ದೇಹ ತೂಕ ಇಳಿಸಲು ವರ್ಕೌಟ್ ಜೊತೆಗೆ ಬೆಸ್ಟ್ ಈ ಆಕ್ರೋಟ್..!
- ನೀರಲ್ಲಿ ನೆನೆಸಿಟ್ಟ ಎರಡು ವಾಲ್ನಟ್ ಸೇವಿಸೋದ್ರಿಂದ ಪ್ರಯೋಜನಗಳು ಹಲವು
- ಪ್ರೋಟೀನ್, ಹೆಲ್ದಿ ಫ್ಯಾಟ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್‌ಗಳ ಆಗರ ವಾಲ್ನಟ್
- ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಆಕ್ರೋಟ್
ವಾಲ್ನಟ್ ಅಥವಾ ಆಕ್ರೋಟನ್ನು ಒಣ ಹಣ್ಣುಗಳ ರಾಜಾ ಎಂದು ಕರೆಯುತ್ತಾರೆ. ಇದು ಮೆದುಳಿಗೆ ಮಾತ್ರ ಪ್ರಯೋಜನಕಾರಿಯಲ್ಲ, ನಮ್ಮ ಒಟ್ಟಾರೆ ಆರೋಗ್ಯಕ್ಕೂ ಬೇಕೇ ಬೇಕು. ವಾಲ್‌ನಟ್‌ನಲ್ಲಿ ಪ್ರೋಟೀನ್, ಹೆಲ್ದಿ ಫ್ಯಾಟ್, ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಸಮೃದ್ಧವಾಗಿದೆ. ಆದರೆ ವಾಲ್‌ನಟ್ಸನ್ನು ಕಚ್ಚಾ ತಿನ್ನುವ ಬದಲು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮರುದಿನ ಖಾಲಿ ಹೊಟ್ಟೆಯಲ್ಲಿ ತಿನ್ನುತ್ತಿದ್ದರೆ, ಅದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಪ್ರತಿದಿನ ನೆನೆಸಿದ ಕೇವಲ 2 ಆಕ್ರೋಟ್ ತಿಂದರೆ, ಅದು ಅನೇಕ ರೋಗಗಳಿಂದ ಕಾಪಾಡುತ್ತದೆ.
ವಯಸ್ಸು 50 ಪ್ಲಸ್ ಆಗ್ತಾ ಇದೆಯಾ..? ಆಹಾರದಲ್ಲಿರಲಿ ಈ ಬದಲಾವಣೆ
ನೆನೆಸಿದ ವಾಲ್ನಟ್ ತಿನ್ನುವುದರಿಂದ ದೇಹ ತೂಕ ಇಳಿಸಿಕೊಳ್ಳಬಹುದು. ಆಕ್ರೋಟ್‌ನಲ್ಲಿ ಕ್ಯಾಲ್ಸಿಯಂ, ಪೊಟ್ಯಾಷಿಯಮ್, ಐರನ್, ಕಾಪರ್, ಝಿಂಕ್ ಅಂಶಗಳು ಹೆಚ್ಚಿವೆ. ಇದು ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದಿಂದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.