ಕೊಚ್ಚಿಹೋದ ಯುವಕ.. 70 ಗಂಟೆಯಾದ್ರೂ ಸಿಗದ ಶವ: ಮಗನ ಮೃತದೇಹಕ್ಕಾಗಿ ಅನ್ನ, ನೀರು ಬಿಟ್ಟ ಪೋಷಕರು

ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ಕೊಲ್ಲೂರಿಗೆ ಆಗಮಿಸಿದ್ದ ಯುವಕನೋರ್ವ ಜಲಪಾತದಲ್ಲಿ ಕಾಲು ಜಾರಿ ಬಿದ್ದು 70 ಗಂಟೆಯಾಗಿದೆ. ಆದ್ರೆ ಈ ವರೆಗೂ ಭದ್ರಾವತಿಯ ಶರತ್ ಮೃತದೇಹ ಮಾತ್ರ ಪತ್ತೆಯಾಗಿಲ್ಲ.
 

Share this Video
  • FB
  • Linkdin
  • Whatsapp

ರೀಲ್ಸ್ ಮಾಡಲು ಹೋಗಿ ಕಾಲುಜಾರಿ ಬಿದ್ದಿದ್ದ ಭದ್ರಾವತಿಯ ಶರತ್ (Sharath) ಮೃತದೇಹ 70 ಗಂಟೆಯಾದ್ರೂ ಪತ್ತೆಯಾಗಿಲ್ಲ. ಜುಲೈ 24ರಂದು ಕೊಲ್ಲೂರು(Kollur) ಬಳಿ ಇರುವ ಅರಶಿನಗುಂಡಿ ಜಲಪಾತ(waterfall) ನೋಡಲು ಶರತ್‌ ಬಂದಿದ್ದರು. ಈ ವೇಳೆ ಬಂಡೆಗಳ ಮೇಲೆ ನಿಂತು ರೀಲ್ಸ್ (Reals)ಮಾಡುವಾಗ ಕಾಲು ಜಾರಿ ಬಿದ್ದವ ಸಿಕ್ಕೇ ಇಲ್ಲ. ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮೂರು ದಿನಗಳಿಂದ ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಲೇ ಇದ್ದಾರೆ. ಕೋತಿರಾಜ್ ತಂಡ ಹುಡುಕಾಟ ನಡೆಸಿ ಪ್ರವಾಹ ಹೆಚ್ಚಾದ ಹಿನ್ನೆಲೆ ವಾಪಸ್ ತೆರಳಿದ್ರೆ, ಈಜು ತಜ್ಞ ಈಶ್ವರ್ ಮಲ್ಪೆ ತಂಡ ಕಾರ್ಯಾಚರಣೆ ಮುಂದುವರಿಸಿದೆ. ಇನ್ನೊಂಡೆದೆ ಕುಟುಂಬಕ್ಕೆ ಆಸರೆ ಆಗಬೇಕಿದ್ದ ಇದ್ದೊಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಭದ್ರಾವತಿ ತಾಲೂಕಿನ ಕೆಎಚ್ ನಗರ ಗ್ರಾಮದಲ್ಲಿರುವ ಶರತ್ ಮನೆಯಲ್ಲಿ ತಂದೆ-ತಾಯಿ ಗೋಳಾಡುತ್ತಿದ್ದಾರೆ. ದೇಗುಲಕ್ಕೆ ಹೋಗಿ ಬರ್ತೇನೆ ಎಂದಿದ್ದ ಮಗ ವಾಪಸ್ ಬರಲೇ ಇಲ್ಲ ಎಂದು ಕುಟುಂಬಸ್ತರು ಕಣ್ಣೀರು ಹಾಕ್ತಿದ್ದಾರೆ. 

ಇದನ್ನೂ ವೀಕ್ಷಿಸಿ: ರಾಜ್ಯದಲ್ಲಿ ಮುಂದುವರೆದ ವರುಣನ ಪ್ರಳಯಾರ್ಭಟ: ಮಳೆ ಹಾನಿ ವರದಿ ಪಡೆದ ಸಿಎಂ ಸಿದ್ದರಾಮಯ್ಯ

Related Video