Asianet Suvarna News Asianet Suvarna News

ಸಂಸದ ನಳಿನ್ ಆಯ್ತು, ಈಗ ಶಾಸಕ ಖಾದರ್ ಸಿಕ್ಕಾಪಟ್ಟೆ ಟ್ರೋಲ್..! ಕಾಮೆಡಿ ವಿಡಿಯೋ ವೈರಲ್

ಸಿಕ್ಕಾಪಟ್ಟೆ ಟ್ರೋಲ್ ಆಗಿ ಕೊನೆಗೂ ಉದ್ಘಾಟನೆಯಾದ ಮಂಗಳೂರು ಫ್ಲೈ ಓವರ್ ನಂತರ ಇದೀಗ ಮಂಗಳೂರಿನಲ್ಲಿ ಇನ್ನೊಂದು ಟ್ರೋಲ್ ಸೌಂಡ್ ಮಾಡ್ತಿದೆ.

ಮಂಗಳೂರು(ಫೆ.08): ಸಿಕ್ಕಾಪಟ್ಟೆ ಟ್ರೋಲ್ ಆಗಿ ಕೊನೆಗೂ ಉದ್ಘಾಟನೆಯಾದ ಮಂಗಳೂರು ಫ್ಲೈ ಓವರ್ ನಂತರ ಇದೀಗ ಮಂಗಳೂರಿನಲ್ಲಿ ಇನ್ನೊಂದು ಟ್ರೋಲ್ ಸೌಂಡ್ ಮಾಡ್ತಿದೆ. ಪಂಪ್‌ವೆಲ್‌ ಫ್ಲೈ ಓವರ್ ಟ್ರೋಲ್ ಮಾಡಿದ್ದ ಧನರಾಜ್ ಆಚಾರ್ ಎಂಬವರೇ ಯು. ಟಿ. ಖಾದರ್ ಅವರನ್ನೂ ಟ್ರೋಲ್ ಮಾಡಿದ್ದಾರೆ. ಟಿಕ್‌ಟಾಕ್‌ ವಿಡಿಯೋ ಮೂಲಕ ಪಂಪ್‌ವೆಲ್‌ ಫ್ಲೈಓವರ್ ಟ್ರೋಲ್ ಮಾಡಿದ್ದು, ಇದೀದ ಅದಕ್ಕೆ ಸಂಬಂಧಿಸಿದಂತೆ ಯು.ಟಿ. ಖಾದರ್ ಅವರನ್ನೂ ಟ್ರೋಲ್ ಮಾಡಲಾಗಿದೆ.

ಟ್ರೋಲಿಗರನ್ನು ಅಭಿನಂದಿಸಿದ ಸಂಸದ ನಳಿನ್

ಫೇಸ್‌ಬುಕ್‌ ಸೇರಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿರೋ ಈ ಟ್ರೋಲ್ ವಿಡಿಯೋ ಬಗ್ಗೆ ವ್ಯಾಪಕ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಕರಾವಳಿಯಲ್ಲಿ ಸೌಂಡ್ ಮಾಡಿದ್ದ ಪಂಪ್‌ವೆಲ್‌ ಹಾಗೂ ಸಂಸದ ನಳಿನ್ ಕುಮಾರ್ ಟ್ರೋಲ್ ನಂತರ ಇದೀಗ ಯು. ಟಿ. ಖಾದರ್ ಟ್ರೋಲಿಗರಿಗೆ ಗುರಿಯಾಗಿದ್ದಾರೆ.

ಫೆಬ್ರವರಿ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories