಸ ಪುಸ್ತಕ 'ಸಾವು' ಬಿಡುಗಡೆ: ಅನೇಕ ಗಣ್ಯರು ಭಾಗಿ!

ಖ್ಯಾತ ಬರಹಗಾರ ಜೋಗಿ ಅವರ 75ನೇ ಪುಸ್ತಕ 'ಸಾವು' ರಿಲೀಸ್ ಆಗಿದ್ದು, ಇದು ಸಾವಣ್ಣ ಪ್ರಕಾಶನದ 150 ನೇ ಪುಸ್ತಕವಾಗಿದೆ. ಈ ಪುಸ್ತಕ ಸಾವಿನ ಕುರಿತು 50 ಬರಹಗಳಿರುವ ಸಮಗ್ರ ಬರಹವಾಗಿದೆ. ಬಸವನಗುಡಿಯ ಸಭಾಂಗಣದಲ್ಲಿ ಪುಸ್ತಕ ಲೋಕಾರ್ಪಣೆಯಾಗಿದೆ.
 

Share this Video
  • FB
  • Linkdin
  • Whatsapp

ಸಾವಿನ ಕುರಿತಾಗಿ ಸಾಹಿತಿ, ಕನ್ನಡಪ್ರಭ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ ಅವರು ಬರೆದಿರುವ ಹೊಸ ಪುಸ್ತಕ 'ಸಾವು'. ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್‌ ಇನ್ಸಿಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌ನಲ್ಲಿ ಬಿಡುಗಡೆಯಾಗಿದೆ. ಇದು ಸಾವಿನ ಕುರಿತಾಗಿ ಸುಮಾರು 50 ಬರಹಗಳಿರುವ, 240 ಪುಟಗಳ ಬೃಹತ್‌ ಪುಸ್ತಕವಾಗಿದ್ದು, ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕ ರವಿ ಹೆಗಡೆ ಪುಸ್ತಕ ಬಿಡುಗಡೆ ಮಾಡಿದ್ದಾರೆ. ವಿಶ್ವವಾಣಿಯ ಪ್ರಧಾನ ಸಂಪಾದಕ ಶ್ರೀ ವಿಶ್ವೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದು, ಕುಸುಮಾ ಆಯಾರಹಳ್ಳಿ, ಸೇರಿ ಹಲವರು ಗಣ್ಯರು ಭಾಗಿಯಾಗಿದ್ದಾರೆ.

ಕುಂಚಿಟಿಗ ಸಮಾಜಕ್ಕೆ ಓಬಿಸಿ ಮೀಸಲು: ಬಿಎಸ್‌ವೈ ಭರವಸೆ

Related Video