Asianet Suvarna News Asianet Suvarna News

ಇಳಕಲ್ ಧಿರಿಸಿನಲ್ಲಿ ಮಿಂಚಿದ ನಿರ್ಮಲಾ ಸೀತಾರಾಮನ್: ಕರುನಾಡ ಸೀರೆಯ ವಿಶೇಷತೆ ಏನು ಗೊತ್ತಾ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಾಗಲಕೋಟೆಯ ಇಳಕಲ್ ಸೀರೆಯುಟ್ಟು ಬಜೆಟ್ ಮಂಡಿಸಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೀರೆಗೆ ಕಸೂತಿ ಹಾಕಿರುವುದು ನಾರಾಯಣಪುರದಲ್ಲಿರುವ ಆರತಿ ಕ್ರಾಫ್ಟ್ಸನ ಮಹಿಳಾ ಮಣಿಗಳು ಅನ್ನೋದು ವಿಶೇಷ. ಆರತಿ ಕ್ರಾಫ್ಟ್ಸನ ಬಗ್ಗೆ ಮಾಲಿಕರಾದ ಆರತಿ ಹಿರೇಮಠ್‌ ಮಾತನಾಡಿದ್ದು, ಧಾರವಾಡದಲ್ಲಿ  ಆರತಿ ಕ್ರಾಫ್ಟ್ಸ್ ಯುನಿಟ್‌ ಇದೆ. ಡಿಸೆಂಬರ್‌'ನಲ್ಲಿ ನಮಗೆ ನಿರ್ಮಲಾ ಸೀತಾರಾಮನ್ ಅವರ ಸೀರೆಯ ಆರ್ಡರ್‌ ಬಂದಿತ್ತು. ಇಳಕಲ್‌ನಿಂದ ಸೀರೆ ತರಿಸಿ ಇಳಕಲ್‌ ರೇಷ್ಮೆ ಕೈಮಗ್ಗ ಸೀರೆ 15 ದಿನಗಳಲ್ಲಿ ರೆಡಿ ಮಾಡಿ ಅವರಿಗೆ ಕಳುಹಿಸಿದ್ದೇವೆ. ಬಜೆಟ್‌ ಮಂಡನೆ ವೇಳೆ ಅವರು ಅದೇ ಸೀರೆಯನ್ನು ಉಟ್ಟಿದ್ದು ನೋಡಿ ಬಹಳ ಸಂತೋಷವಾಯಿತು. ಇದು ಹೆಮ್ಮೆಯ ವಿಷಯವಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ನಿರ್ಮಲಾ ಸೀತಾರಮ್‌ಗೆ ಉಡುಗೊರೆ ನೀಡಿದ್ದ ಸೀರೆ ಅದು ಎಂದು ಅವರು ತಿಳಿಸಿದರು.

Video Top Stories