Asianet Suvarna News Asianet Suvarna News

Tumakuru Crime News: ಕೆರೆಯೊಂದರಲ್ಲಿ ಪತ್ತೆಯಾಯ್ತು ಜೋಡಿ ಶವ..! ವಯಸ್ಕನ ಜೊತೆ ಯುವತಿ ಸಾವಿಗೆ ಶರಣಾಗಿದ್ಯಾಕೆ..?

ತುಮಕೂರಿನ ಕೊರಟಗೆರೆಯಲ್ಲಿ ಎರಡು ಮಕ್ಕಳ ತಂದೆಯ ಜೊತೆ ಹದಿಹರೆಯದ ಯುವತಿ ಪ್ರೀತಿಯಲ್ಲಿ ಬಿದ್ದು, ಬಳಿಕ ಇಬ್ಬರು ಕೆರೆಗೆ ಹಾರಿ ಪ್ರಾಣವನ್ನು ಕಳೆದುಕೊಂಡಿದ್ದಾರೆ.

ಈ ಪ್ರೇಮ ಅನ್ನೋದೆ ಹೀಗೆ. ಈಗಷ್ಟೇ 18 ತುಂಬಿ 19 ವರ್ಷಕ್ಕೆ ಬಿದ್ದಿದ್ದ ಹದಿಹರೆಯದ ಮುದ್ದು ಹುಡುಗಿ. ಕಾಲೇಜು ಒಂದರಲ್ಲಿ ಪದವಿ ವ್ಯಾಸಾಂಗ ಮಾಡ್ಕೊಂಡಿದ್ಳು. ಕಾಲೇಜು ಓದು ಫ್ರೆಂಡ್ಸ್ ಅಂತ ಇರ್ಬೇಕಿದ್ದ ಯುವತಿ ಪ್ರೀತಿ ಪ್ರೇಮ(Love) ಅಂತ ಹುಚ್ಚು ಹಿಡಿಸಿಕೊಂಡಿದ್ಳು. ಅದು ಕೂಡ ಎರಡು ಮಕ್ಕಳ ತಂದೆಯ(Father of two children) ಜೊತೆ. ಇಲ್ಲೇ ಆಗಿದ್ದು ಯಡವಟ್ಟು ನೋಡಿ. ಬದುಕು ಏನು ಎಂಬುದೆ ಸರಿಯಾಗಿ ಅರಿಯದ ಯುವತಿ(Girl) ಬಾಳಲ್ಲಿ ವಯಸ್ಕ ಆಟ ಆಡಿದ್ದೇ ಇಬ್ಬರು ಸಾವಿನ ಮನೆ ಸೇರುವಂತೆ ಮಾಡಿದೆ. ಅಸಲಿಗೆ ಈ ಅನನ್ಯಾ ಹಾಗೂ ರಂಗಶಾಮಣ್ಣ ಇಬ್ರ ಪ್ರೀತಿ ಪ್ರೇಮ ಅನ್ಕೊಂಡು ಓಡಾಡುತ್ತಿದ್ದ ವಿಚಾರ ಊರ ಜನಕ್ಕೆ ಗೊತ್ತಾಗಲು ಹೆಚ್ಚಿಗೆ ದಿನ ಬೇಕಿರ್ಲಿಲ್ಲ. ಆದ್ರೆ ಎರಡು ಮಕ್ಕಳ ತಂದೆಯಾದ ರಂಗಶಾಮಣ್ಣ ಜೊತೆ ಈ 19 ವರ್ಷದ ಯುವತಿಗೆ ಅದೆಂತಾ ಪ್ರೀತಿ ಅಂತ ಊರ ಜನ ಗುಸು ಗುಸು ಮಾತಾಡೋಕೆ ಶುರು ಮಾಡಿದ್ರು. ಜನ ಹೀಗೆ ಮಾತಾಡಿಕೊಳ್ಳುತ್ತಿದ್ದಾರೆ ಎಂದು ಈ ಜೋಡಿಗೆ ತಿಳಿಯಲು ಕೂಡ ಹೆಚ್ಚು ದಿನ ಬೇಕಿರ್ಲಿಲ್ಲ. ಅನನ್ಯಾಗೆ ಎಕ್ಸಾಂನಲ್ಲಿ ಕಡಿಮೆ ಅಂಕ ಬಂತು ಇದೇ ಕಾರಣಕ್ಕೆ ಆಕೆ ಸೂಸೈಡ್ ಮಾಡಿಕೊಂಡಿದ್ದಾಳೆ ಅನ್ನೋದು ಪೋಷಕರ ವಾದ. ಎಕ್ಸಾಂನಲ್ಲಿ ಕಡಿಮೆ ಅಂಕ ಬರೋದಕ್ಕೆ ಸೂಸೈಡ್ ಮಾಡ್ಕೋಳೋದೆ ಆದ್ರೆ ಇಬ್ರು ಒಟ್ಟಿಗೆ ಯಾಕ್ ಕೆರೆಗೆ ಹಾರಿದ್ರು ಅನ್ನೋದು ಊರ್ ಜನರ ಪ್ರತಿವಾದ. 

ಇದನ್ನೂ ವೀಕ್ಷಿಸಿ:  ಸಿಎಂ ಬದಲಾವಣೆ ಪ್ರಸ್ತುತ, ಅಪ್ರಸ್ತುತ ಅಂತ ಹೇಳಲ್ಲ, ಯಾರೋ 4 ಜನ ಮಾತಾಡಿದ್ರೆ ನಿರ್ಧರಿಸಲು ಆಗಲ್ಲ: ಪರಮೇಶ್ವರ್