Asianet Suvarna News Asianet Suvarna News

ಆರೋಗ್ಯ ಕ್ಷೇತ್ರಕ್ಕೆ ಡಿಜಿಟಲ್ ಸ್ಪರ್ಶ ಕೊಟ್ಟ ಸಚಿವರು: ನರ್ವ್ ಸೆಂಟರ್ ಆರಂಭ, ಫೋನ್‌ನಲ್ಲೇ ಸಿಗುತ್ತೆ ಆರೋಗ್ಯ !

ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಆರೋಗ್ಯ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿ ಮಾಡುತ್ತಿದೆ.ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡುವ ಉದ್ದೇಶದಿಂದ ರಾಜ್ಯದಲ್ಲೇ ಮೊದಲ ಬಾರಿ ನರ್ವ್‌ ಸೆಂಟರ್ ಪ್ರಾರಂಭವಾಗಿದ್ದು, ಫೋನ್‌ನಲ್ಲೇ ರೋಗಿಗೆ ತಕ್ಷಣ ಚಿಕಿತ್ಸೆ ನೀಡುವ ಕೇಂದ್ರವನ್ನ ಕೋಲಾರದಲ್ಲಿ ಉದ್ಘಾಟಿಸಲಾಗಿದೆ.
 

ಹೊರಗೆ ಯಾವುದೋ ಐಟಿ ಕಂಪನಿಯಂತೆ ಬಾಸವಾಗುವ ಕಚೇರಿ. ಹೆಲ್ಪ್ ಲೈನ್‌ನಲ್ಲಿ ರೋಗಿಗಳಿಗೆ ಮಾಹಿತಿ ನೀಡುತ್ತಿರುವ ಸಿಬ್ಬಂದಿ. ಆರೋಗ್ಯ ಸಿಬ್ಬಂದಿ ಕೆಲಸ ಮಾಡ್ತಿರೋದನ್ನ ನೋಡುತ್ತಿರುವ ಸಚಿವ ದಿನೇಶ್ ಗುಂಡೂರಾವ್(Dinesh Gundu Rao). ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಜನರ ಆರೋಗ್ಯ ಕಾಪಾಡೋಕು ಪಣ ತೊಟ್ಟಿದೆ. ಇದಕ್ಕೆ ಪುಷ್ಠಿ ನೀಡುವಂತೆ ದೇಶದಲ್ಲೇ ಮೊದಲ ಬಾರಿ ಅದರಲ್ಲೂ ಕೋಲಾರದಲ್ಲಿ ಹೊಸ ಡಿಜಿಟಲ್ ನರ್ವ್ ಸೆಂಟರ್(Nerve center) ಪ್ರಾರಂಭಿಸಲಾಗಿದೆ. 7ವರ್ಷಗಳ ಹಿಂದೆ ಆರೋಗ್ಯ ಇಲಾಖೆ ಹಾಗೂ ಟಾಟಾ ಮೆಮೋರಿಯಲ್ ಟ್ರಸ್ಟ್‌ ಸಹಯೋಗದಲ್ಲಿ ಪ್ರಾರಂಭವಾದ ಡಿಜಿಟಲ್ ನರ್ವ್ ಸೆಂಟರ್ ಅದ್ಭುತವಾಗಿ ಕೆಲಸ ಮಾಡುತ್ತಿದೆ. ಈ ನರ್ವ್‌ ಸೆಂಟರ್ ಹೇಗೆ ಕೆಲಸ ಮಾಡುತ್ತೆ ಅಂದ್ರೆ ಮನುಷ್ಯನ ನರ ವ್ಯೂಹದ ರೀತಿಯಲ್ಲಿ  ಕಾರ್ಯ ನಿರ್ವಹಿಸುತ್ತೆ. ಈ ಸೆಂಟರ್ ಜಿಲ್ಲೆಯ ಎಲ್ಲಾ ನಾಗರೀಕರ ಮಾಹಿತಿ ಹೊಂದಿರುತ್ತೆ. ಜೊತೆಗೆ ಯಾರಿಗೇ ಏನೇ ಆರೋಗ್ಯ(Health) ಸಮಸ್ಯೆ ಎದುರಾದ್ರೂ ಹೆಲ್ಫ್‌ಲೈನ್ ನಂಬರ್‌ಗೆ ಕರೆ ಮಾಡಿದ್ರೆ ತಕ್ಷಣ ಅನಾರೋಗ್ಯ ಪೀಡಿತರಿಗೆ ನುರಿತ ಸಿಬ್ಬಂದಿ ಮಾರ್ಗದರ್ಶನ ನೀಡ್ತಾರೆ. ಸ್ಥಳೀಯವಾಗಿ ಯಾವ ವೈದ್ಯರು ಸಿಗ್ತಾರೆ..ಆಂಬ್ಯುಲೆನ್ಸ್ ವ್ಯವಸ್ಥೆ ಸೇರಿ ಎಲ್ಲ ಮಾಹಿತಿ ನೀಡಲಾಗುತ್ತೆ. ಈ ಡಿಜಿಟಲ್ ಯೋಜನೆ ಕೋಲಾರದಲ್ಲಿದ್ದು ಇಡೀ ರಾಜ್ಯಕ್ಕೆ ವಿಸ್ತರಿಸಲು ಚಿಂತನೆ ನಡೆಯುತ್ತಿದೆ ಅಂತಾರೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್.ನರ್ವ್ ಸೆಂಟರ್‌ನಲ್ಲಿ ಕೇವಲ ತುರ್ತು ಸೇವೆಗಳಿಗಷ್ಟೇ ಅಲ್ಲ..ರೋಗಿಗಳ ಮೇಲೆ ನಿಗಾ ವಹಿಸ್ತಾರೆ. ಮಧುಮೇಹಿ,ಗರ್ಭಿಣಿ,ಕ್ಷಯಾ ರೋಗ ಪೀಡಿತರಿಗೆ ಪ್ರತಿ ವಾರಕ್ಕೊಮ್ಮೆ ಕರೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ.

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್‌ನಲ್ಲಿ 'ಗರಡಿ' ಘರ್ಜನೆ: ಕುಸ್ತಿ ಪೈಲ್ವಾನ್ ಆದ ಯಶಸ್ ಸೂರ್ಯ!

Video Top Stories