Asianet Suvarna News Asianet Suvarna News

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ: ಜೀವನದಿ ಕಾವೇರಿಗೆ ಮತ್ತೆ ಬಂತು ಜೀವಕಳೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂಗೆ 25 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇಂದು 25,933 ಕ್ಯೂಸೆಕ್‌ಗೆ ಒಳ ಹರಿವು ಏರಿಕೆಯಾಗಿದೆ.

First Published Jul 16, 2024, 1:03 PM IST | Last Updated Jul 16, 2024, 1:03 PM IST

ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ (Rain) ಆರ್ಭಟ ಜೋರಾಗಿದ್ದು, ಕೆಆರ್‌ಎಸ್‌ ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವು ಬರುತ್ತಿದೆ. ಗಂಟೆ ಗಂಟೆಗೂ ಕೆಆರ್‌ಎಸ್‌ ಒಳಹರಿವು ಏರಿಕೆಯಾಗ್ತಿದೆ. ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಡ್ಯಾಂ(KRS Dam). ಡ್ಯಾಂಗೆ 25 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಸೋಮವಾರ ಬೆಳಗ್ಗೆ 10,121 ಕ್ಯೂಸೆಕ್ ನೀರು ಬರ್ತಿತ್ತು. ಸಂಜೆ ವೇಳೆಗೆ 19,202 ಕ್ಯೂಸೆಕ್ ಏರಿಕೆಯಾಗಿತ್ತು. ಇಂದು 25,933 ಕ್ಯೂಸೆಕ್‌ಗೆ ಒಳ ಹರಿವು ಏರಿಕೆಯಾಗಿದೆ. ಸಂಜೆಗೆ 30 ಸಾವಿರ ಕ್ಯೂಸೆಕ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ. 24 ಗಂಟೆಯಲ್ಲೇ 2 ಟಿಎಂಸಿ ನೀರು(Water) ಸಂಗ್ರಹವಾಗಿದೆ. 107.60 ಅಡಿ ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾಗಿದೆ. ಡ್ಯಾಂ ನೀರಿನ ಮಟ್ಟ ಏರಿಕೆಯಿಂದ ರೈತರಲ್ಲಿ ಸಂತಸ ಮೂಡಿದೆ. ಒಳ ಹರಿವು ಇದೇ ರೀತಿ ಬಂದ್ರೆ ಕೆಲವೇ ದಿನದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆ ಇದೆ. ಕಾವೇರಿಗಾಗಿ ತಮಿಳುನಾಡು ಕ್ಯಾತೆಯಲ್ಲಿದ್ದ ಕರುನಾಡು ಇದೀಗ ನಿರಾಳವಾದಂತೆ ಆಗಿದೆ. ಮಳೆ ಆರ್ಭಟ ಮುಂದುವರೆದ್ರೆ ತಮಿಳುನಾಡಿಗೂ ನೀರು ಬಿಡುಗಡೆ ಮಾಡಬಹುದಾಗಿದೆ.

ಇದನ್ನೂ ವೀಕ್ಷಿಸಿ:  47.10 ಕೋಟಿ ಹಣದಲ್ಲಿ ಯಾರಿಗೆ ಎಷ್ಟು ಪಾಲು..? ಟ್ರಕ್ ಟರ್ಮಿನಲ್‌ನಲ್ಲಿ ಹೊಡೆದ ದುಡ್ಡು ಬಂಗಲೆ ನಿರ್ಮಾಣಕ್ಕೆ ಬಳಕೆ..?