ಕಾರವಾರ: ಟೋಲ್‌ಗೇಟ್ ಬಳಿ ಬೀಡು, ತಾಯಿಯ ಕೊಂದವರ ಮೇಲೆ ಶ್ವಾನದ ಸೇಡು!
ಅಂಕೋಲಾ (Ankola) ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಬೀಡು ಬಿಟ್ಟಿರುವ ಶ್ವಾನವೊಂದು (Dog) ದಿನಾಲೂ ಬೆಳಗ್ಗೆಯಿಂದ ರಾತ್ರಿಯವರೆಗೆ ತನ್ನ ತಾಯಿಯನ್ನು ಕೊಂದವರ ಮೇಲೆ ಸೇಡು ತೀರಿಸಲು ಹವಣಿಸುತ್ತಿದೆ.
ಉತ್ತರ ಕನ್ನಡ (ಮೇ.14): ಅಂಕೋಲಾ (Ankola) ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಬೀಡು ಬಿಟ್ಟಿರುವ ಶ್ವಾನವೊಂದು (Dog) ದಿನಾಲೂ ಬೆಳಗ್ಗೆಯಿಂದ ರಾತ್ರಿಯವರೆಗೆ ತನ್ನ ತಾಯಿಯನ್ನು ಕೊಂದವರ ಮೇಲೆ ಸೇಡು ತೀರಿಸಲು ಹವಣಿಸುತ್ತಿದೆ. ಅಲ್ಲದೇ, ಅದಕ್ಕೆ ಕಾರಣವಾದ ಸಂಬಂಧಿಸಿದ ವಾಹನಗಳನ್ನು ಕಂಡ ಕೂಡಲೇ ಬೆನ್ನಟ್ಟಿಕೊಂಡು ಹೋಗುತ್ತದೆ.
Uttara Kannada ಸಹಾಯದ ನಿರೀಕ್ಷೆಯಲ್ಲಿ ವಿರೂಪಾಕ್ಷ ಕಟಗಿ
ಕಳೆದ ಒಂದು ವರ್ಷದ ಹಿಂದೆ ಈ ನಾಯಿಯ (Dog) ತಾಯಿ ತನ್ನ ಮರಿಗಳಿಗೆ ಹಾಲುಣಿಸುವ ಸಂದರ್ಭದಲ್ಲಿ ವಿಐಪಿ ಲೇನ್ (VIP lane) ನಿಂದ ಬಂದ ಅಂಬ್ಯುಲೆನ್ಸ್ ಗೆ (Ambulence) ಸಿಕ್ಕಿ ಸಾವಿಗೀಡಾಗಿತ್ತು. ಆದರೆ, ಆ ಅಪಘಾತದಲ್ಲಿ ಈ ಗಂಡು ನಾಯಿ ಬದುಕುಳಿದಿತ್ತು. ಈಗ ತಾಯಿಯ ಸಾವಿನ ಸೇಡು ತೀರಿಸಿಕೊಳ್ಳಲು ಈ ಮರಿ ಶ್ವಾನ ಕಾಯುತ್ತಿದೆ. ಸೈರನ್ ಹಾಕಿ ವಿಐಪಿ ಲೇನ್ ನಿಂದ ಬರುವ ಎಲ್ಲಾ ಆ್ಯಂಬ್ಯುಲೆನ್ಸ್ ವಾಹನಗಳು ಮಾತ್ರವಲ್ಲದೇ, ಪೋಲಿಸ್ ವಾಹನಗಳನ್ನೂ ಅಡ್ಡಗಟ್ಟುವ ನಾಯಿ, ಅವುಗಳ ಮೇಲೆ ಎರಗಲು ಪ್ರಾರಂಭಿಸುತ್ತದೆ.
