ಗ್ಯಾಂಗ್ರೀನ್‌ನಿಂದ 2 ಕಾಲು ಇಲ್ಲ, ಚಿಕಿತ್ಸೆಗೆ ಬೇಕು ಲಕ್ಷಾಂತರ ರೂ, ಶ್ರಮಜೀವಿಗೆ ಬೇಕಾಗಿದೆ ನೆರವು
- ಗಂಭೀರ ಕಾಯಿಲೆಗಳಿದ್ದರೂ ಈಗಲೂ ಶ್ರಮಜೀವಿ
- ಆಗ ಲಾರಿ ಚಾಲಕ ವೃತ್ತಿ, ಈಗ ಹಂಚ್ತಾರೆ ಕರಪತ್ರ
- ಸಹಾಯದ ನಿರೀಕ್ಷೆಯಲ್ಲಿ ಬಡರೋಗಿ ವಿರೂಪಾಕ್ಷ ಕಟಗಿ
- ಗ್ಯಾಂಗ್ರೀನ್‌ನಿಂದ 2 ಕಾಲು ಕಳೆದುಕೊಂಡಿರುವ ವಿರೂಪಾಕ್ಷ
ಇವರ ಹೆಸರು ವಿರೂಪಾಕ್ಷ ಬಸಪ್ಪಾ ಕಟಗಿ, 47 ವರ್ಷ. ಉತ್ತರಕನ್ನಡ ಜಿಲ್ಲೆಯ ಶಿರಸಿ ಚೌಕಿಮಠ ರಸ್ತೆಯಲ್ಲಿರುವ ಟಿ.ವಿ. ಸ್ಟೇಷನ್ ಬಳಿಯಿರುವ ಮನೆಯ ನಿವಾಸಿ. ರತ್ನಾ ಕಟಗಿ ಹಾಗೂ ಬಸಪ್ಪ ಕಟಗಿಯವರ ಎರಡನೇ ಪುತ್ರನಾಗಿರುವ ವಿರೂಪಾಕ್ಷ, ಶ್ರಮಜೀವಿಯಾಗಿದ್ದರು. 1994ನೇ ಇಸವಿಯಲ್ಲಿ ಡ್ರೈವರ್ ವೃತ್ತಿಯನ್ನು ಪ್ರಾರಂಭಿಸಿದ ಇವರು, ತನ್ನ 32ನೇ ಪ್ರಾಯದಲ್ಲಿ ಸೊಂಟದ ನರದೌರ್ಬಲ್ಯದ ಸಮಸ್ಯೆ ಎದುರಿಸಿದ್ದರು. 2005ನೇ ಇಸವಿಯಲ್ಲಿ ಗ್ಯಾಂಗ್ರಿನ್‌ನಿಂದಾಗಿ ಒಂದು ಕಾಲು ಕಳೆದುಕೊಂಡರೂ ಕೃತಕ ಕಾಲು ಜೋಡಿಸಿಕೊಂಡು ತನ್ನ ಚಾಲಕ ವೃತ್ತಿ ಮುಂದುವರಿಸಿದ್ದರು.
ಉತ್ತರ ಕನ್ನಡ: ಮತ್ತೆ ಶುರುವಾಗಿದೆ ಗುಡ್ಡ ಕುಸಿತದ ಆತಂಕ, ಈ ಬಾರಿ 5 ಕಡೆ ಗುಡ್ಡ ಕುಸಿತ ಪಕ್ಕಾ!
2011ನೇ ಇಸವಿಯಲ್ಲಿ ಮತ್ತೊಂದು ಕಾಲಿಗೆ ಗ್ಯಾಂಗ್ರಿನ್ ಆಗಿ ಎರಡನೇ ಕಾಲನ್ನು ಕೂಡಾ ಕಳೆದುಕೊಂಡರು. ವೃತ್ತಿ ಮಾಡಲಾಗದೆ, ಜೀವನಕ್ಕೆ ಆದಾಯವೂ ಇಲ್ಲದೇ, ಮನೆಯ ಮೂಲೆಯಲ್ಲಿ ಬಿದ್ದುಕೊಳ್ಳುವಂತಹ ಸ್ಥಿತಿ ಇವರದ್ದಾಗಿತ್ತು. ಒಂದು ವರ್ಷದ ಬಳಿಕ ಕಿಡ್ನಿ ಕೂಡಾ ಫೇಲಾಗಿದ್ದರಿಂದ ಹಣದ ಕೊರತೆಯಿಂದ ಡಯಾಲಿಸಿಸ್ ಕೂಡಾ ಮಾಡಲಾಗದೆ, ತೀವ್ರ ಸಂಕಷ್ಟದಲ್ಲಿದ್ದಾಗ ಪ್ಯಾಂಪ್ಲೆಟ್ ಹಂಚುವ ಕೆಲಸ ಪ್ರಾರಂಭಿಸಿದ್ದರು. ಜನರು ನೀಡಿದ ಧನ ಸಹಾಯದಿಂದ ಶಿರಸಿಯ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸುತ್ತಿದ್ದರು. ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ಪ್ರಾರಂಭಿಸಿದ್ದರಿಂದ ಸುಮಾರು 5 ವರ್ಷಗಳ ಕಾಲ ಸರಕಾರಿ ಆಸ್ಪತ್ರೆಯಲ್ಲೇ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.
