Asianet Suvarna News Asianet Suvarna News

ಬೆಂಗಳೂರಿನಲ್ಲೊಂದು ಅದ್ಭುತ ಮತ್ಸ್ಯಲೋಕ, ದುಬೈ, ಸಿಂಗಾಪುರ ಮಾದರಿಯ ಫಿಶ್ ಟನಲ್ ಅಕ್ವೇರಿಯಂ

ನೀರಿನಲ್ಲಿ ಸರಸರನೇ ಓಡಾಡುವ ಮೀನುಗಳನ್ನು ನೋಡೋದೆ ಚೆಂದ. ಅದರಲ್ಲೂ ದೊಡ್ಡ ಸುರಂಗ ಮಾರ್ಗದಲ್ಲಿ ಮೀನುಗಳ ಓಡಾಟ ನೋಡೋದಕ್ಕೆ ಮನಸ್ಸಿಗೆ ಹಿತ ಎನಿಸುತ್ತೆ. ದುಬೈ, ಸಿಂಗಾಪುರಗಳಲ್ಲಿ ನೋಡ್ತಾ ಇದ್ದ ಫಿಶ್ ಟನಲ್ ಅಕ್ವೇರಿಯಂನ್ನು ಇದೀಗ ಬೆಂಗಳೂರಿನಲ್ಲಿಯೂ ನೋಡಿ ಖುಷಿ ಪಡಬಹುದು.

ಸಮುದ್ರ ಕುದುರೆ, ಮೊಸಳೆ ಮೀನು, ಈಲ್, ಏಂಜೆಲ್ ಫಿಶ್ ಇನ್ನೂ ನೂರಾರು ಮೀನುಗಳನ್ನು 20 ಸಾವಿರ ಚದರಡಿ ವಿಸ್ತೀರ್ಣದಲ್ಲಿ ನೋಡಬಹುದು.  ಬಗೆಬಗೆಯ ಕಲರ್ ಫುಲ್ ಮೀನುಗಳ ಬಗ್ಗೆ ಮಾಹಿತಿಯೊಂದಿಗೆ,  ಸುರಂಗ ಮಾರ್ಗ ಹೊಕ್ಕಂತೆ ವಿಭಿನ್ನ ಎಕ್ಸಪೀರಿಯನ್ಸ್ ನಿಮ್ಮದಾಗುತ್ತೆ.  ಬೆಂಗಳೂರಿನಲ್ಲಿ ಸೃಷ್ಟಿಯಾಗಿರುವ ಈ  ಮೀನುಗಳ ಮತ್ಸ್ಯಲೋಕವಿರೋದು ಕೆಂಗೇರಿಯಲ್ಲಿ ಈ ಸಮುದ್ರ ಸುರಂಗದ  ಒಳಹೊಕ್ಕರೆ ಅದ್ಭುತ ಅನಿಸೋ 500ಕ್ಕೂ ಹೆಚ್ಚಿನ‌ಮೀನುಗಳನ್ನು ಕಣ್ತುಂಬಿಕೊಳ್ಳಬಹುದು. 20 ಸಾವಿರ ಚದರಡಿ ವಿಸ್ತೀರ್ಣದಲ್ಲಿರುವ ಈ ಸುರಂಗದ ಮತ್ಸ್ಯಲೋಕ ಮಕ್ಕಳಿಗೆ ವಿಶೇಷ ಅನುಭವ ನೀಡಲಿದೆ. ಕೆಂಗೇರಿ ಬಸ್ ನಿಲ್ದಾಣದ ಪಕ್ಕದ ಗ್ರೌಂಡ್ ಹಾಗೂ ಜೆಪಿನಗರದಲ್ಲಿ ಸಾರ್ವಜನಿಕರ ಪ್ರದಶನಕ್ಕೆ ಅವಕಾಶವಿದ್ದು, ನೀವು ಒಂದು ರೌಂಡ್ ಮತ್ಸ್ಯಲೋಕವನ್ನು ನೋಡಿ ಬನ್ನಿ

Unique Village Longwa: ಭಾರತದಲ್ಲಿ ಕಿಚನ್, ಮಯನ್ಮಾರ್‌ನಲ್ಲಿ ಬೆಡ್‌ ರೂಂ: ಅರೇ ಏನಿದು ವಿಚಿತ್ರ ಮನೆ ಕಥೆ?