ಎಲ್ಲಾ ಮರೆತು ಮತ್ತೆ ಪತಿಯ ರಕ್ಷಣೆಗೆ ನಿಂತ ವಿಜಯಲಕ್ಷ್ಮಿ! ಮನುಷತ್ವ ಮರೆತವನನ್ನೇ ಕ್ಷಮಿಸಿದ್ದಳು ಕ್ಷಮಯಾಧರಿತ್ರಿ..!

ಮತ್ತೊಮ್ಮೆ ಕ್ಷಮಯಾಧರಿತ್ರಿಯಾದ ದರ್ಶನ್ ಪತ್ನಿ..!
ಕ್ರೌರ್ಯ ಮೆರೆದ ನಟ "ಭಯಂಕರ" ಕಂಬಿ ಹಿಂದೆ..!
ಗಂಡನ ರಕ್ಷಣೆಗೆ ಕಾನೂನು ಹೋರಾಟಕ್ಕಿಳಿದ ಹೆಂಡತಿ!

Share this Video
  • FB
  • Linkdin
  • Whatsapp


ಕಟ್ಟಿಕೊಂಡ ಗಂಡ ಕುಡುಕ, ಕೊಲೆಗಾರನೇ ಆಗಿರಲಿ. ಹೆಂಡತಿಯಾದವಳಿಗೆ ಆತನೇ ಸರ್ವಸ್ವ. ಆತ ಹೊಡೆದ್ರೂ ಸರಿ, ಬಡಿದ್ರೂ ಸರಿ. ಪರಸ್ತ್ರೀ ಸಹವಾಸ ಮಾಡಿದ್ರೂ ಸರಿ. ಕೊನೆಗೆ ಆಕೆಯ ಕಾರಣಕ್ಕೆ ಜೈಲು ಸೇರಿದ್ರೂ ಸರಿ. ಎಷ್ಟಾದ್ರೂ ಗಂಡ ಅಲ್ವಾ ಅಂತ ಮತ್ತೊಮ್ಮೆ ಕ್ಷಮಯಾಧರಿತ್ರಿಯ ಅವತಾರ ಎತ್ತಿದ್ದಾರೆ ಕಿಲ್ಲಿಂಗ್ ಸ್ಟಾರ್ ದರ್ಶನ್ ತೂಗುದೀಪನ(Darshan Thoogudeep) ಪತ್ನಿ ವಿಜಯಲಕ್ಷ್ಮಿ. 13 ವರ್ಷಗಳ ಹಿಂದೆ ಸಾಯುವಂತೆ ಹೊಡೆದಿದ್ದ ಗಂಡನನ್ನು ಕ್ಷಮಿಸಿದ್ದ ವಿಜಯಲಕ್ಷ್ಮಿ(Vijayalakshmi), ಈಗ ಮತ್ತೊಮ್ಮೆ ದರ್ಶನ್‌ಗೆ ಕ್ಷಮೆ ನೀಡಲು ಮುಂದಾಗಿದ್ದಾರೆ. 2011ರಲ್ಲಿ ಪತ್ನಿ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದ ದರ್ಶನ್. ಆಗಿನ್ನೂ ದರ್ಶನ್ ತೂಗುದೀಪ ದೊಡ್ಡ ಸ್ಟಾರ್ ಆಗಿರ್ಲಿಲ್ಲ. ಆರಕ್ಕೇರದ ಮೂರಕ್ಕಿಳಿಯದ ನಟ ಅನ್ನಬಹುದೇನೋ. ಹಾಗಿತ್ತು ಚಿತ್ರರಂಗದಲ್ಲಿ ದರ್ಶನ್ ಸ್ಥಿತಿಗತಿ. ಒಂದು ದಿನ ಇದೇ ದರ್ಶನ್ ಬೇಡದ ವಿಚಾರಕ್ಕೆ ಸುದ್ದಿಯಾಗಿ ಬಿಡ್ತಾನೆ. ಕುಡಿದ ಮತ್ತಿನಲ್ಲಿ ಪತ್ನಿ ವಿಜಯಲಕ್ಷ್ಮಿಗೆ ಮುಖ-ಮೂತಿ ಅಂತ ನೋಡದೆ ಸಾಯುವ ಹಾಗೆ ಹೊಡೆದು ಬಿಡ್ತಾನೆ. ವಿಜಯಲಕ್ಷ್ಮಿ ಆಸ್ಪತ್ರೆ ಸೇರಿದ್ರೆ, ಪತ್ನಿಗೆ ಹೊಡೆದ ತಪ್ಪಿಗೆ ದರ್ಶನ್ ಪರಪ್ಪನ ಅಗ್ರಹಾರ ಜೈಲು ಪಾಲಾಗ್ತಾನೆ. ಕೊನೆಗೆ ಜೈಲಿನಿಂದ ಬಿಡಿಸಿದ್ದು ಇದೇ ವಿಜಯಲಕ್ಷ್ಮಿ. ಜೈಲಿಂದ ಹೊರ ಬಂದ್ಮೇಲೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ತೂಗುದೀಪ ಜೊತೆ ಮಾಧ್ಯಮಗಳ ಮುಂದೆ ಬಂದಿದ್ದ ದರ್ಶನ್, ಯಾವುದೋ ಕೆಟ್ಟ ಘಳಿಗೆಯಲ್ಲಿ ಇಷ್ಟೆಲ್ಲಾ ನಡೆದು ಹೋಯ್ತು, ಇನ್ನು ಇಂಥಾ ತಪ್ಪು ಮಾಡಲ್ಲ, ನನ್ನನ್ನು ಕ್ಷಮಿಸಿ ಅಂದಿದ್ದ. ಪತ್ನಿಯ ಕ್ಷಮೆಯನ್ನೂ ಕೇಳಿದ್ದ. ಅವತ್ತು ತನ್ನ ಮೇಲೆ ನಡೆದ ಕ್ರೂರ ಹಲ್ಲೆಯನ್ನು ಕ್ಷಮಿಸಿ, ದರ್ಶನ್‌ಗೆ ಸೆಕೆಂಡ್ ಚಾನ್ಸ್ ಕೊಟ್ಟವಳು ಈ ಹೆಣ್ಣು ಮಗಳು ವಿಜಯಲಕ್ಷ್ಮಿ. 

ಇದನ್ನೂ ವೀಕ್ಷಿಸಿ: ಆನ್ ಸ್ಕ್ರೀನ್ ಹೀರೋ..ಅಸಲಿ ಬದುಕಲ್ಲಿ ವಿಲನ್! ಅಭಿಮಾನಿ ದೇವರುಗಳಿಗಾಗಿ ಡಾ.ರಾಜ್ ಮಾಡಿದ್ದೇನು..?

Related Video