ರಾಜ್ಯದಲ್ಲಿ ಮುಂದುವರೆದ ವರುಣನ ಪ್ರಳಯಾರ್ಭಟ: ಮಳೆ ಹಾನಿ ವರದಿ ಪಡೆದ ಸಿಎಂ ಸಿದ್ದರಾಮಯ್ಯ
ಕರುನಾಡಲ್ಲಿ ವರುಣ ತನ್ನ ಆರ್ಭಟ ಮುಂದುವರಿಸಿದ್ದಾನೆ. ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರ ಸೃಷ್ಟಿಸಿದ್ರೆ ಇನ್ನೂ ಕೆಲವು ಪ್ರದೇಶಗಳಲ್ಲಿ ನದಿಗಳು ಮೈದುಂಬಿ ಹರಿಯುತ್ತಿವೆ.
ಮಲೆನಾಡಿನಲ್ಲಿ ಮಳೆಯ ಅಬ್ಬರಕ್ಕೆ ಮನೆಗೋಡೆ ಕುಸಿದಿದೆ. ಮೂಡಿಗೆರೆಯ ಸಾಲುಮರ ಗ್ರಾಮದಲ್ಲಿ ಘಟನೆ ನಡೆದಿದ್ದು, ಅದೃಷ್ಟ ಚೆನ್ನಾಗಿತ್ತು. ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿರಂತರ ಮಳೆಗೆ(rain) ಚಿಕ್ಕಮಗಳೂರಿನ ಹೊನ್ನಮ್ಮನ ಹಳ್ಳದ ಫಾಲ್ಸ್‌ಗೆ ಜೀವಕಳೆ ಬಂದಿದೆ. ತುಂಬಿ ಹರಿಯುತ್ತಿರುವ ಫಾಲ್ಸ್‌ನಲ್ಲಿ(Falls) ಸೆಲ್ಪಿ, ರಿಲ್ಸ್ ಗೀಳಿಗೆ ಬಿದ್ದ ಪ್ರವಾಸಿಗರು ಮೋಜು ಮಸ್ತಿ ಮಾಡುತ್ತಿದ್ದಾರೆ. ಅಲ್ಲದೇ ಯುವಕರ ಹುಚ್ಚಾಟಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಹಾವೇರಿಯಲ್ಲಿ(Haveri) ವರದಾ ನದಿ ಅಪಾಯದ ಮಟ್ಟ ಮಿರಿ ಹರಿಯುತ್ತಿದೆ. ಹಾವೇರಿಯ ಹಾನಗಲ್‌ನ ಬಾಳಂಬಿಡ, ಲಕಮಾಪೂರ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು ರೈತರು ಕಂಗಾಲಾಗಿದ್ದಾರೆ. ಇನ್ನು ಮಳೆ ಸಂಬಂಧ ಸಿಎಂ ಸಿದ್ದರಾಮಯ್ಯ(CM Siddaramaiah) ನಿನ್ನೆ ಎಲ್ಲಾ ಜಿಲ್ಲೆಯ ಡಿಸಿಗಳ ಜೊತೆ ಸಭೆ ನಡೆಸಿ ಮಳೆಹಾನಿ ವರದಿ ಪಡೆದರು. ಜುಲೈನಲ್ಲಿ ಶೇ. 37 ರಷ್ಟು ಮಳೆ ಜಾಸ್ತಿಯಾಗಿದೆ. ಈವರೆಗೂ 38 ಮಂದಿಗೆ ಜೀವ ಹಾನಿಯಾಗಿದ್ದು, ಮೃತರ ಕುಟುಂಬಕ್ಕೆ 5 ಲಕ್ಷ ರೂ.ಪರಿಹಾರ ನೀಡುವುದಾಗಿ ಘೋಷಿಸಿದ್ರು.
ಇದನ್ನೂ ವೀಕ್ಷಿಸಿ: ಭಾರತ ಮಂಟಪ ಲೋಕಾರ್ಪಣೆಗೊಳಿಸಿದ ಮೋದಿ: ಶೃಂಗೇರಿ ಮಠ ಪುರೋಹಿತರ ನೇತೃತ್ವದಲ್ಲಿ ಪೂಜೆ