Asianet Suvarna News Asianet Suvarna News

Prajwal Revanna Case : ಜೆಡಿಎಸ್‌ನಿಂದ ಅಮಾನತು ಆಗ್ತಾರಾ ಪ್ರಜ್ವಲ್‌ ರೇವಣ್ಣ? ದೊಡ್ಡಗೌಡರಿಗೆ ಪತ್ರ ಬರೆದ ಶಾಸಕ

ಪ್ರಜ್ವಲ್ ರೇವಣ್ಣ ಅಮಾನತಿಗೆ ಆಗ್ರಹಿಸಿ ಗುರು ಮಿಠಕಲ್ ಶಾಸಕ ಶರಣಗೌಡ ಕಂದಕೂರು ಪತ್ರ ಬರೆದಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಮನವಿ ಮಾಡಲಾಗಿದ್ದು, ಕುಮಾರಸ್ವಾಮಿ, ಜಿ ಟಿ ದೇವೇಗೌಡರಿಗೂ ಕಂದಕೂರು ಪತ್ರ ಬರೆದಿದ್ದಾರೆ. 

ಸಂಸದ ಪ್ರಜ್ವಲ್ ರೇವಣ್ಣರದ್ದು (Prajwal Revanna)ಎನ್ನಲಾದ ವಿಡಿಯೋ ವೈರಲ್ ವಿಚಾರದ ಹಿನ್ನೆಲೆ ಸಂಸದ ಪ್ರಜ್ವಲ್ ರೇವಣ್ಣ ಅಮಾನತಿಗೆ ಆಗ್ರಹಿಸಿ ಗುರು ಮಿಠಕಲ್ ಶಾಸಕ ಶರಣಗೌಡ ಕಂದಕೂರು (Sharan Gouda Kandkur) ಪತ್ರ ಬರೆದಿದ್ದಾರೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ  (Devegowda) ಮನವಿ ಮಾಡಲಾಗಿದ್ದು, ಕುಮಾರಸ್ವಾಮಿ(Kumaraswamy), ಜಿ ಟಿ ದೇವೇಗೌಡರಿಗೂ (G T Devegowda) ಕಂದಕೂರು ಪತ್ರ ಬರೆದಿದ್ದಾರೆ. ಈ ವಿಡಿಯೋ ಪ್ರಕರಣ ಪಕ್ಷಕ್ಕೆ ಮುಜುಗರ ತಂದಿದೆ, ರಾಜ್ಯದಲ್ಲಿ ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಬೇಕಿದೆ, ಅಶ್ಲಿಲ ವಿಡಿಯೋ ಪ್ರಕರಣ ಚುನಾವಣೆ ಮೇಲೆ ಪ್ರಭಾವ ಬೀರಬಹುದು. ಸರ್ಕಾರ ಈ ಪ್ರಕರಣವನ್ನು ಎಸ್ ಐ ಟಿ ತನಿಖೆಗೆ ವಹಿಸಿದೆ. ಪ್ರಕರಣ ಇತ್ಯರ್ಥ ಆಗುವವರೆಗೂ ಪ್ರಜ್ವಲ್ ರನ್ನು ಅಮಾನತು ಮಾಡಿ ಎಂದು ಜೆಡಿಎಸ್ ನಾಯಕರಿಗೆ ಶಾಸಕ ಶರಣಗೌಡ ಕಂದಕೂರು ಪತ್ರ ಬರೆದಿದ್ದಾರೆ.

ಇದನ್ನೂ ವೀಕ್ಷಿಸಿ:  Prajwal Revanna: ಅಶ್ಲೀಲ ವಿಡಿಯೋ ಬಗ್ಗೆ ಎಸ್ಐಟಿ ತನಿಖೆ ಹೇಗಿರುತ್ತೆ? ಯಾವ ಯಾವ ಆಯಾಮಗಳಲ್ಲಿ ನಡೆಸಲಾಗುತ್ತೆ?

Video Top Stories