ವಾಲ್ಮೀಕಿ ನಿಗಮದ ಹಣ ಎಲ್ಲೆಲ್ಲಿಗೆ ಹೋಯ್ತು ? ಯಾರ ಅಕೌಂಟ್‌ಗೆ ಹೋಗಿದೆ ಎಂಬ ಮಾಹಿತಿ ಇಡಿಗೆ ಸಿಕ್ಕಿದೆಯಾ ?
ಎಸ್ಐಟಿ ಮುಂದೆ ತನಿಖೆಗೆ ಹಾಜರಾಗಿ ಬಂದಿರೋ ಶ್ರೀನಿವಾಸ ರಾವ್
ಹಣ ಮರಳಿಸುವಂತೆ ಸೂಚನೆ ನೀಡಿರುವ ಎಸ್ಐಟಿ ಅಧಿಕಾರಿಗಳು
ಹಣ ವಾಪಸ್ ನೀಡೋದಾಗಿ ಒಪ್ಪಿಕೊಂಡು ಬಂದಿರೋ ಶ್ರೀನಿವಾಸ
ಬಳ್ಳಾರಿ: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ(Valmiki Corporation scam) ಹಣ ಯಾರ ಅಕೌಂಟ್‌ಗೆ ಹೋಗಿದೆ ಎಂಬ ಮಾಹಿತಿಯನ್ನು ಇಡಿ(ED) ಪಡೆದಿದೆ. ಇಡಿಗಿಂತ ಮುಂಚೆಯೇ ಎಸ್ಐಟಿ (SIT) ಅಧಿಕಾರಿಗಳಿಂದ ವಿಚಾರಣೆ ನಡೆಸಲಾಗಿದೆ. ಹೈದರಾಬಾದ್, ಬಳ್ಳಾರಿ ಅಷ್ಟೇ ಅಲ್ಲ ರಾಯಚೂರು, ಮಂಡ್ಯ ತುಮಕೂರು ಅಕೌಂಟ್‌ಗೂ ವಾಲ್ಮೀಕಿ ನಿಗಮ ಹಣ ಹೋಗಿದೆ ಎನ್ನಲಾಗ್ತಿದೆ. ಸಿರಿಯಲ್ ನಂಬರ್ 77ನೇ ಅಕೌಂಟ್‌ಗೆ 10 ಲಕ್ಷ ವರ್ಗಾವಣೆ ಆಗಿದೆ. SIT ಲಿಸ್ಟ್ ಮಾಡಿರೋ ಸಿರಿಯಲ್ ನಂಬರ್ 77ನೇ ಅಕೌಂಟ್ ಇದಾಗಿದ್ದು, ಬಳ್ಳಾರಿಯ ಕೃಷ್ಣನಗರ ರೈತ ಶ್ರೀನಿವಾಸ ರಾವ್ ಅಕೌಂಟ್‌ಗೂ ಹಣ ಹೋಗಿದೆಯಂತೆ. ಅಲ್ಲದೇ ಅಕೌಂಟ್‌ಗೆ(Account) ಹಣ ಬಂದಿರೋದು ಗೊತ್ತು ಎಂದು ಶ್ರೀನಿವಾಸ ರಾವ್ ಹೇಳಿದ್ದಾರೆ. ವರ್ಗಾವಣೆ ಆದ ಹಣ ವಾಲ್ಮೀಕಿ ನಿಮಗದ ಹಣವೆಂದು ಗೊತ್ತಿಲ್ಲವಂತೆ. ಸ್ನೇಹಿತರೊಬ್ಬರಿಗೆ ಸಾಲ ನೀಡಿದ್ದೇ ಅಕೌಂಟ್‌ಗೆ ಹಣ ಹಾಕಿದ್ದಾರೆ . ಈ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಶ್ರೀನಿವಾಸ ರಾವ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆರ್ಭಟ: ಜೀವನದಿ ಕಾವೇರಿಗೆ ಮತ್ತೆ ಬಂತು ಜೀವಕಳೆ