Asianet Suvarna News Asianet Suvarna News

ಜಲಪಾತ ವೀಕ್ಷಣೆಗೆ ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ನೀರುಪಾಲು: ದೃಶ್ಯ ಮೊಬೈಲ್‌ನಲ್ಲಿ ಸೆರೆ

ಅರಶಿನಗುಂಡಿ ಜಲಪಾತ ನೋಡಲು ಹೋದ ಯುವಕ ಕಾಲು ಜಾರಿ ಬಿದ್ದು ನೀರು ಪಾಲಾಗಿರುವ ಘಟನೆ ಉಡುಪಿಯ ಕೊಲ್ಲೂರಿನಲ್ಲಿ ನಡೆದಿದೆ.
 

ಉಡುಪಿ: ಜಲಪಾತ ವೀಕ್ಷಣೆಗೆಂದು ತೆರಳಿದ್ದ ಯುವಕ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದೆ. ಉಡುಪಿ ಜಿಲ್ಲೆಯಲ್ಲಿ(Udupi) ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಭದ್ರಾವತಿಯ ಶರತ್‌ ಕುಮಾರ್‌ (23) ಎಂಬುವವರು ಜಲಪಾತ(Water falls) ವೀಕ್ಷಣೆಗೆ ಬಂದಿದ್ದರು. ಈ ವೇಳೆ ಅವರು ಕಾಲು ಜಾರಿ ಬಿದ್ದಿದ್ದು, ಬೀಳುವ ದೃಶ್ಯ ಮತ್ತೊಬ್ಬ ಯುವಕನ ಮೊಬೈಲ್‌ನಲ್ಲಿ(Mobile) ಸೆರೆಯಾಗಿದೆ. ಕೊಲ್ಲೂರು ಬಳಿಯ ಅರಶಿನಗುಂಡಿ ಜಲಪಾತದಲ್ಲಿ(arasinagundi waterfalls) ಈ ಘಟನೆ ನಡೆದಿದೆ. ಸದ್ಯ ಯುವಕನ ಮೃತದೇಹ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ. ರೀಲ್ಸ್‌ ಮಾಡುವಾಗ ಆಯತಪ್ಪಿ ಬಿದ್ದು ನೀರುಪಾಲಾಗಿದ್ದಾರೆ ಎನ್ನಲಾಗ್ತಿದೆ. ಈ ಯುವಕ ಸ್ನೇಹಿತರ ಜೊತೆ ಪ್ರವಾಸಕ್ಕೆಂದು ಕಾರಿನಲ್ಲಿ ಬಂದಿದ್ದ.

ಇದನ್ನೂ ವೀಕ್ಷಿಸಿ:  ಆಗಸ್ಟ್ ನಲ್ಲಿ 2 ಬ್ಲೂ ಮೂನ್: ಸಿಕ್ಕಿತಾ ವಿನಾಶದ ಮುನ್ಸೂಚನೆ..!?

Video Top Stories