Asianet Suvarna News Asianet Suvarna News

ಅಪರೂಪದ ವಿಡಿಯೋ: ನವಿಲನ್ನು ಎದುರು ಹಾಕಿಕೊಂಡ ಹುಂಜ! ಮುಂದೆ ನಡೆದದ್ದು ಬಿಗ್‌ ಫೈಟ್

  • ಟಗರು ಫೈಟ್, ಬುಲ್ ಫೈಟ್, ಕೋಳಿ ಕಾಳಗ, ಹಾವು-ಮುಂಗುಸಿ ಕಾದಾಟ ನೋಡಿರ್ತೀರಿ. ಆದರೆ ವಯ್ಯಾರಕ್ಕೆ ಹೆಸರಾದ ನವಿಲಿನ ಕಾಳಗ ನೋಡಿದೀರಾ? ಕೇಳಿದೀರಾ? 
  • ಉಡುಪಿಯಲ್ಲಿ ಒಂದು ವಿಚಿತ್ರ ಕುಕ್ಕುಟ ಫೈಟ್ ನಡೆದಿದೆ. ಸ್ವತ ನವಿಲೇ ಫೈಟ್‌ಗೆ ಇಳಿದಿದೆ! ಅದೂ ತನ್ನ ಸರಿಸಮರ ಜೊತೆಗಲ್ಲ. ಕೋಳಿ‌ ಜೊತೆ ಕಾಳಗ ಮಾಡ್ತಿದೆ. 
  • ಕುಂದಾಪುರ ಭಾಗದ ವ್ಯಕ್ತಿಯೊಬ್ಬರ‌ ಮನೆ‌ ಮುಂದೆ ನಡೆದ ನವಿಲು ಕೋಳಿ ಕಾಳಗ 
     

ಉಡುಪಿ (ಜು. 22): ಈ ದೃಶ್ಯ ನೋಡಿದ್ರೆ ಆ ಗಾದೆ ನೆನಪಾಗುತ್ತೆ. ತಲೆ ಗಟ್ಟಿ ಇದೆ ಅಂತ ಬಂಡೆ ಜೊತೆಗೆ ಗುದ್ದಾಟ ಮಾಡಬಾರದು ಅಂತಾರಲ್ವಾ ಹಾಗಾಯ್ತು ಈ ಕೋಳಿ ಕಥೆ. ಇನ್ನೊಂದು ‌ಹುಂಜದ ಜೊತೆಗೆ ಕಾಲು ಕೆರೆದು‌ ಕಾದಾಡೊ ಬದಲು, ನವಿಲಿನ ಜೊತೆಗೆ ಫೈಟ್‌ಗಿಳಿದಿದೆ. 

ಗುಂಪು ಕಟ್ಟಿಕೊಂಡು‌ ಹೆಣ್ಣು  ಕೋಳಿಗೆ‌ ಗಿರಕಿ ಹೊಡೆದುಕೊಂಡು ಸುತ್ತಾಡುತ್ತಿದ್ದ ಹುಂಜಕ್ಕೂ ಬೋರ್ ಆಗಿರ್ಬೇಕು.  ಡೀಫರೆಂಟಾಗಿರ್ಲಿ ಅಂತ ಹುಂಜದ ಜೊತೆಗೆ ಫೈಟ್ ಮಾಡೊದು ಬಿಟ್ಟು ತನ್ನ ಶಕ್ತಿ ಪ್ರದರ್ಶನ ತೋರಿಸೊಕೆ ನವಿಲಿನ ಜೊತೆಗೆ 'ಕೈ-ಕೈ' ಮಿಲಾಯಿಸಿದೆ.  ಮಳೆ ಬಂದ್ರೆ ಗರಿಬಿಚ್ಚಿ ಕುಣಿದು ಹೆಣ್ಣು ನವಿಲುನ್ನು ರಮೀಸುವುದ್ರಲ್ಲಿ ಬಿಜಿಯಾಗುವ ಮಯೂರ ಕೂಡಾ, ನರ್ತನಸೇವೆ ಬಿಟ್ಟು ಕುಕ್ಕುಟದ ಜೊತೆಗೆ ‌ಕಾದಾಡುವುದರಲ್ಲಿ‌ ಮೈ ಮರೆತಿದೆ.

ಇದನ್ನೂ ನೋಡಿ | ರಸ್ತೆ ಮಧ್ಯೆ ಹಾವು - ಮುಂಗುಸಿ ಕಾಳಗ ನೋಡಿ ವಾಹನ ಸವಾರರು ಥ್ರಿಲ್..!...

ತನಗಿಂತ ಬಲಿಷ್ಠ ಗಾತ್ರದ ನವಿಲಿನ ಜೊತೆಗೆ ಕಾದಾಡಿದ ಹುಂಜನಿಗೆ ಕೆಲವರು ಶಹಬ್ಬಾಸ್ ಅಂದ್ರೆ.. ಹುಂಜನಿಗೆ ತಿಂದದ್ದು ಕೊಬ್ಬು ಅಂತಾ ಹಲವರು ಮೂಗುಮುರಿದಿದ್ದಾರೆ.

Video Top Stories