ಮಲೆನಾಡಿನ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಲಗ್ಗೆ: ಟ್ರಾಫಿಕ್ ಜಾಮ್ ನಡುವೆಯೂ ಮಸ್ತ್ ಮಸ್ತ್ ಡ್ಯಾನ್ಸ್
ಚಿಕ್ಕಮಗಳೂರಿನ ಗಿರಿ ರಸ್ತೆ, ದತ್ತಪೀಠದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು,ಟ್ರಾಫಿಕ್ ಜಾಮ್ ನಡುವೆಯೂ ಪ್ರವಾಸಿಗರು ಎಂಜಾಯ್ ಮಾಡಿದ್ದಾರೆ.
ಚಿಕ್ಕಮಗಳೂರು: ಮಲೆನಾಡಿನ (Chikkamagaluru) ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದು, ರಾಜ್ಯದ ಅತ್ಯಂತ ಎತ್ತರ ಪ್ರದೇಶ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರು ಬರುತ್ತಿದ್ದಾರೆ. ಸಾವಿರಾರು ವಾಹನಗಳಲ್ಲಿ ಪ್ರವಾಸಿಗರು ಗಿರಿಪ್ರದೇಶಕ್ಕೆ ಲಗ್ಗೆ ಇಟ್ಟಿದ್ದಾರೆ. ರಾಜ್ಯ, ಹೊರ ರಾಜ್ಯಗಳಿಂದ ಪ್ರವಾಸಿಗರು(Tourists) ಬರುತ್ತಿದ್ದಾರೆ. ಟ್ರಾಫಿಕ್ ಜಾಮ್(Traffic jam) ನಡುವೆಯೂ ಪ್ರವಾಸಿಗರು ಎಂಜಾಯ್ ಮಾಡಿದ್ದಾರೆ. ಗಿರಿ ರಸ್ತೆ, ದತ್ತಪೀಠದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದೆ. ವಾಹನಗಳು ನಿಂತ ಕಡೆಯೇ ಕೆಳಗಿಳಿದು ಪ್ರವಾಸಿಗರು ಕುಣಿದು ಕುಪ್ಪಳಿಸುತ್ತಿದ್ದಾರೆ. ರಸ್ತೆಯಲ್ಲಿ ಡ್ಯಾನ್ಸ್(Dance) ಮಾಡುತ್ತಾ, ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ಕೇಕೆ ಹಾಕಿದ್ದಾರೆ. ನಿಂತಲ್ಲೇ ರೀಲ್ಸ್ ಮಾಡಿ ಎಂಜಾಯ್ ಮಾಡುತ್ತಾ, ಮುಂಗಾರಿನ ಸೌಂದರ್ಯವನ್ನು ಪ್ರವಾಸಿಗರು ಸವಿದಿದ್ದಾರೆ. ತಮಿಳುನಾಡು, ಕೇರಳ ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದು, ದಾರಿಯುದಕ್ಕೂ ಕುಣಿದು, ಸುರಿಯುವ ಮಳೆಗೆ ಮೈಯೊಡ್ಡಿ, ಮೋಡದ ರಾಶಿಯಕಡೆಗೆ ನೆಗೆದು ಕ್ಯಾಮೆರಾಗೆ ಫೋಸ್ ನೀಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: Fake Calls : ಸಿಲಿಕಾನ್ ಸಿಟಿ ಮಂದಿ ನಿದ್ದೆಗೆಡಿಸಿದ ಅಪರಿಚಿತ ಕರೆಗಳು: ಮುಂಬೈ, ದೆಹಲಿ ಪೊಲೀಸರಿಂದ ಕರೆ ಎಂದು ಹೇಳಿ ವಂಚನೆ!