ಶಿವ ದೇವಾಲಯಕ್ಕೆ ಸೇತುವೆ ವ್ಯವಸ್ಥೆಗೆ ಆಗ್ರಹ

  • ಶಿವನ ರುದ್ರಾಕ್ಷಿ ರೂಪದ ಉದ್ಭವ ಲಿಂಗವಿರುವ ಗುಹಾ ದೇವಸ್ಥಾನ
  • ಇಲ್ಲಿನ ಶಿವಲಿಂಗ ಕೊಂಚ ಕೊಂಚವೇ ಬೆಳೆಯುತ್ತಿದೆ ಅನ್ನೋದು ನಂಬಿಕೆ
  • ಪ್ರತೀ ಶಿವರಾತ್ರಿಯಂದು ಇಲ್ಲಿ ನಡೆಯುತ್ತೆ ಸಂಭ್ರಮದ  ಜಾತ್ರೋತ್ಸವ 
  • ಪ್ರವಾಹದಿಂದ ಕೊಚ್ಚಿ ಹೋಗಿದೆ ಸಂಪರ್ಕ ಸೇತುವೆ; ಭಕ್ತರ ಪರದಾಟ
First Published Oct 21, 2021, 4:13 PM IST | Last Updated Oct 21, 2021, 4:13 PM IST

ಉತ್ತರ ಕನ್ನಡ(ಅ.21): ಅದು ಶಿವನ ರುದ್ರಾಕ್ಷಿ ರೂಪದ ಉದ್ಭವ ಲಿಂಗವಿರುವ ಗುಹಾ ದೇವಸ್ಥಾನ. ಇಲ್ಲಿನ ಶಿವಲಿಂಗ ಕೊಂಚ ಕೊಂಚವೇ ಬೆಳೆಯುತ್ತಿದೆ ಅನ್ನೋದು ಊರಿನ ಜನರ ನಂಬಿಕೆ. ಪ್ರತೀ ಶಿವರಾತ್ರಿಯಂದು ಇಲ್ಲಿ ಸಂಭ್ರಮದ  ಜಾತ್ರೋತ್ಸವ ನಡೆಯುತ್ತಿದ್ದು, ಊರ-ಪರವೂರ ಲಕ್ಷಾಂತರ ಭಕ್ತಾಧಿಗಳು ಕ್ಷೇತ್ರಕ್ಕೆ ಬಂದು ಶಿವನ ದರ್ಶನ ಪಡೆಯುತ್ತಾರೆ.

ಚಿತ್ರದುರ್ಗ: ಫ್ಯಾಶನ್‌ಶೋದಲ್ಲಿ ಮಿಂಚಿದ ಶ್ವಾನಗಳು..!

ಆದರೆ, ಕಳೆದ ಬಾರಿ ಕಾಣಿಸಿಕೊಂಡ ಭಾರೀ ಪ್ರವಾಹವು ಈ ಕ್ಷೇತ್ರಕ್ಕೆ ಸಂಪರ್ಕಿಸುತ್ತಿದ್ದ ಸೇತುವೆಯನ್ನೇ ಕೊಚ್ಚಿಕೊಂಡು ಹೋಗಿದೆ. ಭಾರೀ ವೇಗದಲ್ಲಿ ಹರಿಯುತ್ತಿರುವ ಹಳ್ಳದಿಂದಾಗಿ ಜನರಿಗೆ ಇದೀಗ ದೇವಸ್ಥಾನಕ್ಕೆ ತೆರಳಲು ಅಸಾಧ್ಯವಾದಂತಾಗಿದೆ. ಈ ಕಾರಣದಿಂದ ಸೇತುವೆ ನಿರ್ಮಾಣ ಮಾಡಿಕೊಡಬೇಕೆಂದು ಜನರು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.