Asianet Suvarna News Asianet Suvarna News

ಬೆಂಗಳೂರಲ್ಲಿ ‘ಸಾವರ್ಕರ್ ಸಮಗ್ರ ಸಂಪುಟ-6’ ಪುಸ್ತಕ ಲೋಕಾರ್ಪಣೆ ಮಾಡಿದ ಬಿ.ಎಲ್‌. ಸಂತೋಷ್‌

ಈ ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಮೊಮ್ಮಗ, ರೋಹಿತ್‌ ಚಕ್ರತೀರ್ಥ ಸೇರಿ ಹಲವರು ಭಾಗಿಯಾಗಿದ್ದು, ಬಿ.ಎಲ್‌. ಸಂತೋಷ್‌ ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದಾರೆ. 

ಸಾವರ್ಕರ್‌ ಜನ್ಮದಿನದಂದೇ ಸಂಸತ್‌ ಭವನ ಲೋಕಾರ್ಪಣೆಯಾಗುತ್ತಿರುವುದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿವೆ. ಈ ನಡುವೆ ಅವರ ಜನ್ಮದಿನಕ್ಕೂ ಮುನ್ನವೇ ಬೆಂಗಳೂರಲ್ಲಿ ಸಾವರ್ಕರ್‌ ಸಮಗ್ರ ಸಂಪುಟ - 6 ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ವಾಡಿಯಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವರ್ಕರ್‌ ಸಾಹಿತ್ಯ ಸಂಘ, ಮಿಥಿಕ್‌ ಸೊಸೈಟಿ ಸಹಯೋಗದಲ್ಲಿ ಈ ಪುಸ್ತಕ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಮೊಮ್ಮಗ, ರೋಹಿತ್‌ ಚಕ್ರತೀರ್ಥ ಸೇರಿ ಹಲವರು ಭಾಗಿಯಾಗಿದ್ದು, ಬಿ.ಎಲ್‌. ಸಂತೋಷ್‌ ಈ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದಾರೆ. 
 

Video Top Stories