Asianet Suvarna News Asianet Suvarna News

ರೂಬಿಕ್ಸ್ ಕ್ಯೂಬ್‌ನಲ್ಲಿ ವಿದ್ಯಾರ್ಥಿಗಳ ಗಿನ್ನಿಸ್ ರೆಕಾರ್ಡ್ : ಬ್ರಿಟನ್, ಕಜಕಿಸ್ತಾನ ದಾಖಲೆ ಮುರಿದ ಉಡುಪಿ ವಿದ್ಯಾರ್ಥಿಗಳು

ರೂಬಿಕ್ ಕ್ಯೂಬ್ ಜೋಡಣೆ ಬರೀ ಒಂದು ಆಟ ಅಲ್ಲ. ಅದೊಂದು ಕ್ರೇಜ್. ಮನಸ್ಸನ್ನು ಏಕಾಗ್ರತೆ ಮಾಡಲು ಇರುವ ವಿಶೇಷ ಸಾಧನ. ಸಾವಿರಾರು ಕ್ಯೂಬ್ಸ್ ಗಳನ್ನು ಸಾವಿರಾರು ಕ್ಯೂಬ್ ಬಳಸಿ ಉಡುಪಿಯಲ್ಲಿ ಎರಡು ವಿಶ್ವದಾಖಲೆ ಮಾಡಲಾಗಿದೆ. ಯುಕೆ ಮತ್ತು ಕಜಕಿಸ್ತಾನದ ದಾಖಲೆ ಮುರಿದಿದ್ದಾರೆ.
 

ಗಿನ್ನಿಸ್ ರೆಕಾರ್ಡ್ಗಾಗಿ ಜನ ಏನೇನೋ ಸಾಹಸಗಳನ್ನು ಮಾಡುತ್ತಾರೆ. ಉಡುಪಿ(Udupi) ಜಿಲ್ಲೆಯ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ( Sri Siddhivinayak Residential School) ವಿದ್ಯಾರ್ಥಿಗಳು ರುಬಿಕ್ಸ್ ಕ್ಯೂಬ್(Rubik Cube) ಮೂಲಕ ಎರಡು ಗಿನ್ನಸ್ ದಾಖಲೆ ಮಾಡಿದ್ದಾರೆ.ಈ ಬ್ರಿಟನ್ ಮತ್ತು ಕಜಕಿಸ್ತಾನದ ದಾಖಲೆ ಮುರಿದಿದ್ದಾರೆ. ರೂಬಿಕ್ಸ್‌ನ ಒಂದು ಬದಿಯಲ್ಲಿ ಭಾರತದ ಹಾಕಿ  ಮೇಜರ್ ಧ್ಯಾನ್ ಚಂದ್, ಕ್ಯೂಬ್ ಹಿಂಬದಿಯಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ‌.ವಿ. ಸಿಂಧು  ಚಿತ್ರ ರಚಿಸಿ ದಾಖಲೆ ಪುಸ್ತಕ ಸೇರಿದ್ದಾರೆ. ಕಜಕಿಸ್ತಾನದ ಝೆಂಗಿಸ್ ಐಟ್ಜಾನೋವ್ 5,100 ಕ್ಯೂಬ್ ಗಳೊಂದಿಗೆ 15.878 ಚದರ ಮೀಟರ್ ಅಳತೆಯ ರುಬಿಕ್ಸ್ ಕ್ಯುಬ್ ಮೊಸಾಯಿಕ್ ಮೂಲಕ ಗಿನ್ನಿಸ್ ದಾಖಲೆ(Guinness World Record) ಮಾಡಿದ್ದರು. ಹಟ್ಟಿಯಂಗಡಿ ಶಾಲೆಯ 50 ಮಕ್ಕಳು 6 ಸಾವಿರ ರೂಬಿಕ್ಸ್ ಕ್ಯುಬ್ ಬಳಸಿ ಚಿತ್ರ ರಚನೆ ಮಾಡಿ ಕಜಕಿಸ್ತಾನ ದಾಖಲೆ ಮುರಿದ್ದಾರೆ. ಇನ್ನು ರೂಬಿಕ್ಸ್ ಬ್ರಾಂಡ್ ಲಿಮಿಟೆಡ್ ಬ್ರಿಟನ್ನಲ್ಲಿ 308 ಜನರು ಸೇರಿ ನಿರ್ಮಿಸಿದ್ದ ದಾಖಲೆಯನ್ನು 1,228 ವಿದ್ಯಾರ್ಥಿಗಳು ಸೇರಿ  ಮುರಿದ್ದಾರೆ. ಶಾಲೆಯ ಸಂಸ್ಥಾಪಕ ವೇದಮೂರ್ತಿ ರಾಮಚಂದ್ರ ಭಟ್ ಅವರ ರೂಬಿಕ್ಸ್ ಕ್ಯೂಬ್ನ ಮೊಸಾಯಿಕ್ ಚಿತ್ರ  ರಚಿಸುವ ಮೂಲಕ ಗೌರವ ಸಲ್ಲಿಕೆ ಮಾಡಿದ್ದಾರೆ. ಗಿನ್ನಿಸ್ ರೆಕಾರ್ಡ್ಗಾಗಿ ಬಳಸಿದ ಎಲ್ಲಾ  ರೂಬಿಕ್ಸ್ ಕ್ಯೂಬ್‌ಗಳನ್ನು ಸುತ್ತಮುತ್ತಲ ಕನ್ನಡ ಶಾಲೆಗಳಿಗೆ ವಿತರಣೆ ಮಾಡುವುದಾಗಿ ಸಂಸ್ಥೆ ಘೋಷಣೆ ಮಾಡಿದೆ. ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಮೈಸೂರು ಅಂಬಾರಿ ಹೊರುತ್ತಿದ್ದ ಅರ್ಜುನ ವೀರಮರಣ: ಕಾರ್ಯಾಚರಣೆ ವೇಳೆ ಜೀವ ತೆತ್ತ ಹಂಟರ್ ಸ್ಪೆಷಲಿಸ್ಟ್ !

Video Top Stories