ಬೆಂಗಳೂರು ಜನರೇ ಹುಷಾರ್ !ಡೆಂಘೀಗೆ 27 ವರ್ಷದ ಯುವಕ ಬಲಿ, BBMP ಹೆಲ್ತ್ ಆಡಿಟ್‌ನಲ್ಲಿ ಬಯಲು
ಸಿಲಿಕಾನ್ ಸಿಟಿಯಲ್ಲಿ ಡೆಂಘೀಗೆ ಯುವಕನೊಬ್ಬ ಬಲಿಯಾಗಿದ್ದಾನೆ ಎಂದು BBMP ಹೆಲ್ತ್ ಆಡಿಟ್‌ನಲ್ಲಿ ತಿಳಿಸಲಾಗಿದೆ.
ಬೆಂಗಳೂರಲ್ಲಿ ಡೆಂಘೀಗೆ (Dengue) 27 ವರ್ಷದ ಯುವಕ ಬಲಿಯಾಗಿದ್ದಾನೆ ಎಂಬ ಆತಂಕಕಾರಿ ಸಂಗತಿ BBMP ಹೆಲ್ತ್ ಆಡಿಟ್‌ನಲ್ಲಿ(health audit) ಬಯಲಾಗಿದೆ. ಕಗ್ಗದಾಸಪುರದ ಯುವಕನ(Youth Died) ಸಾವನ್ನು ಬಿಬಿಎಂಪಿ(BBMP) ಖಚಿತಪಡಿಸಿದೆ. ಕಳೆದ ಶುಕ್ರವಾರ ಸಂಭವಿಸಿದ್ದ 2 ಡೆಂಘೀ ಶಂಕಿತ ಸಾವು ಕೇಸ್‌ನಲ್ಲಿ 27 ವರ್ಷದ ಕಗ್ಗದಾಸಪುರದ ಯುವಕನ ಸಾವಿಗೆ ಡೆಂಘೀ ಕಾರಣ ಎಂಬುದು ತಿಳಿದುಬಂದಿದೆ. 80ರ ವೃದ್ದೆಯ ಸಾವಿಗೆ ಡೆಂಘೀ ಕಾರಣವಲ್ಲ ಎಂದು ಬಿಬಿಎಂಪಿ ಹೇಳಿದೆ. 80ರ ವೃದ್ಧೆ ಸಾವಿಗೆ ಕ್ಯಾನ್ಸರ್ ಕಾರಣ ಎಂದು ಹೆಲ್ತ್ ಆಡಿಟ್ ವರದಿ ತಿಳಿಸಿದೆ. ಬೆಂಗಳೂರಲ್ಲಿ(Bengaluru) ಹೊಸದಾಗಿ 213 ಡೆಂಘೀ ಪ್ರಕರಣಗಳ ಪತ್ತೆಯಾಗಿದ್ದು, ಜೂನ್ ತಿಂಗಳಲ್ಲಿ 1,742 ಮಂದಿ ಡೆಂಘೀ ಸೋಂಕಿಗೆ ತುತ್ತಾಗಿದ್ದಾರೆ. ಮಹಿಳೆಯರು , ಮಕ್ಕಳಿಗೆ ವೇಗವಾಗಿ ಡೆಂಘೀ ಹರಡುತ್ತಿದ್ದು, ಗರ್ಭಿಣಿಯರೇ ಸೋಂಕಿಗೆ ಹೆಚ್ಚು ತುತ್ತಾಗುತ್ತಿದ್ದಾರೆ. ಎಚ್ಚರ ವಹಿಸಲು ಬಿಬಿಎಂಪಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: ಯೋಗೇಶ್ವರ್, ನಿಖಿಲ್ ಚನ್ನಪಟ್ಟಣ ಅಭ್ಯರ್ಥಿ ಯಾರು..? ಜನಸ್ಪಂದನ ಹೆಸರಲ್ಲಿ ಡಿಕೆ ಬ್ಯಾಕ್ ಟು ಬ್ಯಾಕ್ ವಿಸಿಟ್