ಚಿನ್ನಾಭರಣ ಅಡವಿಟ್ಟು ಅಂಗನವಾಡಿ ಬಾಡಿಗೆ ಕಟ್ಟಿದ ಟೀಚರ್ಸ್‌ !

ಬೆಳಗಾವಿಯಲ್ಲಿ ಮಕ್ಕಳು, ಗರ್ಭಿಣಿಯರು, ಬಾಣಂತಿಯರ ಕಾಳಜಿ ತೋರುವ ನಮ್ಮ ಅಂಗನವಾಡಿ ‌ಟೀಚರ್ಸ್ ಬದುಕು ಶೋಚನೀಯವಾಗಿದೆ. 
 

First Published Aug 1, 2023, 1:17 PM IST | Last Updated Aug 1, 2023, 1:17 PM IST

ಇವರು ಈ ನಾಡಿನ, ದೇಶದ ಭವಿಷ್ಯವನ್ನ ರೂಪಿಸೋ ಮಕ್ಕಳ ಏಳಿಗೆಗಾಗಿ ಶ್ರಮಿಸ್ತಿರೋ ಅಂಗನವಾಡಿ ಕಾರ್ಯಕರ್ತೆಯರು(Anganwadi workers). ತಾಯಿ ಬಿಟ್ರೆ ಅಂಗನವಾಡಿ ಕಾರ್ಯಕರ್ತೆಯರು ಮೊದಲಿಗರಾಗಿರುತ್ತಾರೆ. ಇನ್ನೂ ಮಕ್ಕಳಿಗೆ ಮೊದಲ ಹಂತದ ಪಾಠದಿಂದ ಹಿಡಿದು ಮಕ್ಕಳ ಪೌಷ್ಟಿಕ ಆಹಾರ ನೀಡೋವರೆಗೆ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಸಿಕ್ಕಾಪಟ್ಟೆ ದೊ ಡ್ಡದಾಗಿರುತ್ತದೆ. ಆದ್ರೆ, ಬೇರೆ ಯಾರೆ ಆಗಿದ್ರೂ ಆ ರಿಸ್ಕ್ ತಮಗ್ಯಾಕೆ ಅಂತ ಕೈ ಚೆಲ್ತಿದ್ರು. ಈ ತಾಯುಂದಿರು ಮಾತ್ರ ಇಡೀ ಕರುನಾಡು ಮೆಚ್ಚುವಂತಹ ಕೆಲಸ ಮಾಡ್ತಿದೆ. ಅಷ್ಟಕ್ಕೂ ಇವರು ಮಾಡಿದ ಆ ಕೆಲಸ ಏನು ಗೊತ್ತಾ..? ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನವಾಡಿ (‌Anganwadi) ಮೂಲಕ‌ ಪೌಷ್ಟಿಕ ‌ಆಹಾರ ನೀಡುತ್ತಿದೆ. ರಾಜ್ಯದಲ್ಲಿ ‌20 ಸಾವಿರಕ್ಕೂ ಹೆಚ್ಚು ಅಂಗನವಾಡಿಗಳು ಬಾಡಿಗೆ(Rent)  ಕಟ್ಟಡದಲ್ಲಿ ‌ಕಾರ್ಯನಿರ್ವಹಿಸುತ್ತಿವೆ. ಸರ್ಕಾರ ನಿಗದಿತ‌ ಸಮಯದಲ್ಲಿ ‌ಬಾಡಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಬಾಡಿಗೆ ಕಟ್ಟೋಕೆ ತಮ್ಮ ಮಾಂಗಲ್ಯ ಸರವನ್ನ ಅಡವಿಟ್ಟು ಬಾಡಿಗೆ ಕಟ್ಟು ತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಬಾಲ್ಯ ವಿವಾಹ..ಗಂಡನ ಸಾವು..ಅಕ್ಕನ ಕಾರಣಕ್ಕೆ ತಮ್ಮನ ಕೊಲೆ..!