
ವಿಜಯಪುರ: ಪೊಲೀಸರಿಗೆ ಶಾಕ್ ಕೊಟ್ಟ ಕೊರೋನಾ ಹೆಮ್ಮಾರಿ..!
ಕೊರೋನಾ ಲಕ್ಷಣ ಇಲ್ಲದಿದ್ದರೂ ಪೊಲೀಸ್ ಪೇದೆಗೆ ಅಂಟಿದ ಕೊರೋನಾ| ವಿಜಯಪುರ ಜಲನಗರದ ಪೊಲೀಸ್ ಠಾಣೆಯ ಪೇದೆಗೆ ಕೋವಿಡ್ ದೃಢ| ಠಾಣೆಯಲ್ಲಿದ್ದ ಎಲ್ಲ ಪೊಲೀಸರಿಗೂ ಸ್ವ್ಯಾಬ್ ಟೆಸ್ಟ್|
ವಿಜಯಪುರ(ಜೂ.14): ಕೊರೋನಾ ಲಕ್ಷಣಗಳು ಇಲ್ಲದಿದ್ದರೂ ಪೊಲೀಸ್ ಪೇದೆಗೆ ಮಾಹಾಮಾರಿ ಕೊರೋನಾ ವೈರಸ್ ತಗುಲಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಹೀಗಾಗಿ ಪೊಲೀಸ್ ಠಾಣೆಯನ್ನ ಕಲ್ಯಾಣ ಮಂಟಪಕ್ಕೆ ಶಿಫ್ಟ್ ಮಾಡಲಾಗಿದೆ. ಠಾಣೆಯಲ್ಲಿದ್ದ ಎಲ್ಲ ಪೊಲೀಸರಿಗೂ ಸ್ವ್ಯಾಬ್ ಟೆಸ್ಟ್ ಮಾಡಿಸಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ: ಮಾರ್ಕೆಟ್ ಬಂದ್
ಈ ಮೂಲಕ ವಿಜಯಪುರ ಜಿಲ್ಲೆಯ ಪೊಲೀಸರಿಗೆ ಕೊರೋನಾ ವೈರಸ್ ಶಾಕ್ ಕೊಟ್ಟಿದೆ. ಸೋಂಕಿತ ಪೇದೆ ನಗರದ ಜಲನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹೀಗಾಗಿ ಪೊಲೀಸ್ ಠಾಣೆಯನ್ನ ಸೀಲ್‌ಡೌನ್ ಮಾಡಲಾಗಿದೆ.