47.10 ಕೋಟಿ ಹಣದಲ್ಲಿ ಯಾರಿಗೆ ಎಷ್ಟು ಪಾಲು..? ಟ್ರಕ್ ಟರ್ಮಿನಲ್‌ನಲ್ಲಿ ಹೊಡೆದ ದುಡ್ಡು ಬಂಗಲೆ ನಿರ್ಮಾಣಕ್ಕೆ ಬಳಕೆ..?
ದೇವರಾಜ್ ಅರಸ್ ಟ್ರಕ್ ಟರ್ಮಿನಲ್‌ನ ಹಣವನ್ನು ಡಿ.ಎಸ್.ವೀರಯ್ಯ ಬಂಗಲೆ ನಿರ್ಮಾಣಕ್ಕೆ ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ.
ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣಕ್ಕೆ (Devaraj Aras Truck Terminal Scam) ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡಿ.ಎಸ್.ವೀರಯ್ಯ(DS Veeriah) ಬಂಧನ ಮಾಡಲಾಗಿದೆ. ಯಾರಿಗೆ ಎಷ್ಟು ಪಾಲು ಹೋಗಿದೆ. ಟರ್ಮಿನಲ್‌ನಲ್ಲಿ ಲೂಟಿ ಹೊಡೆದ ಹಣದಲ್ಲಿ ಡಿಎಸ್ ವೀರಯ್ಯ ಪಾಲೆಷ್ಟು..? ಎಂಬ ಸ್ಫೋಟಕ ಮಾಹಿತಿ ಸಿಐಡಿ(CID) ತನಿಖಾಧಿಕಾರಿಗಳಿಗೆ ಲಭ್ಯವಾಗಿದೆ. ನಾಗರಭಾವಿಯ ಉಪಕಾರ್ ಲೇಔಟ್‌ನಲ್ಲಿ ಬಂಗಲೆ ನಿರ್ಮಾಣ ಮಾಡಲಾಗಿದೆ ಎನ್ನಲಾಗ್ತಿದೆ. ಬಂಗಲೆ ನಿರ್ಮಾಣಕ್ಕೆ ಟರ್ಮಿನಲ್ ಹಣ (Money)ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ. ಟರ್ಮಿನಲ್‌ನ ದುಡ್ಡು ಬಂಗಲೆ ಬಳಕೆಗೆ ಮಹತ್ವದ ಸಾಕ್ಷಿಗಳು ಲಭ್ಯವಾಗಿದ್ದು, ಬಂಗಲೆಗೆ ಕರೆತಂದು ಸಿಐಡಿ ಅಧಿಕಾರಿಗಳು ಮಹಜರು ನಡೆಸಿದ್ದಾರೆ. ಸಿಐಡಿ ಡಿವೈಎಸ್‌ಪಿ ಉದಯ್ ಭಾಸ್ಕರ್ ನೇತೃತ್ವದಲ್ಲಿ ಮಹಜರು ನಡೆಸಲಾಗಿದೆ. ನಾಗರಭಾವಿಯ ಉಪಕಾರ್ ಲೇಔಟ್‌ನಲ್ಲಿ ಬೃಹತ್ ಬಂಗಲೆ ನಿರ್ಮಾಣ ಮಾಡಲಾಗಿದೆ. 60 * 80 ಅಡಿ ವಿಸ್ತೀರ್ಣದ ಬೃಹತ್ ನಿವೇಶನದಲ್ಲಿ ಬಂಗಲೆ ನಿರ್ಮಾಣವಾಗಿದೆ. 3 ಮಹಡಿಯ ಮನೆ ಕಾಮಗಾರಿಯಲ್ಲಿ ಸಂಪೂರ್ಣ ಐಷಾರಾಮಿ ವಸ್ತುಗಳ ಬಳಕೆ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ದದ್ದಲ್‌ಗೆ ಮುಳುವಾಗುತ್ತಾ ಆಸ್ತಿ ವ್ಯವಹಾರ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ಶಾಸಕರು ಮಾರಾಟ ಮಾಡಿದ್ದು ಏಕೆ?