ಈ ನಾಯಿಯ ಕಿವಿಗೆ ಸೈರನ್ ಶಬ್ದ ಬೀಳುತ್ತಿದ್ದಂತೆ ಎಲ್ಲೇ ಇದ್ರು ಓಡೋಡಿ ಬಂದು, ವಿಐಪಿ ಲೇನ್ ನಿಂದ ಸೈರನ್ ಹಾಕಿ ಬರುವ ವಾಹನಗಳ ಮೇಲೆ ಮಾತ್ರ ದಾಳಿ ಮಾಡುತ್ತದೆ. ತಾಯಿಯ ಸಾವನ್ನು ಕಣ್ಣಾರೆ ಕಂಡಿದ್ದ ಮರಿ ನಾಯಿಯಿಂದ ಪ್ರತೀಕಾರದ ಪ್ರಯತ್ನ ಮುಂದುವರಿದಿದ್ದು, ಆ್ಯಂಬ್ಯುಲೆನ್ಸ್ ವಾಹನಗಳಿಗೆ ಅಡ್ಡಗಟ್ಟಿ ತನ್ನ ಸೇಡಿನ ಪ್ರತೀಕಾರಕ್ಕೆ ಹವಣಿಸುತ್ತಿದೆ. ತಾಯಿ ನಾಯಿ ಸಾವು ಕಂಡ ಸಂದರ್ಭದಲ್ಲಿ ಈ ಮರಿ ನಾಯಿಗೆ ಅನ್ನ ನೀರು ನೀಡಿ ಪೋಷಿಸಿದ್ದು ಟೋಲ್ ಸಿಬ್ಬಂದಿ. ಈ ಕಾರಣದಿಂದ ಅಂಕೋಲಾ ಹಟ್ಟಿಕೇರಿ ಟೋಲ್ ಸಿಬ್ಬಂದಿಯ ಜತೆ ಈ ನಾಯಿ ಅನೋನ್ಯವಾಗಿದೆ. ಆದರೆ, ಕಳೆದ ಏಳೆಂಟು ತಿಂಗಳಿಂದ ನಾಯಿ ದೊಡ್ಡದಾಗುತ್ತ ಬರುತ್ತಿದ್ದಂತೇ ನಾಯಿಯಲ್ಲಿ ಸೇಡು ಕಾಣಿಸಿಕೊಂಡಿದ್ದು, ಈಗಲೂ ಆ್ಯಂಬುಲೆನ್ಸ್ ಹಾಗೂ ಪೊಲೀಸ್ ವಾಹನಗಳನ್ನು ಕಂಡ ಕೂಡಲೇ ಓಡಿಸಿಕೊಂಡು ಹೋಗುತ್ತಾ ತನ್ನ ಪ್ರತೀಕಾರ ತೀರಿಸಲು ಕಾಯುತ್ತಿದೆ.
ಪಾರ್ಶ್ವವಾಯುವಿಗೆ ಆಯುರ್ವೇದ ರಾಮಬಾಣ, 200 ವರ್ಷಗಳಿಂದ ಚಿಕಿತ್ಸೆ ನೀಡುತ್ತಿರುವ ಕುಟುಂಬ!
ಒಟ್ಟಿನಲ್ಲಿ ಪ್ರತೀಕಾರದ ಹೊಗೆ ಕೇವಲ ಮನುಷ್ಯ ಪ್ರಪಂಚದಲ್ಲಿ ಮಾತ್ರವಲ್ಲದೇ, ಪ್ರಾಣಿ ಪ್ರಪಂಚದಲ್ಲೂ ಭರ್ಜರಿಯಾಗಿ ಆಡುತ್ತದೆ ಅನ್ನೋದಕ್ಕೆ ಅಂಕೋಲಾ ಹಟ್ಟಿಕೇರಿಯ ಈ ಘಟನೆಯೇ ಸಾಕ್ಷಿಯಾಗಿದೆ. ತಾಯಿಯ ಸಾವಿನ ಸೇಡು ತೀರಿಸಿಕೊಳ್ಳಲು ಹವಣಿಸಿಕೊಳ್ಳುತ್ತಿರುವ ಈ ನಾಯಿ ಇಷ್ಟು ದಿನಗಳ ಕಾಲ ಪಟ್ಟ ನೋವು ಯಾರಿಂದಲೂ ಅರ್ಥಮಾಡಿಕೊಳ್ಳಲೂ ಸಾಧ್ಯವಿಲ್ಲ ಅನ್ನೋದಂತೂ ನಿಜ.