ಸುವರ್ಣ ನ್ಯೂಸ್‌ನಲ್ಲಿ ವರದಿಯಾಗ್ತಿದ್ದಂತೆ ಫೀಲ್ಡ್‌ಗೆ ಇಳಿದ ಜಿಲ್ಲಾಡಳಿತ: ಮಹಿಳಾ ಸಚಿವರೇ ಇಲ್ನೋಡಿ..!
ಅಂಗನವಾಡಿ ಬಾಡಿಕೆ ಕಟ್ಟಲು ಮಾಂಗಲ್ಯ ಸರವನ್ನು ಕಾರ್ಯಕರ್ತೆಯರು ಅಡವಿಟ್ಟ ವಿಷಯ ತಿಳಿಯುತ್ತಿದ್ದಂತೆ, ಜಿಲ್ಲಾಧಿಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ನಗರ ಹಾಗೂ ಗ್ರಾಮೀಣ ಸೇರಿ 5,331 ಅಂಗನವಾಡಿ (Anganwadi) ಕೇಂದ್ರಗಳಿವೆ. ಒಟ್ಟು 1,334 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ. ನಗರ ಪ್ರದೇಶಗಳಲ್ಲಿ 740 ಬಾಡಿಗೆ ಇವೆ. ಗ್ರಾಮೀಣ ಪ್ರದೇಶದಲ್ಲಿ 594 ಬಾಡಿಗೆ ಇವೆ. ಕೆಲವೊಂದು ಕಟ್ಟಡಗಳ ಬಾಡಿಗೆ ನಿಗದಿತ ಸಮಯದಲ್ಲಿ ಪಾವತಿ ಆಗ್ತಿದ್ರೆ, ಹಲವಾರು ಕಟ್ಟಡಗಳ ಬಾಡಿಗೆ ಬಿಡುಗಡೆ ಆಗ್ತಿಲ್ಲ. ಹೀಗಾಗಿ ಅಂಗನವಾಡಿ ಕಾರ್ಯಕರ್ತೆಯರು(Anganwadi workers) ತಮ್ಮ ಮಾಂಗಲ್ಯ ಸರವನ್ನು(Gold Chain) ಅಡವಿಟ್ಟು ಬಾಡಿಕೆಯನ್ನು ಕಟ್ಟಿದ್ದಾರೆ. ಅದೇ ಜಿಲ್ಲೆಯವರಾದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಈ ಬಗ್ಗೆ ಗಮನ ಹರಿಸಬೇಕಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಸುದ್ದಿಯನ್ನು ಬಿತ್ತರ ಮಾಡಲಾಗಿತ್ತು. ಇದೀಗ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅಖಾಡಕ್ಕಿಳಿದ್ದಾರೆ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಧಿಕಾರಿಗಳು ಅಂಗನವಾಡಿಗೆ ಧಾವಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಚಿನ್ನಾಭರಣ ಅಡವಿಟ್ಟು ಅಂಗನವಾಡಿ ಬಾಡಿಗೆ ಕಟ್ಟಿದ ಟೀಚರ್ಸ್ !