ಕಾಲುವೆಯಲ್ಲಿ ಬೆಳೆದು ನಿಂತ ಗಿಡಗಳು.. ರೈತರಿಗೆ ಸಂಕಷ್ಟ: ಯಾದಗಿರಿ ಅನ್ನದಾತ ಕಂಗಾಲು

ಬರಾಗಲದ ಬರಡಿಸಿಲು ಬಡಿದು ರೈತರು ಮೊದಲೇ ಕಂಗೆಟ್ಟಿದ್ದಾರೆ. ಈ ಮಧ್ಯೆ ರೈತರ ಜಮೀನುಗಳಿಗೆ ನೀರು ಹರಿಸಲು ಕಾಲಿವೆ ನಿರ್ಮಿಸಿದ್ರೂ ಉಪಯೋಗವಾಗಿಲ್ಲ. ಕಾಲುವೆ ನಿರ್ಮಿಸಿ ದಶಕಗಳೇ ಕಳೆದ್ರೂ ರೈತರ ಜಮೀನಿಗೆ ನೀರು ಹರಿದಿಲ್ಲ. 
 

First Published Oct 26, 2023, 11:08 AM IST | Last Updated Oct 26, 2023, 11:08 AM IST

ಮುಂಗಾರು ಮುನಿಸಿನಿಂದಾಗಿ ಬರಗಾಲ ಆವರಿಸಿದ್ದು, ರೈತರ(Farmer) ಬದುಕು ದುಸ್ತರವಾಗಿದೆ. ಲೋಡ್ ಶೆಡ್ಡಿಂಗ್ ಅನ್ನದಾತರ ಗಾಯದ ಮೇಲೆ ಬರೆ ಎಳೆದಿದೆ. ಇನ್ನು ಕಾಲುವೆ ನಿರ್ಮಿಸಿದ್ರೂ ಜಮೀನುಗಳಿಗೆ ನೀರು ಹರಿಯದೇ ಯಾದಗಿರಿಯ(Yadagiri) ರೈತರು ಕಂಗೆಟ್ಟಿದ್ದಾರೆ. ಬಸವಸಾಗರ ಜಲಾಶಯದ ನೀರನ್ನ ರೈತರ ಜಮೀನುಗಳಿಗೆ ಹರಿಸಲು ದಶಕಗಳ ಹಿಂದೆಯೇ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಕಾಲುವೆ ನಿರ್ಮಿಸಲಾಗಿದೆ. ಆದ್ರೆ ಸೂಕ್ತ ನಿರ್ವಹಣೆ ಇಲ್ಲದೇ ಕಾಲುವೆಗಳಲ್ಲಿ ಗಿಡಗಳು ಬೆಳೆದು ನಿಂತಿದ್ದು, ಕೊನೆ ಭಾಗದ ರೈತರ ಜಮೀನುಗಳಿಗೆ ನೀರು(Water) ತಲುಪುತ್ತಿಲ್ಲ. ಇದರಿಂದಾಗಿ ಹತ್ತಾರು ಗ್ರಾಮದ ಬೆಳೆ ನಾಶವಾಗುವ ಆತಂಕ ಎದುರಾಗಿದೆ. ವಡಗೇರಾದ ವಿತರಣಾ ಕಾಲುವೆಯ 21ರ ಮೂಲಕ ಬಿಳ್ಹಾರ, ಕೋನಳ್ಳಿ, ತುಮಕೂರು ಹಾಗೂ ಕೊಂಕಲ್ ಗ್ರಾಮದ ಉಪ ಕಾಲುವೆಗಳಿಗೆ ನೀರು ಬರಬೇಕಿತ್ತು. ಆದ್ರೆ, ಕಾಲುವೆ ತುಂಬೆಲ್ಲಾ ಜಾಲಿಗಿಡ ಬೆಳೆದುಕೊಂಡಿದ್ದು, ಹೂಳು ತುಂಬಿದೆ. ಇದಕ್ಕೆ  ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎಂದು ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾಲುವೆಗಳು ದುಸ್ಥಿತಿಗೆ ತಲುಪಿವೆ. ಶ್ರಮದ ಬೆಳೆ ಉಳಿಸಿಕೊಳ್ಳಲು ಅನ್ನದಾತರು ಪರದಾಡುತ್ತಿದ್ದಾರೆ. ಕುಂಭಕರ್ಣ ನಿದ್ರೆಗೆ ಜಾರಿರುವ ಅಧಿಕಾರಿಗಳು ಇನ್ನಾದ್ರೂ ಎಚ್ಚೆತ್ತು ಕಾಲುವೆಗಳಿಗೆ ಕಾಯಕಲ್ಪ ನೀಡಬೇಕಿದೆ.

ಇದನ್ನೂ ವೀಕ್ಷಿಸಿ:  ವಿಜಯಪುರ ಆಗಲಿದ್ಯಾ ಬಸವೇಶ್ವರ ಜಿಲ್ಲೆ? ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಜಿಲ್ಲಾಡಳಿತ..!