ಪ್ರೇಮ ಸಿದ್ಧಾಂತ ಮತ್ತು ವಿರಹ ಸಿದ್ಧಾಂತವನ್ನು ಕಾಳಿದಾಸನಷ್ಟು ದೈವಿಧ್ಯಮಯವಾಗಿ ಕಟ್ಟಿಕೊಟ್ಟ ಕವಿ ಇನ್ನೊಬ್ಬ ಇರಲಿಕ್ಕಿಲ್ಲ. ಒಂದೊಂದು ಸಾಲೂ ಕೋಟೆಬಲ್ ಕೋಟ್ ರೀತಿಯಲ್ಲಿರುತ್ತವೆ. ಆ ಕಾರಣಕ್ಕಾಗಿಯೇ ಇವತ್ತಿಗೂ ಸಾಹಿತ್ಯಾಸಕ್ತರು ಮತ್ತೆ ಮತ್ತೆ ಕಾಳಿದಾಸನತ್ತ ತಿರುಗಿ ನೋಡುತ್ತಾರೆ. ಅವರಿಗೆ ಮೋಸವಾಗುವುದಿಲ್ಲ.
ಪ್ರಜಾವಾಣಿ ಪತ್ರಿಕೆಯ ಸಹ ಸಂಪಾದಕರಾಗಿದ್ದ ಪದ್ಮರಾಜ ದಂಡಾವತಿಯವರು ತಾವು ಪತ್ರಕರ್ತರಾಗಿದ್ದ ದಿನಗಳ ನೆನಪುಗಳನ್ನು ‘ಉಳಿದಾವ ನೆನಪು’ ಕೃತಿಯಲ್ಲಿ ದಾಖಲಿಸಿದ್ದಾರೆ. ಅಂಕಿತ ಪುಸ್ತಕ ಪ್ರಕಟಿಸಿರುವ ಆ ಕೃತಿಯು ಇಂದು ಬಿಡುಗಡೆಯಾಗುತ್ತಿದೆ. ಕೃತಿಯಲ್ಲಿರುವ ಎರಡು ನೆನಪುಗಳು ಇಲ್ಲಿ ನೀಡಲಾಗಿದೆ.
ಯಶಸ್ವಿ ಪ್ರೇಮ ಕತೆಗಳಿಗಿಂತ ಭಗ್ನ ಪ್ರೇಮ ಕತೆಯಾಧಾರಿತ ಸಿನಿಮಾ, ಕಾದಂಬರಿ, ಕತೆ ಪುಸ್ತಕಗಳು ಹೆಚ್ಚು ಯಶಸ್ಸು ಕಂಡಿವೆ ಎಂದು ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.
ಬರವಣಿಗೆ ಮಾತ್ರವಲ್ಲ ವೈದೇಹಿ ಅವರ ಮಾತು ಸಹ ಬಹಳ ಆರ್ದ್ರ. ಅದಕ್ಕೇ ಅವರು ಲಂಕೇಶರು ಅಂದಂತೆ ಇಂದಿಗೂ ಎಂದಿಗೂ ಆರ್ದ್ರ ಗರ್ವದ ಹುಡುಗಿ. ಈ ಕಾಲದ ಬರವಣಿಗೆ ಬಗ್ಗೆ ಮನೋಭಾವದ ಬಗ್ಗೆ ಅವರಿಲ್ಲಿ ಮಾತನಾಡಿದ್ದಾರೆ.
ಪ್ರಸ್ತುತ ಎಚ್.ಕೆ. ಅನಂತಸುಬ್ಬರಾವ್ ಅವರು ಬರೆದಿರುವ ರಾಮಾಯಣ ಮಹಾಕಾವ್ಯ ಕೃತಿಯು ಇತ್ತೀಚಿನದು. ತಮಗೆ ಸೂಕ್ತವೆನಿಸಿದ ಆಡುಮಾತಿನ ಶೈಲಿಯಲ್ಲೇ ಪದ್ಯಗಳನ್ನು ರಚಿಸಿರುವುದು ಓದುಗರ ಮನಸ್ಸಿಗೆ ಮುದ ನೀಡುತ್ತದೆ.
