
ವಲಸೆ ಕಾರ್ಮಿಕರ ದಂಡು: ಕಲಬುರಗಿ ಗಡಿಯಲ್ಲಿ ನೋಂದಣಿಗೆ ಮುಗಿಬಿದ್ದ ಜನರು
ಹೆಸರು ನೋಂದಣಿಗಾಗಿ ಮುಗಿಬಿದ್ದ ವಲಸೆ ಕಾರ್ಮಿಕರು| ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಹಿರೋಳಿ ಗಡಿಯಲ್ಲಿ ನಡೆದ ಘಟನೆ| ಲಾಕ್‌ಡೌನ್ ಆದೇಶ ಗಾಳಿಗೆ ತೂರಿದ ಜನರು|
ಕಲಬುರಗಿ(ಮೇ.21): ಸಾವಿರಾರು ಸಂಖ್ಯೆಯಲ್ಲಿರುವ ಕಾರ್ಮಿಕರು ನೋಂದಣಿಗಾಗಿ ಮುಗಿಬಿದ್ದ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಹಿರೋಳಿ ಗಡಿಯಲ್ಲಿ ಇಂದು(ಗುರುವಾರ) ನಡೆದಿದೆ. ಮುಂಬೈನಿಂದ ಕಲಬುರಗಿ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರಿಗೆ ಯಾರಿಗೂ ಕೊರೋನಾ ಭಯವೇ ಇಲ್ವೇನೋ ಎಂಬಂತೆ ವರ್ತಿಸುತ್ತಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ರಾಜ್ಯದಲ್ಲಿ ಕೊರೋನಾ ಬಾಂಬ್ ಸ್ಫೋಟ: ಒಂದೇ ದಿನ 116 ಪಾಸಿಟಿವ್ ಕೇಸ್..!
ಕಾರ್ಮಿಕರು ಯಾರೂ ಮಾಸ್ಕ್ ಧರಿಸಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಒಟ್ಟಿನಲ್ಲಿ ಇವರೆಲ್ಲರೂ ಸರ್ಕಾರದ ಲಾಕ್‌ಡೌನ್ ಆದೇಶಗಳನ್ನ ಗಾಳಿಗೆ ತೂರಿ ತಮ್ಮಿಷ್ಟದಂತೆ ವರ್ತಿಸುತ್ತಿದ್ದಾರೆ. ಇವರ ವರ್ತನೆಯಿಂದ ಆರೋಗ್ಯ ಇಲಾಖೆ ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ.