Asianet Suvarna News Asianet Suvarna News

ಆನ್ ಸ್ಕ್ರೀನ್ ಹೀರೋ..ಅಸಲಿ ಬದುಕಲ್ಲಿ ವಿಲನ್! ಅಭಿಮಾನಿ ದೇವರುಗಳಿಗಾಗಿ ಡಾ.ರಾಜ್ ಮಾಡಿದ್ದೇನು..?

ಸೆಲೆಬ್ರಿಟಿಗಳಿಗೆ ದರ್ಶನ್ ಕೊಟ್ಟ ಮೆಸೇಜ್ ಏನು..?
ದರ್ಶನ್ ಸುತ್ತಲೂ ಈಗ ನೂರೆಂಟು ಕಂಟಕಗಳು!
ನಿರ್ಮಾಪಕರಿಗೇ ಎದುರಾಗಿತ್ತಾ ಧಮ್ಕಿ ದರ್ಶನ?

ಅಣ್ಣಾವ್ರು ಯಾವ ನಿರ್ಮಾಪಕರನ್ನ ಅನ್ನದಾತ ಅಂತ ಕರೆದಿದ್ರೋ, ಅದೇ ನಿರ್ಮಾಪಕರನ್ನ ಡೆವಿಲ್ ಹೀರೋ ತಗುಡು ಅಂತ ಸಂಬೋಧಿಸಿದ್ರು.ಈ ಗ್ಯಾಂಗ್‌ನಲ್ಲಿರೋ ಅತಿ ದೊಡ್ಡ ಹೆಸರು ನಟ ದರ್ಶನ್ (Darshan). ತನ್ನ ಜೊತೆಗಿದ್ದ ಪವಿತ್ರಾಗೌಡಗೆ(Pavitra Gowda) ಕಳಿಸಬಾರದ ಮೆಸೇಜ್ ಕಳಿಸಿದ ಅನ್ನೋ ಕಾರಣಕ್ಕೆ, ದೂರದ ಚಿತ್ರದುರ್ಗದಿಂದ(Chitradurga), ರಾತ್ರೋರಾತ್ರಿ ರೇಣುಕಾಸ್ವಾಮಿನಾ ಕಿಡ್ನಾಪ್(Renukaswamy murder case) ಮಾಡ್ಸಿದ್ರಂತೆ. ಮಾರನೇ ದಿನ ಬೆಳಗಾಗೋ ಹೊತ್ತಿಗೆ, ಹೆಣವಾಗಿಸಿದರಂತೆ. ಇಲ್ಲಿ ವಿಚಿತ್ರ ಅಂದ್ರೆ ಸತ್ತ ರೇಣುಕಾಸ್ವಾಮಿ ಕೂಡ ದರ್ಶನ್ ಫ್ಯಾನ್‌. ಆ ರೇಣುಕಾಸ್ವಾಮಿ ಕುಟುಂಬವೇ ಇವತ್ತು ಕಣ್ಣೀರಲ್ಲಿ ಕೈ ತೊಳೆಯೋ ಹಾಗಾಗಿದೆ. ಗರ್ಭಿಣಿ ಹೆಂಡತಿ ಅನುಕ್ಷಣ, ಇಲ್ಲದ ಗಂಡನ ನೆನೆದು ಬಿಕ್ಕಿಬಿಕ್ಕಿ ಅಳುವಂತಾಗಿದೆ. ದರ್ಶನ್ ಸಾದಾ ಸೀದಾ ನಟ ಅಲ್ಲ. ಆತನ ಹಿಂದೆ ದೊಡ್ಡದೊಂದು ಅಭಿಮಾನಿ ಪಡೆಯೇ ಇದೆ. ಇವತ್ತು ದರ್ಶನ್ ಹಾಗೂ ಆ ಗ್ಯಾಂಗಿನ ಸುತ್ತಲೂ ಆರೋಪಗಳ ಪರ್ವತವೇ ನಿರ್ಮಾಣಗೊಂಡಿದೆ. ಕ್ಷಣಕ್ಕೊಂದು ಸಾಕ್ಷಿಗಳು ಸಿಕ್ತಿದ್ದಾವೆ. ಇಷ್ಟಾದ್ರೂ ಡಿ ಬಾಸ್ ಪರ ನಿಂತವರ ಸಂಖ್ಯೆ ಏನೂ ಕಮ್ಮಿ ಆಗಿಲ್ಲ. ಆದ್ರೆ, ರಾಜ್ಯದ ನಾನಾ ಊರುಗಳಲ್ಲಿ ದರ್ಶನ್ ವಿರುದ್ಧ ಆಕ್ರೋಶವೂ ಉಕ್ಕಿದೆ.

ಇದನ್ನೂ ವೀಕ್ಷಿಸಿ:  ದರ್ಶನ್ ಕ್ರೈಂ ಡೈರಿಯಲ್ಲಿರೋದು ರೇಣುಕಾಸ್ವಾಮಿ ಮಾತ್ರವಲ್ಲ..ನಟನ ಹಿಟ್‌ ಲಿಸ್ಟ್‌ನಲ್ಲಿ ಇರೋರು ಯಾರ‍್ಯಾರು ಗೊತ್ತಾ..?

Video Top Stories