Traffic Rules ಬೈಕ್ ಚಾಲನೆ ವೇಳೆ ಮೊಬೈಲ್ ಬಳಸಿದ್ರೆ ಹುಷಾರ್..!
ಇನ್ಮುಂದೆ ವಾಹನ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸುವುದಿಲ್ಲ ಅದನ್ನು ಕಾನೂನು ಬದ್ಧವಾಗಿಸಲು ಕೆಂದ್ರ ಸರ್ಕಾರ ಮುಂದಾಗಿದೆ. ಇದರ ಮಧ್ಯೆ ಬೆಂಗಳೂರಿನಲ್ಲಿ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಗೆ ಟ್ರಾಫಿಕ್ ದಂಡ ಹೆಚ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.
ಬೆಂಗಳೂರು, (ಫೆ.17): ಇನ್ಮುಂದೆ ವಾಹನ ಚಾಲನೆ ವೇಳೆ ಮೊಬೈಲ್‌ನಲ್ಲಿ ಮಾತನಾಡಿದರೆ ಅಪರಾಧ ಎಂದು ಪರಿಗಣಿಸುವುದಿಲ್ಲ ಅದನ್ನು ಕಾನೂನು ಬದ್ಧವಾಗಿಸಲು ಕೆಂದ್ರ ಸರ್ಕಾರ ಮುಂದಾಗಿದೆ. ಹಾಗೆಂದ ಮಾತ್ರ ಫೋನ್ ಹಿಡಿದು ಮಾತನಾಡುತ್ತಾ ಹೋಗಬಹುದು ಎಂದು ಅರ್ಥವಲ್ಲ, ಬ್ಲೂಟೂಥ್ ಅಥವಾ ಹ್ಯಾಂಡ್‌ಫ್ರೀ ಮೊಬೈಲ್ ಮೂಲಕ ಮಾತನಾಡಬಹುದಾಗಿದೆ.
Bengaluru: ಗುತ್ತಿಗೆ ಆಧಾರದ ಟೋಯಿಂಗ್ ರದ್ದು ಕಷ್ಟಸಾಧ್ಯ: ಕಮಲ್ ಪಂತ್
ಲೋಕಸಭೆಯಲ್ಲಿ ಸಚಿವ ನಿತಿನ್ ಗಡ್ಕರಿಉ ಈ ಕುರಿತು ಮಾಹಿತಿ ನೀಡಿದ್ದು, ವಾಹನ ಚಲಾಯಿಸುವಾಗ ಒಂದು ವೇಳೆ ನಿಮ್ಮ ಬಳಿ ಮೊಬೈಲ್ ಇದ್ದರೆ, ಅದು ಹ್ಯಾಂಡ್‌ಫ್ರೀ ಸಾಧನಕ್ಕೆ ಸಂಪರ್ಕ ಹೊಂದಿದ್ದರೆ ಮಾತ್ರ ಮಾತನಾಡಲು ಅನುಮತಿ ನೀಡಲಾಗುತ್ತದೆ, ಅಲ್ಲದೇ ಮೊಬೈಲ್ ಅನ್ನು ಕಾರಿನಲ್ಲಿ ಇಡುವುದಕ್ಕಿಂತ ಹೆಚ್ಚಾಗಿ ಜೇಬಿನಲ್ಲಿ ಇಡಬೇಕು ಎಂದು ತಿಳಿಸಿದ್ದಾರೆ. ಇನ್ನು ಇತ್ತ ಬೆಂಗಳೂರಿನಲ್ಲಿ ಟಾಫಿಕ್ ಉಲ್ಲಂಘನೆ ದಂಡ ಹೆಚ್ಚಳ ಮಾಡಲಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಗೆ ಟ್ರಾಫಿಕ್ ದಂಡ ಹೆಚ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ.