Prajwal Revanna: ಅಶ್ಲೀಲ ವಿಡಿಯೋ ಬಗ್ಗೆ ಎಸ್ಐಟಿ ತನಿಖೆ ಹೇಗಿರುತ್ತೆ? ಯಾವ ಯಾವ ಆಯಾಮಗಳಲ್ಲಿ ನಡೆಸಲಾಗುತ್ತೆ?

ವಿಡಿಯೋಗಳನ್ನ ಎಫ್ಎಸ್ಎಲ್ ಗೆ ರವಾನಿಸಲಿರೋ ಎಸ್ಐಟಿ
ವಿಡಿಯೋ ಅಸಲಿಯತ್ತು ಪತ್ತೆ ಹಚ್ಚಲು ಎಫ್ಎಸ್ಎಲ್‌ಗೆ ರವಾನೆ
ವಿಡಿಯೋ ಮಾಡಿದ ಮೊಬೈಲ್ ಕೂಡ ಎಫ್ಎಸ್ಎಲ್‌ಗೆ ರವಾನೆ

First Published Apr 29, 2024, 11:15 AM IST | Last Updated Apr 29, 2024, 11:16 AM IST

ಸಂಸದ ಪ್ರಜ್ವಲ್ ರೇವಣ್ಣರದ್ದು(Prajwal Revanna) ಎನ್ನಲಾದ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವ ಯಾವ ಆಯಾಮಗಳಲ್ಲಿ SIT ತನಿಖೆ ನಡೆಸುತ್ತೆ ಎಂಬ ಮಾಹಿತಿ ಇಲ್ಲಿದೆ. ಮೊದಲಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆಯಿಂದ ಎಸ್‌ಐಟಿ(SIT) ತಂಡ ಹೇಳಿಕೆ ಪಡೆಯಲಿದೆ. ಇನ್ನೂ ಯಾರಾದ್ರೂ ದೂರು ದಾಖಲಿಸಿದ್ರೆ ಅವರ ಹೇಳಿಕೆಯನ್ನು ಸಹ ದಾಖಲು ಮಾಡಿಕೊಳ್ಳಲಿದೆ. ಬಳಿಕ ಕೃತ್ಯ ನಡೆದ ಸ್ಥಳಗಳ ಪರಿಶೀಲನೆ ನಡೆಸಿ, ಮಹಜರನ್ನು ಎಸ್ಐಟಿ ತಂಡ ನಡೆಸಲಿದೆ. ಪ್ರಕರಣದಲ್ಲಿ ಬಹುಮುಖ್ಯ ಎವಿಡೆನ್ಸ್ ಮೊಬೈಲ್(Mobile) ಫೋನ್ ಆಗಿದ್ದು, ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಮೊಬೈಲ್ ಫೋನ್‌ನನ್ನು ಎಸ್ಐಟಿ ಪತ್ತೆ ಹಚ್ಚಲಿದೆ. ಮೊಬೈಲ್ ಫೋನ್ ಯಾರದ್ದು, ಯಾರ ಹೆಸರಲ್ಲಿದೆ. ಮೊಬೈಲ್ ನಲ್ಲಿ ಎಷ್ಟು ವಿಡಿಯೋ ಇವೆ..? ಎಷ್ಟು ದಿನಗಳಿಂದ ಇವೆ..? ಮೊಬೈಲ್ ನಲ್ಲಿರುವ ವಿಡಿಯೋಗಳು ಅಸಲಿನಾ..? ಎಡಿಟ್‌ ಮಾಡಲಾಗಿದೆಯಾ..? ಎಂಬ ಮಾಹಿತಿಯನ್ನು ಕಲೆ ಹಾಕಲಿದೆ. ಎಫ್ಎಸ್ಎಲ್ ರಿಪೋರ್ಟ್ ಬಂದ ಬಳಿಕ ಅಸಲಿ ತನಿಖೆ ಆರಂಭವಾಗಲಿದೆ.

ಇದನ್ನೂ ವೀಕ್ಷಿಸಿ:  ಶೋಷಿತ ವರ್ಗದ ದನಿಯಾಗಿದ್ದರು, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ: ಜಿ ಟಿ ದೇವೇಗೌಡ