ಕೊಲೆಗಾರನನ್ನು ಒಂದು ವರ್ಷದಲ್ಲೇ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ..ನಿಜವಾಯ್ತು ವರ್ತೆ ಪಂಜುರ್ಲಿ ನುಡಿ!

ಕೊಲೆ ಆರೋಪಿ ವರ್ತೆ ಪಂಜುರ್ಲಿ ದೈವ ಹೇಳಿದಂತೆ ಕೋರ್ಟ್‌ ಮುಂದೆ ಬಂದು ಶರಣಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
 

Share this Video
  • FB
  • Linkdin
  • Whatsapp

ಕೊಲೆ ಮಾಡಿದವನು ಎಲ್ಲೇ ಅಡಗಿದ್ದರೂ ಒಂದು ವರ್ಷದಲ್ಲೇ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ ಎಂದು ಕುಟುಂಬಸ್ಥರಿಗೆ ವರ್ತೆ ಪಂಜುರ್ಲಿ(Varthe Panjurli) ದೈವ ನೀಡಿದ್ದ ಅಭಯ ನಿಜವಾಗಿದೆ. ಕಳೆದೊಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಕೊಲೆ(Murder) ಆರೋಪಿ ತಾನೇತಾನಾಗಿ ಕೋರ್ಟ್(Court) ಮುಂದೆ ಹಾಜರಾಗಿದ್ದಾನೆ. ಆರೋಪಿ ಶರಣಾಗಿರುವುದು ವರ್ತೆ ಪಂಜುರ್ಲಿ ದೈವ ನುಡಿದ ಮಾತು ಕಾರಣವೆಂಬ ಮಾತು ಕೇಳಿಬಂದಿದೆ. ಒಂದೂವರೆ ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದಿಂದ ಉಡುಪಿ(Udupi) ಜನತೆ ಬೆಚ್ಚಿಬಿದ್ದಿತ್ತು. ಫೆ.6, 2023ರಂದು ಕಾಪು ಪಾಂಗಾಳದಲ್ಲಿ ಕೋಲದಲ್ಲಿ ನಡೆಯುತ್ತಿದ್ದ ವೇಳೆಯೇ ಸ್ನೇಹಿತರಿಂದ ಯುವಕ, ವರ್ತೆ ಪಂಜುರ್ಲಿ ಭಕ್ತನಾಗಿದ್ದ ಶರತ್ ಶೆಟ್ಟಿ ಎಂಬುವವರನ್ನ ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದ ಪಾತಕಿಗಳು. ಕೊಲೆ ಬಳಿಕ ಅಲ್ಲಿಂದ ಪರಾರಿಯಾಗಿದ್ದರು.

ಇದನ್ನೂ ವೀಕ್ಷಿಸಿ:  Today Horoscope: ಇಂದು ಬುಧ ಪರಿವರ್ತನೆ ಇದ್ದು, ಇದರಿಂದ ಯಾವ ರಾಶಿಗೆ ಶುಭ, ಅಶುಭ ಫಲಗಳಿವೆ?

Related Video