ತಪ್ಪು ಮಾಡಿದ್ರೆ ಕ್ರಮಕೈಗೊಳ್ಳಿ ಎಂದ ಸಚಿವರು?: SIT ವರದಿಗೂ ಮುನ್ನವೇ ನಾಗೇಂದ್ರ ರಾಜೀನಾಮೆ ಪಕ್ಕಾನಾ?

ಕಾಂಗ್ರೆಸ್‌ಗೆ ವಾಲ್ಮೀಕಿ ಸ್ಕ್ಯಾಮ್ ಕಂಟಕ ಎದುರಾಗಿದ್ದು, ಸಿಎಲ್‌ಪಿ ಸಭೆ ಬಳಿಕ ಈಗ ಹಿರಿಯ ಸಚಿವರ ಜೊತೆ ಸಿಎಂ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ.
 

First Published Jun 3, 2024, 1:30 PM IST | Last Updated Jun 3, 2024, 1:31 PM IST

ಲೋಕಸಭೆ ಫಲಿತಾಂಶದ (Lok Sabha result) ಹೊತ್ತಲ್ಲೇ ಕಾಂಗ್ರೆಸ್‌ಗೆ ವಾಲ್ಮೀಕಿ ಸ್ಕ್ಯಾಮ್ ಕಂಟಕ(Valmiki corporation Scam) ಎದುರಾಗಿದೆ. ಕಾಂಗ್ರೆಸ್ ನಾಯಕರಿಗೆ ಇದು ತಲೆನೋವಾಗಿ ಪರಿಣಮಿಸಿದ್ದು,ಸಿಎಲ್ಪಿ ಸಭೆ(CLp Meeting) ಬಳಿಕ ಹಿರಿಯ ಸಚಿವರ ಜೊತೆ ಸಿಎಂ ಹೈವೋಲ್ಟೇಜ್ ಸಭೆ ನಡೆಸಲಿದ್ದಾರೆ ಎಂಂದು ತಿಳಿದುಬಂದಿದೆ.ಈ ಸಭೆಗೆ ಡಿಸಿಎಂ ಡಿಕೆಶಿ ಸೇರಿದಂತೆ 10ಕ್ಕೂ ಹೆಚ್ಚು ಸಚಿವರ ಜೊತೆ ಸಿಎಂ ಮೀಟಿಂಗ್ ಮಾಡಲಿದ್ದಾರೆ. ಈ ಮೂಲಕ ಒಂದು ಗಂಟೆಗೂ ಹೆಚ್ಚು ಕಾಲ ಎಸ್‌ಟಿ ನಿಗಮದ ಅಕ್ರಮದ ಬಗ್ಗೆ ಸಿಎಂ ಚರ್ಚೆ ಮಾಡಲಿದ್ದಾರೆ. ಇದಾದ ನಂತರದಲ್ಲಿ ನಾಗೇಂದ್ರ ಪ್ರಕರಣದ ಬಗ್ಗೆ ಹಿರಿಯ ಸಚಿವರ ಅಭಿಪ್ರಾಯವನ್ನು ಸಿಎಂ ಪಡೆಯಲಿದ್ದಾರೆ. 

ಈ ನಡುವೆ ಸಚಿವ ನಾಗೇಂದ್ರ (Minister Nagendra) ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಿ ಎಂದು ಸಚಿವರು ಹೇಳಲು ಮುಂದಾಗಿದ್ದಾರೆ ಎನ್ನಲಾಗಿದೆ. ನಂತರದಲ್ಲಿ ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡುವ ಜವಾಬ್ದಾರಿ ಸಿಎಂ,ಡಿಸಿಎಂ (CM, DCM) ಹೆಗಲಿಗೆ ಬೀಳಲಿದೆ. ಹೀಗಾಗಿ ಎಸ್‌ಟಿ ಅಭಿವೃದ್ಧಿ ನಿಗಮದ (ST Development Corporation) ಸಚಿವ ನಾಗೇಂದ್ರ ತಲೆದಂಡ ಬಹುತೇಕ ಫಿಕ್ಸ್ ಎಂದು ತಿಳಿದುಬಂದಿದೆ. 

ಇದನ್ನೂ ವೀಕ್ಷಿಸಿ:  ಭವಾನಿ ರೇವಣ್ಣ ಪತ್ತೆಗೆ ಶತ ಪ್ರಯತ್ನ: ಭವಾನಿ ಆಪ್ತರು, ಸಂಬಂಧಿಕರ ಮನೆಯಲ್ಲಿ SIT ಶೋಧ