ವಿಜಯಪುರ ಆಗಲಿದ್ಯಾ ಬಸವೇಶ್ವರ ಜಿಲ್ಲೆ? ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಜಿಲ್ಲಾಡಳಿತ..!
ದೇಶದ ಹಲವು ಕಡೆಗಳಲ್ಲಿ ಜಿಲ್ಲೆಗಳ ಹೆಸರು ಬದಲಾವಣೆ ವಿವಾದದ ಚಾಲ್ತಿಯಲ್ಲಿವೆ. ಇದೀಗ ವಿಜಯಪುರ ಜಿಲ್ಲೆಯ ಹೆಸರು ಬದಲಿಸೋ ವಿಚಾರ ಸದ್ದು ಮಾಡ್ತಿದೆ. ಜನಾಭಿಪ್ರಾಯ ಸಂಗ್ರಹಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ಉತ್ತರ ಭಾರತಕ್ಕಷ್ಟೇ ಸೀಮಿತವಾಗಿದ್ದ ಹೆಸರು ಬದಲಾವಣೆ ಪದ್ಧತಿ ಕರ್ನಾಟಕಕ್ಕೂ ಕಾಲಿಟ್ಟಿದೆ. ವಿಜಯಪುರ(Vijayapura) ಜಿಲ್ಲೆಯ ನೇಮ್ಚೇಂಜ್ ಬಗ್ಗೆ ಚರ್ಚೆಗಳು ಶುರುವಾಗಿವೆ. ಸ್ವತಃ ಜಿಲ್ಲಾಡಳಿತವೇ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿದೆ. ವಿಜಯಪುರ ಜಿಲ್ಲೆಯ ಹೆಸರನ್ನ ಬಸವ ಜಿಲ್ಲೆ(Basava District) ಅಥವಾ ಬಸವೇಶ್ವರ ಜಿಲ್ಲೆ(Basaveshwar District) ಎಂದು ಮರುನಾಮಕರಣಕ್ಕೆ ಜಿಲ್ಲಾಡಳಿತ ಅಭಿಪ್ರಾಯ ಸಂಗ್ರಹಿಸ್ತಿದೆ. ವಿಜಯಪುರ ಜಿಲ್ಲೆಯ ನಾಗರಿಕರು, ಸಂಘ-ಸಂಸ್ಥೆಗಳಿಂದ ಅಭಿಪ್ರಾಯ ಕೇಳಿದೆ. ಅಲ್ಲದೆ ಆಕ್ಷೇಪಗಳಿದ್ದರು ಸಲ್ಲಿಸಲು ಅವಕಾಶ ಕೊಟ್ಟಿದೆ. ಇದಕ್ಕಾಗಿ ಜಿಲ್ಲಾಡಳಿತ 15 ದಿನಗಳ ಕಾಲಾವಕಾಶ ಕಲ್ಪಿಸಿಕೊಟ್ಟಿದೆ. ಇನ್ನು ಸರ್ಕಾರ ಏಕಾಏಕಿ ಹೆಸರು ಬದಲಾವಣೆ ಹಾಗೂ ಅಭಿಪ್ರಾಯ ಸಂಗ್ರಹಣೆಗೆ ಮುಂದಾಗಿಲ್ಲ. ಇದು ಬಿಜೆಪಿ(BJP) ಸರ್ಕಾರದ ಅವಧಿಯಲ್ಲೇ 2022ರಿಂದಲೇ ನಿರಂತರವಾಗಿ ವಿಜಯಪುರ ಜಿಲ್ಲೆಯ ಹೆಸರು ಬದಲಾವಣೆಗೆ ಪ್ರಸ್ತಾವಣೆಗಳು ಬರ್ತಿವೆಯಂತೆ. ಜಿಲ್ಲೆಯ ಸಂಘ-ಸಂಸ್ಥೆಗಳು, ಸಂಘಟನೆಗಳು, ಧಾರ್ಮಿಕ ಮುಖಂಡರು ಸೇರಿದಂತೆ ಹಲವರು ಜಿಲ್ಲೆಯ ಹೆಸರನ್ನ ಬಸವ ಜಿಲ್ಲೆ, ಬಸವೇಶ್ವರ ಜಿಲ್ಲೆಯಾನ್ನಾಗಿ ಮರುನಾಮಕರಣಕ್ಕೆ ಮನವಿ ಸಲ್ಲಿಸಲಾಗಿದೆ.. ಆದ್ರಿಂದಲೇ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿ ಈಗ ಜಿಲ್ಲಾಡಳಿತ ಅಭಿಪ್ರಾಯ ಸಂಗ್ರಹಣೆ ಹಾಗೂ ಆಕ್ಷೇಪ ಸಲ್ಲಿಕೆಗೆ ಕಾಲಾವಕಾಶ ನೀಡಿದೆ. ಈ ವಿಚಾರವನ್ನ ಜಿಲ್ಲೆಯ ನಾಗರಿಕರಲ್ಲೂ ಸಂತಸ ಮೂಡಿಸಿದೆ.
ಇದನ್ನೂ ವೀಕ್ಷಿಸಿ: ರಾಮಮಂದಿರ ಲೋಕಾರ್ಪಣೆಗೆ ಕೂಡಿ ಬಂದ ಶುಭ ಮುಹೂರ್ತ: ಉದ್ಘಾಟನೆ ಯಾವಾಗ ಗೊತ್ತಾ ?