Asianet Suvarna News Asianet Suvarna News

ಅಪಘಾತದಲ್ಲಿ ಕಾಲು ಕಳೆದುಕೊಂಡಾಕೆ ಈಗ ಉದ್ಯಮಿ ! ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಪ್ರಶಂಸೆ

ಇದು ಬೆಂಗಳೂರು ಮಹಿಳೆಯ ಸ್ಫೂರ್ತಿದಾಯಕ ಕಥೆ 
ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಪ್ರಶಂಸೆ 
ಅಪಘಾತದಲ್ಲಿ ಕಾಲು ಕಳೆದುಕೊಂಡಿರುವ ವೀಣಾ 

ಇದು ಬೆಂಗಳೂರು(Bengaluru) ಮಹಿಳೆಯೊಬ್ಬರ ಸ್ಫೂರ್ತಿದಾಯಕ ಕಥೆಯಾಗಿದ್ದು, ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್(Cricketer VVS Laxman) ಟ್ವೀಟ್ ಮಾಡಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಭರತನಾಟ್ಯ ಕಲಾವಿದೆ ಉದ್ಯಮಿಯಾಗಿದ್ದಾರೆ(Businessman). ಅಪಘಾತದಲ್ಲಿ(Accident) ಬೆಂಗಳೂರಿನ ವೀಣಾ(Veena) ಕಾಲು ಕಳೆದುಕೊಂಡಿದ್ದರು. 17 ವರ್ಷ ಇರುವಾಗ ಬಿಎಂಟಿಸಿ ಬಸ್ ಹರಿದು ಕಾಲಿಗೆ ಗಾಯವಾದ ಪರಿಣಾಮ ಭರತನಾಟ್ಯವನ್ನು ಅವರು ಮುಂದುವರಿಸಲಿಲ್ಲ. ಎಂಎನ್‌ಸಿ ಕಂಪನಿಯಲ್ಲೂ ಸ್ವಲ್ಪ ದಿನ ಕೆಲಸ ಮಾಡಿದ್ದ ವೀಣಾ,ಎಲ್ಲವನ್ನು  ಬಿಟ್ಟು ದೋಸೆ ಕ್ಯಾಂಟೀನ್ ಶುರು ಮಾಡಿದರು. ಜೆ.ಪಿ. ನಗರದಲ್ಲಿ ಕರಿದೋಸೆ ಅನ್ನೋ ಕ್ಯಾಂಟೀನ್‌ನನ್ನು ವೀಣಾ ನಡೆಸುತ್ತಿದ್ದಾರೆ. ವೀಣಾ ಕಾರ್ಯವನ್ನು ಮೆಚ್ಚಿ ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಬಲಶಾಲಿಯಾಗಿರು. ನಿಮ್ಮ ಬದುಕು ನಮಗೆ ಸ್ಫೂರ್ತಿದಾಯಕ ಎಂದು ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.

ಮೊದಲು ಸಣ್ಣದಾಗಿ ಜೆಪಿ ನಗರದಲ್ಲಿ ಶುರು ಮಾಡಿದ್ವಿ. ಮಧುರೈ ಕಡೆ ಕರಿದೋಸೆ ಅನ್ನೋದು ಫೇಮಸ್. ಬೆಂಗಳೂರಲ್ಲಿ ಎಲ್ಲೂ ಕರಿದೋಸೆ ಸಿಗ್ತಾ ಇರಲಿಲ್ಲ. ಛಲ ಬಿಡದೆ ಎದ್ದು ನಿಂತ್ರೆ ಖಂಡಿತಾ ಸಕ್ಸಸ್ ಆಗುತ್ತೆ. ನಾನು ಬಾಲ್ಯದಿಂದಲೂ ಕ್ರಿಕೆಟ್ ನೋಡ್ತಿದ್ದೆ. ಲಕ್ಷ್ಮಣ್ ಟ್ವೀಟ್ ಮಾಡಿರೋದು ಖುಷಿ ಕೊಟ್ಟಿದೆ. ಲಕ್ಷ್ಮಣ್ ವೆರೆಗೂ ತಲುಪಿದ್ದು ಹೇಗೆ ಅನ್ನೋದೇ ಗೊತ್ತಿಲ್ಲ. ನೀವು ಹೇಳಿದಾಗಲೇ ಟ್ವೀಟ್ ಬಗ್ಗೆ ಗೊತ್ತಾಗ್ತಿರೋದು ಎಂದು ವೀಣಾ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಕುಡಿದ ಮತ್ತಿನಲ್ಲಿ ಈಜಲು ತೆರಳಿದ ಯುವಕ: ಬ್ರಿಡ್ಜ್‌ ಕಮ್‌ ಬ್ಯಾರೇಜ್‌ನಲ್ಲಿ ಜಲಸಮಾಧಿ