ಐತಿಹಾಸಿಕ ಕಾದಂಬರಿ ಬರೆಯುವುದು ಸುಲಭವಲ್ಲ. ಮೂಲ ಇತಿಹಾಸದ ಘಟನಾವಳಿಗೆ ಭಂಗ ಬಾರದಂತೆ, ಕತೆ ಕಟ್ಟಬೇಕು. ಜಾಗತಿಕ ಐತಿಹಾಸಿಕ ಘಟನೆಗಳನ್ನು ಮೂಲವಾಗಿಟ್ಟುಕೊಂಡಿರುವ ಹನುಕಿಯಾ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ.
ಮಹರ್ಷಿ ರವೀಂದ್ರರು ಬದುಕಿ ಬಾಳಿದ ಅರಮನೆ ಜೊರಾಸಂಕೋ ಠಾಕೂರ್. ಕವಿಮನೆಗೆ ಭೇಟಿ ನೀಡಿದ ಲೇಖಕಿ ಆ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.
ದೆಹಲಿಯಿಂದ ಆಡಳಿತ ನಡೆಸುತ್ತಿದ್ದ ಮೊಘಲ್ ದೊರೆಗಳಲ್ಲಿ ಅನೇಕರು ದಕ್ಷರಾಗಿದ್ದರು, ಕೆಲ ರಾಜರು ದೇಶದ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ, ಅದಕ್ಷ ರಾಜನಾಗಿದ್ದ ಫರುಕ್ಷಿಯಾರ್ ಕೈಗೊಂಡ ಒಂದೇ ಒಂದು ನಿರ್ಧಾರ ಭಾರತದ ಚರಿತ್ರೆಯ ಪುಟಗಳ ಕರಾಳ ಅಧ್ಯಾಯಕ್ಕೆ ಕಾರಣವಾಯಿತು.
ಒಬ್ಬ ಸೂಪರ್ಸ್ಟಾರ್ ನೂರಾರು ಜನರ ಕುಟುಂಬಕ್ಕೆ ಅನ್ನದಾತ. ಆಟೋ ಡ್ರೈವರ್ನಿಂದ ಸಣ್ಣಪುಟ್ಟ ಅಂಗಡಿ ನಡೆಸುವ ಜನರೆಲ್ಲರ ಬದುಕನ್ನೇ ಬದಲಾಯಿಸಿದ ಕಲಾವಿದ. ರೀಲ್ ಹೀರೋ ರಿಯಲ್ ಹೀರೋ ಆಗಿ ಬದಲಾವಣೆಗೆ ನಾಂದಿ ಹಾಡಿದ ರೋಚಕ ಕತೆ ಇದು.
ಅಬ್ಬಾಸ್ ಕೈರೋಸ್ತಮಿ ಇರಾನ್ ದೇಶದ ಚಲನಚಿತ್ರ ಕ್ಷೇತ್ರದ ಧ್ರುವ ತಾರೆ ಮತ್ತು ಜೀವಿತ ಕಾಲದಲ್ಲಿಯೇ ದಂತಕಥೆಯಾದವನು. ತನ್ನ ಅಪೂರ್ವವಾದ ಪ್ರತಿಭೆಯಿಂದ ಎಲ್ಲ ಕಾಲಕ್ಕೂ ಸಲ್ಲುವಂಥ ಸಾರ್ವತ್ರಿಕ ಮೌಲ್ಯಗಳನ್ನು ಧ್ವನಿಸುವಂಥ ಚಿತ್ರಗಳನ್ನು ಜಗತ್ತಿಗೆ ಕೊಟ್ಟವನು. ಅವರ ಬಗ್ಗೆ ಎಂ.ಎನ್ ಪ್ರಸನ್ನ ಬರೆದಿರುವ ಲೇಖನ ಇಲ್ಲಿದೆ.