ಕಾರವಾರ: ಹಾಳು ಕೊಂಪೆಯಂತಾಗಿದೆ ಹೊನ್ನಾವರದ ಸಬ್ ರಿಜಿಸ್ಟ್ರಾರ್ ಕಚೇರಿ
ಆದರೆ, ಕೆಲವು ತಿಂಗಳಿನಿಂದ ಈ ವ್ಯಕ್ತಿಗೆ ಲಿವರ್ ಇನ್ಫೆಕ್ಷನ್ ಕೂಡಾ ಪ್ರಾರಂಭವಾಗಿರೋದ್ರಿಂದ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೂಡಾ ಮಾಡಲಾಗುತ್ತಿಲ್ಲ. ಲಿವರ್ ಇನ್ಫೆಕ್ಷನ್ ಇರುವ ವ್ಯಕ್ತಿಗಳಿಗೆ ಡಯಾಲಿಸಿಸ್ ಮಷಿನ್ ಪ್ರತ್ಯೇಕವಾಗಿರಬೇಕಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲೇ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಸದ್ಯ ಹೊಟ್ಟೆಪಾಡಿಗಾಗಿ ವಿರೂಪಾಕ್ಷ ಅವರು ತನ್ನ ಅಣ್ಣ ರಿಕ್ಷಾ ಚಾಲಕ ರಾಚಪ್ಪ ಅವರನ್ನೇ ಅವಲಂಬಿಸಿದ್ದು, ಅವರು ದುಡಿದು ತಂದು ಮನೆಗೆ ಹಾಕುವುದರಲ್ಲೇ ವಿರೂಪಾಕ್ಷ ಕೂಡಾ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ದಿನಾ ಬೆಳಗಾದ್ರೆ ಸಾಕು ತೆವಳುತ್ತಾ ಸಾಗಿ ತನ್ನ ಮೂರು ಚಕ್ರದ ವಾಹನ ಹತ್ತಿ ಹೊರಟು ರಸ್ತೆಯಲ್ಲಿ ಸಿಗುವವರಿಗೆಲ್ಲಾ ತನಗೆ ಸಹಾಯ ಮಾಡುವಂತೆ ಪ್ಯಾಂಪ್ಲೆಟ್ ಹಂಚುತ್ತಾ ಯಾರಾದ್ರೂ ಹಣ ನೀಡಿದಲ್ಲಿ ಅದನ್ನು ಒಟ್ಟುಗೂಡಿಸಿಕೊಂಡು ಡಯಾಲಿಸಿಸ್ ಮಾಡಿಸಿಕೊಂಡು ಬರುತ್ತಿದ್ದಾರೆ. ವಿರೂಪಾಕ್ಷ ಅವರ ಸ್ಥಿತಿ ಹೀಗಿದ್ದರೆ ಅವರ ತಾಯಿ ರತ್ನಾ ಕೂಡಾ ಆರೋಗ್ಯ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿದ್ದಾರೆ.
ಖಾಸಗಿ ಆಸ್ಪತ್ರೆ ಮೀರಿಸುವ ಭಟ್ಕಳ ತಾಲುಕಿನ ಸರ್ಕಾರಿ ಆಸ್ಪತ್ರೆ...!
ಹಲವು ರೀತಿಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿರೂಪಾಕ್ಷ ಕಟಗಿ ತಾನು ಜೀವಿಸಲು ಇದೀಗ ದಾನಿಗಳ ಮುಂದೆ ಮೊರೆಯಿಡುತ್ತಿದ್ದಾರೆ. ಕೆಲವು ತಿಂಗಳ ಕಾಲವಾದ್ರೂ ಔಷಧಿ ಪಡೆದು ಜೀವಿಸಲು ಸಹಾಯ ಮಾಡಿ ಎಂದು ಎಲ್ಲರ ಮುಂದೆ ಮನವಿ ಮಾಡುತ್ತಿದ್ದಾರೆ. ವಿರೂಪಾಕ್ಷ ಕಟಗಿ ಅವರಿಗೆ ಸಹಾಯ ಮಾಡಲಿಚ್ಛಿಸುವ ದಾನಿಗಳು ಈ ಮೂಲಕ ಸಹಾಯ ಮಾಡಬಹುದು.
Canara Bank
A/c No: 03032250021930
IFSC Code: CNRB0010303
MICR Code: 581025103
Phone Pay: 7338211083