ಭವಾನಿ ರೇವಣ್ಣ ಪತ್ತೆಗೆ ಶತ ಪ್ರಯತ್ನ: ಭವಾನಿ ಆಪ್ತರು, ಸಂಬಂಧಿಕರ ಮನೆಯಲ್ಲಿ SIT ಶೋಧ

ಭವಾನಿ ರೇವಣ್ಣ ಬೇಟೆಗೆ ಎಸ್ಐಟಿ  ಮುಂದಾಗಿದ್ದು, ನಿರೀಕ್ಷಣಾ ಜಾಮೀನು ಅರ್ಜಿ ಇತ್ಯರ್ಥ್ಯಕ್ಕೂ ಮುನ್ನವೇ ಬಂಧನಕ್ಕೆ ಪ್ಲ್ಯಾನ್‌ ಮಾಡಲಾಗಿದೆ.
 

Share this Video
  • FB
  • Linkdin
  • Whatsapp

ಎಸ್‌ಐಟಿ ವಿಚಾರಣೆಗೆ ಭವಾನಿ ರೇವಣ್ಣ(Bhavani Revanna ) ಹಾಜರಾಗಿಲ್ಲ. ಹುಡುಕಾಟಕ್ಕಾಗಿ ಮೈಸೂರಿನಲ್ಲೇ 5 ಟೀಂ ಶೋಧ ನಡೆಸುತ್ತಿದೆ. ಎಸ್‌ಐಟಿ(SIT) ಪೊಲೀಸರಿಂದ ಭವಾನಿ ರೇವಣ್ಣ ಅಕ್ಕನ ಮನೆಯಲ್ಲಿ ಶೋಧ ನಡೆಸಲಾಗುತ್ತಿದೆ. ಮಹಿಳಾ ಸಿಬ್ಬಂದಿ ಸೇರಿ 5 ಜನರ ತಂಡದಿಂದ ತಪಾಸಣೆ ಮಾಡಲಾಗುತ್ತಿದೆ. ಕಳೆದ 15 ದಿನಗಳಿಂದ ಭವಾನಿ ರೇವಣ್ಣ ನಾಪತ್ತೆಯಾಗಿದ್ದಾರೆ. ಭವಾನಿ ಆಪ್ತರು, ಸಂಬಂಧಿಕರ ಮನೆಯಲ್ಲಿ SIT ಶೋಧ ನಡೆಸುತ್ತಿದೆ. ಭವಾನಿ ಸಿಮ್ ನೆಟ್ವರ್ಕ್ ಪರಿಶೀಲನೆ ನಡೆಸುತ್ತಿರೋ SIT. ಇಂದು ಹೈಕೋರ್ಟ್‌ನಲ್ಲಿ ಭವಾನಿ ನಿರೀಕ್ಷಣಾ ಜಾಮೀನು ಅರ್ಜಿ ನಡೆಯಲಿದ್ದು, ಅರ್ಜಿ ವಿಚಾರಣೆಗೂ ಮುನ್ನ ವಶಕ್ಕೆ(Arrest) ಪಡೆಯಲು SIT ಪ್ಲ್ಯಾನ್ ಮಾಡಿದೆ.

ಇದನ್ನೂ ವೀಕ್ಷಿಸಿ:  'ಕೈ' ಶಾಸಕರಿಗೆ ಸಮೀಕ್ಷೆ ತಳಮಳ: ಎಕ್ಸಿಟ್ ಪೋಲ್ ನೋಡಿ ಧೃತಿಗೆಡುವ ಅವಶ್ಯಕತೆ ಇಲ್ಲ ಎಂದ ಸಿಎಂ

Related Video